ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಲೋಕಾಯುಕ್ತ ಬಲೆಗೆ ಬಿದ್ದ ಎಎಸ್‌ಐ, ಪೇದೆ

Srinivasa Murthy VN
Updated On : 28 Jul 2013, 1:07 am

ಬೆಂಗಳೂರು: ವಾಹನ ಚಾಲನಾ ಪರವಾನಗಿ ಪರಿಶೀಲನೆ ನೆಪದಲ್ಲಿ ವ್ಯಕ್ತಿಯೊಬ್ಬರಿಂದ 200 ಲಂಚ ಪಡೆದ ನಂದಿನಿ ಬಡಾವಣೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಜಿ. ಗಂಗರಾಜಯ್ಯ ಹಾಗೂ ಪೇದೆ ರವಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಂದಿನಿ ಬಡಾವಣೆ ನಿವಾಸಿ ರಾಮಚಂದ್ರ ಎಂಬುವರು ಜು.23 ರಂದು ಸಂಜೆ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು.
ಇವರನ್ನು ಹಿಂಬಾಲಿಸಿದ ಎಎಸ್‌ಐ ಗಂಗರಾಜಯ್ಯ ಹಾಗೂ ಪೇದೆ ರವಿ ವಾಹನ ಅಡ್ಡಗಟ್ಟಿ ರಾಮಚಂದ್ರ ಅವರನ್ನು ನಿಲ್ಲಿಸಿದ್ದಾರೆ. ಬಳಿಕ ಅವರ ಬಳಿ ವಾಹನ ದಾಖಲೆಗಳನ್ನು ಪರಿಶೀಲಿಸಿ ಚಾಲನಾ ಪರವಾನಗಿ ಕೇಳಿದ್ದಾರೆ.
ರಾಮಚಂದ್ರ ತಮ್ಮ ಬಳಿ ಚಾಲನಾ ಪರವಾನಗಿ ಇಲ್ಲ ಎಂದು ಹೇಳಿದ್ದಾರೆ. ರಾಮಚಂದ್ರ ಅವರ ಜೇಬುಗಳನ್ನು ಪರಿಶೀಲಿಸಿದ ಪೇದೆ ಹಾಗೂ ಎಎಸ್‌ಐ ಅವರ ಬಳಿ ಇದ್ದ ಮೊಬೈಲ್ ಕಿತ್ತುಕೊಂಡು ರು. 500 ನೀಡಿ ಮೊಬೈಲ್ ತೆಗೆದುಕೊಂಡು ಹೋಗು ಎಂದು ಹೇಳಿದ್ದಾರೆ.
ಹಣ ನೀಡಲು ಇಚ್ಛಿಸದ ರಾಮಚಂದ್ರ ಅವರು ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಾಮಚಂದ್ರ ಅವರ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ನಂದಿನಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಎಸ್‌ಎ ಗಂಗರಾಜಯ್ಯ ಅವರು ರಾಮಚಂದ್ರ ಅವರಿಂದ ರು. 200 ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಆರೋಗ್ಯ ಚೇತರಿಕೆಯಲ್ಲಿ ಶುಶ್ರೂಷಕಿ ಸೇವೆ ಮುಖ್ಯ
ಕ.ಪ್ರ.ವಾರ್ತೆ ನೆಲಮಂಗಲ ಜು.27
ರೋಗಿಯೊಬ್ಬರ ಆರೋಗ್ಯ ಚೇತರಿಕೆಯಲ್ಲಿ ಶುಶ್ರೂಷಕಿಯ ಸೇವೆ ಬಹಳ ಮುಖ್ಯವಾಗಿದೆ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು.
ಅವರು ಶನಿವಾರ ಪಟ್ಟಣದ ಹರ್ಷ ವಿದ್ಯಾಸಂಸ್ಥೆಯು ಹಮ್ಮಿಕೊಂಡಿದ್ದ 2013-14ನೇ ಸಾಲಿನ ನರ್ಸಿಂಗ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ದೇಶವನ್ನು ನಮ್ಮ ತಾಯಿ ಎಂದು ಪ್ರೀತಿಸಿದಾಗ ದೇಶ ನಮ್ಮನ್ನು ಕಾಪಾಡುತ್ತದೆ. ಸೇವೆಯ ಮತ್ತೊಂದು ಹೆಸರೇ ಮದರ್ ಥೆರೆಸಾ ಎಂದರು.
ವೈದ್ಯರು ದಿನದಲ್ಲಿ ಒಂದು ಬಾರಿ ರೋಗಿಯನ್ನು ನೋಡಿ ಸಲಹೆ ನೀಡಿದ್ದರೂ, ಅದನ್ನು ಪ್ರತಿ ನಿಮಿಷದಲ್ಲಿ ರೋಗಿಯನ್ನು ಗಮನಿಸಿ ಕಾರ್ಯ ನಿರ್ವಹಿಸುವುದು ಶುಶ್ರೂಷಕಿಯದ್ದಾಗಿದೆ ಎಂದು ಎಂ.ಎಸ್.ರಾಮಯ್ಯ ಆಸ್ಪತ್ರೆಯ ಅಧ್ಯಕ್ಷ ಡಾ.ನರೇಶ್ ಶೆಟ್ಟಿ ತಿಳಿಸಿದರು.
ನೂತನ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಹಿರಿಯ ನರ್ಸ್ ನಾನ್ಸಿ ಡಿಸೋಜ ಜ್ಯೋತಿ ನೀಡುವ ಮೂಲಕ ಸೇವೆಯ ಪ್ರಮಾಣ ವಚನ ಬೋಧಿಸಿದರು.
ವೇದಿಕೆಯಲ್ಲಿ ಸಂಸ್ಥೆ ಅಧ್ಯಕ್ಷ ಶಿವಕುಮಾರ್, ತಾ.ಪಂ.ಸದಸ್ಯ ಲಕ್ಷ್ಮೀನಾರಾಯಣ್, ಸಂಸ್ಥೆಯ ನಿರ್ದೇಶಕರಾದ ಗೋವೇನಹಳ್ಳಿ ಶಿವಣ್ಣ, ಪ್ರಕಾಶ್ ಸೇರಿದಂತೆ ನೂರಾರು ಜನ ಕಾಲೇಜು ವಿದ್ಯಾರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement