ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾ-ಚ ಹಗರಣ ಮಾಸ್ಟರ್ ಮೈಂಡ್ ಜೈಲಿಂದ ಆಸ್ಪತ್ರೆಗೆ

Srinivasa Murthy VN
Updated On : 28 Jul 2013, 1:05 am

ಕ.ಪ್ರ.ವಾರ್ತೆ ರಾಮನಗರ ಜು.27
ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಬಹುಕೋಟಿ ಹಗರಣದ ಮಾಸ್ಟರ್ ಮೈಂಡ್ ಆಗಿರುವ ಪ್ರಾಧಿಕಾರದ ಆಯುಕ್ತ ಚಿದಾನಂದ ಅನಾರೋಗ್ಯದ ಕಾರಣಕ್ಕೆ ಜೈಲಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಕ್ರವಾರವಷ್ಟೇ ರಾಮನಗರ ನ್ಯಾಯಾಲಯವು ಚಿದಾನಂದ ಅವರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿ ಆದೇಶಿಸಿತ್ತು. ಪೊಲೀಸರು ರಾಮನಗರ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದಂತೆಯೇ ಚಿದಾನಂದ ಅನಾರೋಗ್ಯದ ವಿಷಯ ಹೊರ ಹಾಕಿದ್ದಾರೆ.
ಎದೆನೋವಿನ ಕಾರಣ ನೀಡಿದ ಅವರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ರಕ್ತದ ಒತ್ತಡ ಕಡಿಮೆಯಾಗಿರುವುದನ್ನು ಪರೀಕ್ಷಿಸಿ, ಚಿಕಿತ್ಸೆ ನೀಡಲಾಯಿತು. ಬಳಿಕ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೈಲು ಸೇರುತ್ತಿದ್ದಂತೆಯೇ ಎದೆನೋವಿನ ಸಬೂಬು ಹೇಳುವ ರಾಜಕಾರಣಿಗಳ ಚಾಳಿ ಇದೀಗ ರಾ-ಚ ಪ್ರಾಧಿಕಾರದ ಆಯುಕ್ತ ಚಿದಾನಂದ್ ಅವರಿಗೂ ಅಂಟಿಕೊಂಡಿದೆ. ಅವರೀಗ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಆಸ್ಪತ್ರೆಯಲ್ಲಿದ್ದಾರೆ.  
ವಿಚಾರಣೆ ಮುಂದುವರಿಕೆ: ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಬಹುಕೋಟಿ ಹಗರಣದ ತನಿಖೆ ಮುಂದುವರೆದಿದೆ. ಈಗಾಗಲೇ ವಶಪಡಿಸಿಕೊಂಡಿರುವ ದಾಖಲೆಗಳನ್ನು ದೃಢಪಡಿಸಲು ಮತ್ತು ಪರಿಶೀಲನೆಗಾಗಿ ಪ್ರಾಧಿಕಾರದ ಇಬ್ಬರು ಅಧಿಕಾರಿಗಳನ್ನು ಶನಿವಾರ ಪೊಲೀಸ್ ಭವನಕ್ಕೆ ಕರೆಸಿಕೊಳ್ಳಲಾಗಿತ್ತು.
ಇಬ್ಬರೂ ತಾಂತ್ರಿಕ ಅಧಿಕಾರಿಗಳಾಗಿದ್ದು, ಅವರನ್ನು ದಾಖಲೆಗಳ ದೃಢೀಕರಣಕ್ಕಾಗಿಯೇ ಕರೆಸಿಕೊಳ್ಳಲಾಗಿತ್ತು. ಅವರಿಗೂ ಹಗರಣಕ್ಕೂ ಸಂಬಂಧ ಕಂಡು ಬರುತ್ತಿಲ್ಲ. ಮತ್ತೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಡಿವೈಎಸ್ಪಿ ರಾಮಲಿಂಗಪ್ಪ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement