ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕೆಪಿಎಸ್‌ಸಿ ಹಗರಣ; ಎಫ್‌ಐಆರ್ ದಾಖಲು

Srinivasa Murthy VN
Updated On : 26 Jun 2013, 1:13 am

ಬೆಂಗಳೂರು: ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಸಂದರ್ಶನದಲ್ಲಿ  ನಡೆದಿದೆ ಎನ್ನಲಾದ ಹಗರಣ ಆರೋಪ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್ ದಾಖಲಾಗಿದೆ.  ಪ್ರಕರಣವನ್ನು ಸಿಐಡಿಗೆ ವಹಿಸಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಆಯೋಗದ (ಡಿಪಿಎಆರ್) ಉಪ ಕಾರ್ಯದರ್ಶಿ ದೇವರಾಜ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.  ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಕೆಪಿಎಸ್‌ಸಿ ಸದಸ್ಯೆ ಡಾ.ಮಂಗಳಾಶ್ರೀಧರ್ , ಆಪ್ತ ಸಹಾಯಕ ಕುಮಾರ್  ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸಿಪಿ ವೆಂಕಟಸ್ವಾಮಿ ತಿಳಿಸಿದ್ದಾರೆ.

ಕೆಎಎಸ್ ಪೂರ್ವಭಾವಿ ಪರೀಕ್ಷೆ ಕಾರ್ಯಾಗಾರ
ಬೆಂಗಳೂರು: ಸ್ಪರ್ಧಾಚೈತ್ರ ವತಿಯಿಂದ ಜೂ.29 ರಂದು ಕೆಎಎಸ್ ಪೂರ್ವಭಾವಿ ಪರೀಕ್ಷೆ ಉಚಿತ ಕಾರ್ಯಾಗಾರ ಹಮ್ಮಿಕೊಂಡಿದೆ. ಆಸಕ್ತರು ಜಿ.ಹರಿಪ್ರಸಾದ್ 23112563/97394 50343/ 97404 72728. ಸಂಪರ್ಕಿಸಲು ಕೋರಲಾಗಿದೆ.

30 ರಂದು ನೇತ್ರ ತಪಾಸಣಾ ಶಿಬಿರ
ಬೆಂಗಳೂರು: ಡಾ.ಎಂ.ಸಿ.ಮೋದಿ ನೇತ್ರ ಚಿಕಿತ್ಸಾಲಯವು ಮಧುಮೇಹ ರೋಗಿಗಳ ನೇತ್ರ ತಪಾಸಣಾ ಉಚಿತ ಶಿಬಿರವನ್ನು ಜೂ.30ರಂದು ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗೆ- 23492233/ 40869555.

ಸ್ನೇಹಿತನಿಂದಲೇ ಯುವಕ ಕೊಲೆ
ಬೆಂಗಳೂರು: ಮಹಿಳಾ ಪಿಜಿಯಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ಯುವಕನನ್ನು ಆತನ ಸ್ನೇಹಿತನೇ ದೊಣ್ಣೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಬಿಟಿಎಂ ಮೊದಲನೇ ಹಂತದಲ್ಲಿ ಮಂಗಳವಾರ ನಸುಕಿನ ಜಾವ ನಡೆದಿದೆ. ಬಿಹಾರ ಮೂಲದ ಪಪ್ಪು(18) ಕೊಲೆಯಾದವ. ಈತನ ಸ್ನೇಹಿತ ಮಹೇಶ ಎಂಬಾತನೇ ಪಪ್ಪುವನ್ನು ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಮಡಿವಾಳ ಪೊಲೀಸರು ತಿಳಿಸಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಮಹೇಶ ಹಾಗೂ ಪಪ್ಪು ಗಂಗೋತ್ರಿ ಬಡಾವಣೆಯ ಶ್ರೀಸಾಯಿ ಬಾಲಾಜಿ ಮಹಿಳಾ ಪಿಜಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಹಾಗೂ ಅಡುಗೆ ಭಟ್ಟರಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಸೋಮವಾರ ರಾತ್ರಿ ಇಬ್ಬರ ನಡುವೆ ಜಗಳ ಸಂಭವಿಸಿದ್ದು, ರಾತ್ರಿ 2 ಗಂಟೆಯ ಸುಮಾರಿಗೆ ಮಹೇಶ ಪಿಜಿಯಲ್ಲಿದ್ದ ದೊಣ್ಣೆಯಿಂದ ಪಪ್ಪು ತಲೆಗೆ ಹಲ್ಲೆ ನಡೆಸಿ ಕೊಲೈಗೈದು ಪರಾರಿಯಾಗಿದ್ದಾನೆ. ಹಣಕಾಸಿನ ವಿಚಾರವಾಗಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement