ಧ್ಯಾನಯೋಗದ ಕುರಿತು ಪ್ರವಚನ
ತಿಪಟೂರು: ನಗರದ ಚಿನ್ಮಯ ಮಿಷನ್ ವತಿಯಿಂದ ಗೀತಾ ಜ್ಞಾನ ಯಜ್ಞ ಭಗವದ್ಗೀತೆಯ 6ನೇ ಅಧ್ಯಾಯ, ಧ್ಯಾನಯೋಗದ ಕುರಿತು ಪ್ರವಚನವನ್ನು ಚಿನ್ಮಯ ಮಿಷನ್ ಪ್ರಮುಖರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಜು.26ರಿಂದ ಆ.1ರವರೆಗೆ ಆಯೋಜಿಸಲಾಗಿದೆ ಎಂದು ನಗರದ ಚಿನ್ಮಯ ಮಿಷನ್ ಸ್ವಾಮೀಜಿಯವರು ತಿಳಿಸಿದರು.
ನಗರದ ಎಂ.ವಿ.ಸೀತಾರಾಮಯ್ಯ ಶತಮಾನೋತ್ಸವ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ಭವನದಲ್ಲಿ ಜು.26ರಿಂದ ಆ.1ರವರೆಗೆ ಪ್ರತಿ ದಿನ ಸಂಜೆ 6.30ರಿಂದ 8ಗಂಟೆಯವರೆಗೆ ಧ್ಯಾನಯೋಗದಲ್ಲಿ ಬರುವ ಮುಖ್ಯ ವಿಷಯಗಳಾದ ಧ್ಯಾನಕ್ಕೆ ಪೂರ್ವ ಸಿದ್ದತೆ, ಧ್ಯಾನಕ್ಕೆ ಸೂಕ್ತ ಜಾಗ, ಸಮಯ, ಆಸನ, ದೇಹದಭಂಗಿ ಹಾಗೂ ಇಂದ್ರಿಯ, ಪ್ರಾಣ, ಮನಸ್ಸಿನ ಸಂಯಮ, ಮತ್ತಿತರ ವಿಷಯಗಳ ಬಗ್ಗೆ ಪ್ರವಚಗಲು ನಡೆಯಲಿವೆ. ಪ್ರತಿದಿನ ಭಜನ ಧಾರಾ ಕಾರ್ಯಕ್ರಮವಿರುತ್ತದೆ. ಜು.26ರಿಂದ ನಡೆಯುವ ಕಾರ್ಯಕ್ರಮಗಳಿಗೆ ಶ್ರೋತೃಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದು ಮನವಿ ಮಾಡಿದರು. ಚಿನ್ಮಯ ಮಿಷನ್ ಅಧ್ಯಕ್ಷೆ ಯಶೋಧಾ ರಮೇಶ್, ಕಾರ್ಯದರ್ಶಿ ಹೇಮಾ ಉಮಾಕಾಂತ, ಪ್ರಸಾದ್, ಸೇರಿದಂತೆ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.