ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಭಾರತೀಯ ರಿಪಬ್ಲಿಕ್ ಅಭ್ಯರ್ಥಿಗಳು ಕಣಕ್ಕೆ

Srinivasa Murthy VN
Updated On : 30 Jul 2013, 12:48 pm

ಕ.ಪ್ರ.ವಾರ್ತೆ ರಾಮನಗರ ಜು.29
ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಎದುರಾಗಿರುವ ಮರು ಚುನಾವಣೆಗೆ ಭಾರತೀಯ ರಿಪಬ್ಲಿಕನ್ಪ್‌ಕ್ಷ (ಅ) ಅಭ್ಯರ್ಥಿಗಳನು ಕಣಕ್ಕಿಳಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ತಿಳಿಸಿದರು.
ಮಾಜಿ ಸಿಎಂ ಗುಂಡೂರಾವ್ ಅವರ ಆಪ್ತರಲ್ಲಿ ಒಬ್ಬರಾದ, ದೇವರಾಜ ಅರಸು ಹಾಗೂ  ಅಂಬೇಡ್ಕರ್ ತತ್ವ ಸಿದ್ಧಾಂತಗಳನು ಅಳವಡಿಸಿಕೊಂಡಿರುವ ಹೋರಾಟಗಾರ ಮತ್ತು  ಪಕ್ಷದ ರಾಜ್ಯ ಉಪಾಧ್ಯಕ್ಷರೂ ಆದ ಕುಣಿಗಲ್ ಶಿವಣ್ಣ ಅವರನು ಬೆಂಗಳೂರು ಗ್ರಾಮಾಂತರ ಕ್ಷೇತ್ರದದಿಂದ ಕಣಕ್ಕಿಳಿಸಲಾಗುವುದು ಎಂದು ನಗರದಲ್ಲಿ ನಡೆದ ಪತ್ರಿಗೋಷ್ಠಿಯಲ್ಲಿ ಹೇಳಿದರು.
ಶಿವಣ್ಣ ಅವರು ದಲಿತ ಹಾಗೂ ಅಹಿಂದ ಹೋರಾಟದಲ್ಲಿ ಮೂಂಚೂಣಿದ್ದಾರೆ. ಪಕ್ಷವು 8 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 1 ಲಕ್ಷಕ್ಕೂ ಅಧಿಕ ಕಾರ್ಯಕರ್ತರನು ಹೊಂದಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಈ ಚುನಾವಣೆಯನು ಪ್ರತಿಷ್ಠೆಯ ಕಣವನಾಗಿಸಿಕೊಂಡಿವೆ. ಈ ಹಂತದಲ್ಲಿ ಗಮನಾರ್ಹ ಸಾಧನೆ ತೋರಲಿದೆ ಎಂದರು.
ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಹಾಗೂ ಶೋಷಿತರು ಅನುಭವಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಹಲವಾರು ಹೋರಾಟಗಳನು ರೂಪಿಸಿದ್ದೇನೆ. ಬಡಜನರ ಸೇವೆಯೇ ನನ ಜೀವನದ ಗುರಿಯಾಗಿದೆ. ಆದ್ದರಿಂದ ಈ ಮರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಆಕಾಂಕ್ಷಿತ ಅಭ್ಯರ್ಥಿ ಕುಣಿಗಲ್ ಶಿವಣ್ಣ ಹೇಳಿದರು. ಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ನಾಗೇಂದ್ರ, ಧನರಾಜ್, ಮಂಟೇಸ್ವಾಮಿ, ಸೋಮಣ್ಣ, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಗೋವಿಂದಯ್ಯ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement