ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಕೊಲೆ

Srinivasa Murthy VN
Updated On : 26 Jun 2013, 12:54 pm

ಕೃಷ್ಣರಾಜಪುರ: ಪಾಲಿಕೆ ಮಾಜಿ ಸದಸ್ಯ, ಹಾಲಿ ಸದಸ್ಯೆ ಪತಿ ಎಸ್.ಎಸ್.ಪ್ರಸಾದ್ ಬಲಗೈ ಬಂಟ, ರಿಯಲ್ ಎಸ್ಟೇಟ್ ಉದ್ಯಮಿ ನಾರಾಯಣಪುರದ ಮಂಜುನಾಥ್‌ನನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿದ್ದು, ಶವ ಸುಟ್ಟಿರುವ ಘಟನೆ ನಡೆದಿದೆ.
ಮಾಜಿ ಶಾಸಕ ನಂದೀಶ್‌ರೆಡ್ಡಿಗೂ ಆಪ್ತನಾಗಿದ್ದ ಮಂಜುನಾಥ್(45) ಕೊಲೆಯಾದ ದುರ್ದೈವಿ.
ಚಾಲಕನಿಗಾಗಿ ಶೋಧ: ಕಳೆದ ಕೆಲ ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯನಾಗಿದ್ದು, ರಿಯಲ್ ಎಸ್ಟೇಟ್ ವ್ಯವಹಾರ ಸಹ ಮಾಡುತ್ತಿದ್ದ. ಸೋಮವಾರ ಸಂಜೆ ಎ.ನಾರಾಯಣಪುರದಿಂದ ಹೊರಟ ಮಂಜುನಾಥ್ ಮತ್ತೆ ಮನೆಗೆ ಹಿಂತಿರುಗಲಿಲ್ಲ, ದೂರವಾಣಿ ಸಂಪರ್ಕಕ್ಕೂ ಸಿಗದ ಕಾರಣ ಸಂಬಂಧಿಕರು ಮಹದೇವಪುರ ಪೊಲೀಸರಿಗೆ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಮಹದೇವಪುರ ಪೊಲೀಸರಿಗೆ ತಡ ರಾತ್ರಿ ಮಂಜುನಾಥ್‌ನ ವಾಹನ ಕಾಡುಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವುದಾಗಿ ಮಾಹಿತಿ ತಿಳಿಯಿತು ಕೂಡಲೆ ಕಾರ್ಯಪ್ರವೃತ್ತರಾದ ಮಹದೇವಪುರ ಪೊಲೀಸರು ಕಾರನ್ನು ತಪಾಸಣೆ ಮಾಡಿ ಸಿಕ್ಕ ಮಾಹಿತಿ ಮೇರೆಗೆ ತನಿಖೆ ಕೈಗೊಂಡಿದ್ದು, ವಾಹನ ಚಾಲಕನಿಗಾಗಿ ಬಲೆ ಬೀಸಿದ್ದಾರೆ. ಈ ಮಧ್ಯೆ ಮಂಜುನಾಥ್‌ನ ಶವ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕೆಸರನಹಳ್ಳಿಯಲ್ಲಿ ಅರೆ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶವ ಮಂಜುನಾಥ್ ಎಂದು ಗುರುತಿಸಲಾಗಿದೆ, ಹಣಕಾಸಿನ ವಿಚಾರದಲ್ಲೇ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement