ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಂಚಕರೊಂದಿಗೆ ಚಿದಾನಂದ ವಿದೇಶ ಪ್ರವಾಸ

Srinivasa Murthy VN
Updated On : 30 Jul 2013, 12:48 pm

-ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಜು.29

ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಚಿದಾನಂದ ವಂಚಕರ ಜಾಲದೊಂದಿಗೆ ಐದು ದಿನ ಇಂಡೋನೇಷ್ಯಾ ಪ್ರವಾಸ ನಡೆಸಿದ್ದ ಮತ್ತೊಂದು ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಈ ಹಿನೆಲೆಯಲ್ಲಿ ಪೊಲೀಸ್ ತನಿಖಾ ತಂಡ ಆತನ ಪಾಸ್ ಫೋರ್ಟ್ ವಶಪಡಿಸಿಕೊಂಡಿದೆ.
ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ರು.16.50 ಕೋಟಿ ಮತ್ತು ಮುಡಾದ ರು.5 ಕೋಟಿ ಮೊತ್ತವನು ವಾಪಸ್ ಕೇಳಿ ಚಿದಾನಂದ ಒತ್ತಡ ಹೇರಿದಾಗ ಅದರ ಹೂಡಿಕೆಯನು ಖುದ್ದು ತೋರಿಸಲೆಂದೇ ವಂಚಕರು ಅವರನು ವಿದೇಶಕ್ಕೆ ಕರೆದೊಯ್ದಿದ್ದರು ಎಂದು ಹೇಳಲಾಗಿದೆ.
ವಂಚಕರ ಜಾಲದ ಸದಸ್ಯನಾದ ಮಂಡ್ಯ ಜಿಲ್ಲೆ ಮಳವಳ್ಳಿ ಮೂಲದ ನಾಗಲಿಂಗಸ್ವಾಮಿಯೊಟ್ಟಿಗೆ ಕಳೆದ ವರ್ಷ ಆಗಸ್ಟ್ ಕಡೆಯ ವಾರದಲ್ಲಿ ಚಿದಾನಂದ ಇಂಡೋನೇಷ್ಯಾಕ್ಕೆ ಹೋಗಿದ್ದರು. ಇಲ್ಲಿ ಲೂಟಿಯಾದ ಹಣ ಅಲ್ಲಿ ಹೂಡಿಕೆಯೊಂದಿಗೆ ಸೇಫಾಗಿರುವುದನು ದೃಢಪಡಿಸಿಕೊಂಡು ಚಿದಾನಂದ ನಿಟ್ಟುಸಿರು ಬಿಟ್ಟಿದ್ದರು.
ವಿಳಂಬ ಆಗಿದ್ದಕ್ಕೆ ಒತ್ತಡ: ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಹಣವನು ಸ್ವಂತದ್ದರಂತೆ ಚಿದಾನಂದ ವಂಚಕರ ಜಾಲಕ್ಕೆ ಧಾರಾಳವಾಗಿ ನೀಡುತ್ತಾ ಬಂದಿದ್ದರು. ಪ್ರಾರಂಭದಲ್ಲಿ ತೆಗೆದುಕೊಂಡ ಹಣವನು ವಂಚಕರು ನಿಗದಿತ ಸಮಯಕ್ಕೆ ಸರಿಯಾಗಿ ಪಾವತಿಸಿಕೊಂಡು ಬಂದಿದ್ದರು.
ಕಳೆದ ವರ್ಷ ಹಣ ಪಾವತಿ ವಿಳಂಬ ಆದಾಗ ಚಿದಾನಂದ ಒತ್ತಡ ಹೇರಿದ್ದರು. ಹೀಗಾಗಿದ್ದೇ ತಡ ವಂಚಕರು ಚಿದಾನಂದ ಅವರನೇ ಇಂಡೋನೇಷ್ಯಾಕ್ಕೆ ಕರೆದೊಯ್ದು, ಅಲ್ಲಿ ಮಾಡಿರುವ ಹೂಡಿಕೆ ವಿವರವನು ನೀಡಿದ್ದರು. ವಿದೇಶ ಪ್ರವಾಸ, ಅಲ್ಲಿ ಸಿಕ್ಕ  ರಾಜಾತಿಥ್ಯದಿಂದ ಸಂಪ್ರೀತರಾದ ಚಿದಾನಂದ ಮತ್ತೆ ಒತ್ತಡ ಹೇರಲಿಲ್ಲ.
ಹೂಡಿಕೆಯಿಂದ ಬರುವ ಭಾರಿ ಗಳಿಕೆಯಲ್ಲಿ ಚಿದಾನಂದಗೂ ಪಾಲು ನೀಡುವ ಭರವಸೆಯನು ವಂಚಕರ ಜಾಲ ನೀಡಿತ್ತೆನಲಾಗಿದೆ. ಅಲ್ಲಿಂದಾಚೆಗೆ ರಾ-ಚ ಪ್ರಾಧಿಕಾರದಲ್ಲಿ ಕುರ್ಚಿ ಭದ್ರ ಮಾಡಿಕೊಂಡು, ವಂಚಕರ ಜತೆ ನಿರಂತರ ಸಂಪರ್ಕದಲ್ಲಿ ಚಿದಾನಂದ ಮುಂದುವರೆದರು.
ಪಾಸ್‌ಪೋರ್ಟ್ ವಶ: ಉಭಯ ಪ್ರಾಧಿಕಾರಗಳ ಹಗರಣದ ಮಾಸ್ಟರ್ ಮೈಂಡ್ ಚಿದಾನಂದ. ಮಂಡ್ಯದ ಮುಡಾದ ಹಣವನು ವಂಚಕರ ಜಾಲಕ್ಕೆ ಸಿಲುಕುವಂತೆ ಮಾಡಿ ಅಲ್ಲಿನ ಅಮಾನತುಗೊಂಡಿರುವ ಆಯುಕ್ತ ಡಾ.ಎಚ್.ಎಸ್.ಶಿವರಾಮ್ ಅವರನೂ ಖೆಡ್ಡಕ್ಕೆ ಕೆಡವಿದ್ದೇ ಚಿದಾನಂದ ಎನುವ ಆರೋಪವಿದೆ.  ಹಗರಣದಲ್ಲಿ ಶಾಮೀಲಾಗಿ ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಹಣ ವಂಚಕರ ಪಾಲಾಗಲು ಕಾರಣನಾದ ಚಿದಾನಂದ ವಿದೇಶ ಪ್ರವಾಸ ಮುಗಿಸಿ ಬಂದಿರುವ ಮಾಹಿತಿ ದೃಢಪಡುತ್ತಿದ್ದಂತೆಯೇ ರಾಮನಗರ ಪೊಲೀಸರು ಆತನ ಪಾಸ್‌ಪೋರ್ಟ್ ವಶಪಡಿಸಿಕೊಂಡಿದ್ದಾರೆ.

ವಿಶೇಷ ಅನುಮತಿಗೆ ಪತ್ರ
ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 2008 ರಿಂದ 13ರವರೆಗೆ 5 ವರ್ಷದ ಅವಧಿಯಲ್ಲಿ ನಡೆದಿರುವ ಹಣಕಾಸು ವ್ಯವಹಾರ ಸಂಬಂಧ ಮರು ಲೆಕ್ಕಪರಿಶೋಧನೆಗೆ ವಿಶೇಷ ಅನುಮತಿ ನೀಡುವಂತೆ ಜಿಲ್ಲಾಡಳಿತವು ರಾಜ್ಯ ಲೆಕ್ಕಪತ್ರ ಇಲಾಖೆಗೆ ಪತ್ರ ರವಾನಿಸಿದೆ.
ಪ್ರಾಧಿಕಾರದಲ್ಲಿ ಹಗರಣ ಸಂಬಂಧ ತನಿಖೆಗಾಗಿ ಮರು ಲೆಕ್ಕಪರಿಶೋಧನೆ ನಡೆಸುವಂತೆ ಪೊಲೀಸರು ಸಂಸ್ಥೆಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಅವರಿಗೆ ಎರಡು ವಾರದ ಹಿಂದೆಯೇ ಮನವಿ ಮಾಡಿದ್ದರು. ಈ ಮೇರೆಗೆ ಶ್ರೀರಾಮರೆಡ್ಡಿ ಜಿಲ್ಲಾ ಲೆಕ್ಕಪತ್ರ ಇಲಾಖೆಗೆ ಸೂಚಿಸಿದ್ದರು. ತಮ್ಮ ಇಲಾಖೆಯಿಂದ ಅನುಮತಿ ಸಿಗದ ಹೊರತು ಮರು ಲೆಕ್ಕಪರಿಶೋಧನೆಗೆ ಜಿಲ್ಲಾ ಲೆಕ್ಕಪತ್ರ ಅಧಿಕಾರಿಗಳು ನಿರಾಕರಿಸಿದ್ದರು. ಮರು ಲೆಕ್ಕಪರಿಶೋಧನೆ ವಿಳಂಬದ ಹಿನೆಲೆಯಲ್ಲಿ ವಿಶೇಷ ಅನುಮತಿಗಾಗಿ ಶ್ರೀರಾಮರೆಡ್ಡಿ ರಾಜ್ಯ ಲೆಕ್ಕಪತ್ರ ಇಲಾಖೆಯನು ಕೋರಿದ್ದಾರೆ.
ಏತನ್ಮಧ್ಯೆ, ವಶಪಡಿಸಿಕೊಂಡ ಎಲ್ಲ ಕಡತ ಮತ್ತು ದಾಖಲೆಗಳನು ರಾ-ಚ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಒಪ್ಪಿಸುವ ಮೂಲಕ ಮರು ಲೆಕ್ಕಪರಿಶೋಧನೆಗೆ ಸಹಕರಿಸಬೇಕು ಎಂದು ಶ್ರೀರಾಮರೆಡ್ಡಿ ಅವರು ಪೊಲೀಸ್ ವರಿಷ್ಠಾಧಿಕಾರಿಗೂ ಪತ್ರ ರವಾನಿಸಿದ್ದಾರೆ.

ಜಾಲಕ್ಕೆ ರಾಜಕಾರಣದ ನಂಟು
ವಂಚಕರ ಜಾಲದ ರೂವಾರಿ ಕೆಬ್ಬಳ್ಳಿ ಆನಂದ್ ಅಲ್ಪಾವಧಿಯಲ್ಲೇ ರಾಜಕಾರಣಿಯಾಗಿ ಹೊರ ಹೊಮ್ಮಿದ ವ್ಯಕ್ತಿ. ಆತನ ಸಂಪರ್ಕದಲ್ಲಿದ್ದ ಪ್ರಭಾವಿ ರಾಜಕಾರಣಿಗಳಿಗೂ ರಾ-ಚ ಪ್ರಾಧಿಕಾರ, ಮುಡಾದಲ್ಲಿ ಲೂಟಿಯಾದ ಒಂದಿಷ್ಟು ಮೊತ್ತ ಹರಿದು ಹೋಗಿದೆ.
ಕೆಬ್ಬಳ್ಳಿ ಆನಂದ್ ಕೆಪಿಸಿಸಿಯ ಘಟಕವೊಂದರ ಪ್ರಮುಖ ಪದಾಧಿಕಾರಿ. ಕಾಂಗ್ರೆಸ್ ಪಕ್ಷದಿಂದ ಜಿ.ಪಂ. ಚುನಾವಣೆಯಲ್ಲಿ ಅಭ್ಯರ್ಥಿ ಕೂಡ ಆಗಿದ್ದವರು. ಇವರೊಂದಿಗೆ ರಾಮನಗರ ಮತ್ತು ಮಂಡ್ಯ ಜಿಲ್ಲೆಯ ಕೆಲ ರಾಜಕಾರಣಿಗಳು ಹಣಕಾಸು ವ್ಯವಹಾರ ನಡೆಸಿರುವುದೂ ತನಿಖೆಯಲ್ಲಿ ಬಟಾಬಯಲಾಗಿದೆ.
ಇವರಲ್ಲಿ ಕೆಲವರು ಅಮಾಯಕರಾದರೆ, ಕೆಲ ಮಂದಿ ಕೆಬ್ಬಳ್ಳಿ ಆನಂದನನೂ ಮೀರಿಸುವಂತೆ ಬೆಳೆದು ನಿಂತ ಲೂಟಿಕೋರರೇ ಆಗಿದ್ದಾರೆ. ವಂಚಕರ ಜಾಲದಿಂದ ಹಣ ಹರಿದು ಹೋದ ಬ್ಯಾಂಕ್ ಖಾತೆಗಳು, ವ್ಯಕ್ತಿಗಳ ವಿವರವನು ಪೊಲೀಸ್ ತನಿಖಾ ತಂಡವಿನೂ ಜಾಲಾಡುತ್ತಿದೆ.

ಶೀಘ್ರ ಮಾಹಿತಿ ಬಹಿರಂಗ
ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಲೂಟಿಯಾದ ಹಣ ವಂಚಕರ ಜಾಲದಿಂದ ಎಲ್ಲಿಗೆ ಹರಿದು ಹೋಗಿದೆ ಎನುವುದರ ಮಾಹಿತಿಯನು ಬೆನುಹತ್ತಲಾಗಿದೆ. ತನಿಖೆ ಮುಗಿಸಿ, ಶೀಘ್ರವೇ ಮಾಹಿತಿಯನು ಬಹಿರಂಗಪಡಿಸಲಾಗುವುದು.
-ಅನುಪಮ್ ಅಗ್ರವಾಲ್, ರಾಮನಗರ ಎಸ್ಪಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement