ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವೈಜ್ಞಾನಿಕ ಆವಿಷ್ಕಾರದಿಂದ ರಾಷ್ಟ್ರಾಭಿವೃದ್ಧಿ

Srinivasa Murthy VN
Updated On : 26 Jul 2013, 12:48 pm

ರಾಮನಗರ: ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ವೈಜ್ಞಾನಿಕ ಆವಿಷ್ಕಾರಗಳು ಅತ್ಯವಶ್ಯಕ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು. ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಬೆಂಗಳೂರಿನ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಯೋಜನಾ ಸ್ಪರ್ಧೆಯನ್ನು (ಇನ್ಸ್ಪೈರ್ ಅವಾರ್ಡ್) ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕ ಮನೋಭಾವವನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ನಿಗದಿತ ಪಠ್ಯವನ್ನು ಬೋಧಿಸುವ ಜತೆಗೆ ವಿಜ್ಞಾನಿಗಳ ಜೀವನ ಚರಿತ್ರೆಗಳನ್ನು ತಿಳಿಸಬೇಕು ಎಂದು ಹೇಳಿದರು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಬೇಕು ಎಂದು ಡಿಡಿಪಿಐ ಪ್ರಹ್ಲಾದ್ಗೌಡ ಕರೆ ನೀಡಿದರು.  ಮುಖ್ಯ ತೀರ್ಪುಗಾರರಾಗಿ ವಿಜ್ಞಾನಿ ಡಾ.ಅಪ್ಪುರಾವ್, ಡಾ.ಎ.ಪಿ.ನಾಗೇಂದ್ರ, ವೈ.ನಾರಾಯಣ್, ತೀರ್ಪುಗಾರರಾಗಿ ಶಿಕ್ಷಕರಾದ ಎಸ್.ಬಿ.ಬಸವರಾಜಪ್ಪ, ಲಕ್ಷ್ಮಣಸ್ವಾಮಿ, ಬಿ.ವಿ.ರಾಮಚಂದ್ರಯ್ಯ, ಶಿವರುದ್ರಯ್ಯ, ಶೈಲಜಾ, ಪದ್ಮಾವತಿ, ಶಿವಲಿಂಗಯ್ಯ, ಗಿರೀಶ್, ನವೀನ್ ಭಾಗವಹಿಸಿದ್ದರು.  ಚನ್ನಪಟ್ಟಣದ ವಿದ್ಯಾರ್ಥಿಗಳು, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಕನಕಪುರದ ವಿದ್ಯಾರ್ಥಿಗಳು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ತಮ್ಮ ಯೋಜನೆಗಳ ಮಾದರಿಗಳನ್ನು ಪ್ರದರ್ಶಿಸಿದ್ದರು. ಡಯಟ್ನ ಪ್ರಾಂಶುಪಾಲೆ ಡಾ.ಬಿ.ಇಂದ್ರಾಣಿ, ಉಪಪ್ರಾಂಶುಪಾಲ ಸೋಮಶೇಖರಯ್ಯ, ಬಿಇಒಗಳಾದ ರಂಗಸ್ವಾಮಿ, ಶಿವಕುಮಾರ್, ರಾಜು, ಕಾಲೇಜಿನ ಪ್ರಾಂಶುಪಾಲ ಸಿರಾಜ್ ಉರ್ರೆಹಮಾನ್, ಉಪನ್ಯಾಸಕರಾದ ರಾಜಶೇಖರ್, ಭಾರತಿ, ರೂಪಲಕ್ಷ್ಮಿ, ನಾರಾಯಣ್, ಪಿ.ಸೋಮಲಿಂಗಯ್ಯ, ಸಿದ್ದರಾಜು ಮತ್ತಿತರರು ಭಾಗವಹಿಸಿದ್ದರು.

ಶಿಕ್ಷಕರಿಗೆ ಪುರಸ್ಕಾರ
ಸೂಲಿಬೆಲೆ:
ರಾಜ್ಯದ ಅನೇಕ ಶಾಲೆಗಳಿಂದ 12 ಶಿಕ್ಷಕರು ಶಿಕ್ಷಣ ಫೌಂಡೇಷನ್ ಸಂಸ್ಥೆಯ ಗುರು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಈ 12 ಜನ ಶಿಕ್ಷಕರಲ್ಲಿ ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿಹಿರಿಯ ಪ್ರಾಥಮಿಕ ಪಾಠಶಾಲೆ ಕುರುಬರಹಟ್ಟಿ ಶಾಲೆ ಶಿಕ್ಷಕಿ ಲೀಲಾವತಿ, ನಂದಗುಡಿ ಹೋಬಳಿ ಶಿವನಾಪುರ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿ ಪಲ್ಲವಿ ಗುರು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಆಯ್ಕೆಯಾದ 12 ಜನ ಶಿಕ್ಷಕರಲ್ಲಿ 3 ಜನಕ್ಕೆ ವಿದೇಶಿ ಪ್ರವಾಸ, 9 ಜನಕ್ಕೆ ಸ್ವದೇಶ ಪ್ರವಾಸದ ಭಾಗ್ಯವನ್ನು ಕಲ್ಪಿಸಿದೆ. ಗುರುಪುರಸ್ಕಾರ ಪಡೆದ ಶಿಕ್ಷಕಿ ಲೀಲಾವತಿಯನ್ನು ಗ್ರಾಪಂ ಸದಸ್ಯ ಮುನಿರಾಜ್, ಲಕ್ಷ್ಮಣ್, ರವಿ, ರಾಘವೇಂದ್ರ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement