ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಹುಟ್ಟು ಹಬ್ಬ ಆಚರಣೆ

Srinivasa Murthy VN
Updated On : 26 Jun 2013, 12:53 pm

ನೆಲಮಂಗಲ: ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ತಮ್ಮ ಹುಟ್ಟುಹಬ್ಬವನ್ನು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮತ್ತು ಮುಖಂಡರೊಂದಿಗೆ ಅವರ ಗೃಹ ಕಚೇರಿಯಲ್ಲಿ  ಮಂಗಳವಾರ ಆಚರಿಸಿದರು.
ಹುಟ್ಟುಹಬ್ಬದ ಪ್ರಯುಕ್ತ ಅಡಕಮಾರನಹಳ್ಳಿ ಗ್ರಾಮ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿ ಮಾತನಾಡುತ್ತಾ ಸಮಾಜದಲ್ಲಿ ಸಮಾನತೆ ಹಾಗೂ ಶಿಕ್ಷಣಕ್ಕೆ ಮಹತ್ವ ನೀಡುವಂತಹ ಕಾರ್ಯವನ್ನು ಪ್ರತಿಯೊಬ್ಬರೂ ನಿರ್ವಹಿಸಬೇಕು. ಶಿಕ್ಷಣಕ್ಕೆ  ಹೆಚ್ಚಿನ ಆದ್ಯತೆ ನೀಡಿ ಉತ್ತಮ ಸಮಾಜ ನಿರ್ಮಾಣ ನಮ್ಮ ಕನಸಾಗಿದೆ ಎಂದು ಹೇಳಿದರು.  ಜಿ.ಪಂ.ಸದಸ್ಯರಾದ ಚಂದ್ರಪ್ಪ, ಜಯರಾಂ, ದಾಸನಪುರ ಗ್ರಾ.ಪಂ.ಅಧ್ಯಕ್ಷ ರಾಜಣ್ಣ, ಪುರಸಭಾ ಸದಸ್ಯರುಗಳಾದ ಕೆ.ಎಂ.ಶಿವಕುಮಾರ್, ಹೆಚ್.ಜಿ.ರಾಜು, ಸೀತಾರಾಮ್, ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಮುಖಂಡರು ಹಾಗೂ ಸ್ನೇಹಿತರು  ಶುಭ ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement