ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅರ್ಹರ ತಲುಪದೇ ಸವಲತ್ತುಗಳ ದುರ್ಬಳಕೆ: ರಾಮಣ್ಣ ಆರೋಪ

Srinivasa Murthy VN
Updated On : 27 Jun 2013, 12:14 pm

ಕ.ಪ್ರ.ವಾರ್ತೆ ಮಾಗಡಿ ಜೂ.26
ಸರ್ಕಾರ ಸಾಕಷ್ಟು ಸೌಲತ್ತುಗಳನ್ನು ನೀಡುತ್ತಿದೆ. ಸೌಲತ್ತುಗಳು ಅರ್ಹ ಫಲಾನುಭವಿಗಳಿಗೆ ಸಿಗದೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪೊಲೀಸ್ ರಾಮಣ್ಣ ಕಿಡಿಕಾರಿದರು.
ಅವರು ಕಾಳಾರಿ ಕಾವಲ್ ಗ್ರಾಮ ಪಂಚಾಯ್ತಿಯಲ್ಲಿ ನಡೆದ 2013-14ನೇ ಸಾಲಿನ ಮೊದಲ ಸುತ್ತಿನ ಗ್ರಾಮ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಅಗತ್ಯ ಕೊಳವೆಬಾವಿಗಳನ್ನು ಕೊರೆಸಿದ್ದಾರೆ. ಆದರೆ, ನಿರ್ವಹಣೆಯ ನಿರ್ಲಕ್ಷ್ಯದಿಂದಾಗಿ ನೀರಿನ ಸಮಸ್ಯೆ ನಿವಾರಣೆಯಾಗುತ್ತಿಲ್ಲ. ನೀರು ಸರಬರಾಜು ಮಾಡುವ ಸಿಬ್ಬಂದಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಪಂಚಾಯ್ತಿಯ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಗುಣಮಟ್ಟದ ಆಹಾರ ತಯಾರಿಸಿ ನೀಡಬೇಕು. ಮಕ್ಕಳು ದೇವರಿಗೆ ಸಮಾನ ಎಂದು ತಿಳಿಯಬೇಕು.
ಮಕ್ಕಳಿಗೆ ಅನ್ಯಾಯ ಮಾಡಿದರೆ ದೇವರಿಗೆ ಮೋಸ ಮಾಡಿದಂತೆ. ಕೃಷಿ ಇಲಾಖೆಯಿಂದ ಬಿತ್ತನೆ ಬೀಜ, ಇತರೆ ಸಲಕರಣೆಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ. ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅಧಿಕಾರ ವಿಕೇಂದ್ರೀಕರಣದಡಿ ಗ್ರಾಮೀಣ ಭಾಗದಲ್ಲಿ ಎಲ್ಲಾ ವರ್ಗದವರಿಗೂ ಅಧಿಕಾರ ಸಿಗುತ್ತಿದೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳದೆ ಜನಸೇವೆ ಮಾಡಬೇಕು. ಸದಸ್ಯರು ಸಮರ್ಪಕವಾಗಿ ಕೆಲಸ ಮಾಡಿದಾಗ ಮಾತ್ರ ಗ್ರಾಮಾಭಿವೃದ್ಧಿ ಸಾಧ್ಯ ಎಂದು ಪೊಲೀಸ್ ರಾಮಣ್ಣ ತಿಳಿಸಿದರು.
ಪಂಚಾಯ್ತಿ ಪಿಡಿಒ ಟಿ.ಎಸ್. ಲಕ್ಷ್ಮೀನಾರಾಯಣ್ ಮಾತನಾಡಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ತ್ಯಾಜ್ಯವಸ್ತು ವಿಲೇವಾರಿಗೆ ಪಂಚಾಯ್ತಿ 5 ಲಕ್ಷ ಮೀಸಲಿಟ್ಟಿದೆ. ಗ್ರಾಮ ಸ್ವರಾಜ್ ಕ್ರಿಯಾಯೋಜನೆ, ನರೇಗಾ, ವೈಯಕ್ತಿಕ ಶೌಚಾಲಯ, ಆಶ್ರಯ ಮನೆ, ನಿವೇಶನ ರಹಿತರ ಪಟ್ಟಿ ತಯಾರಿಸಲಾಗಿದೆ. ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು. ಯೋಜನೆಗಳು ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದರು.
ಕಾಳಾರಿ ಕಾವಲ್ ಗ್ರಾಪಂ ಅಧ್ಯಕ್ಷೆ ಜಯಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷೆ ಜರೀನಾಬಿ, ಸದಸ್ಯರಾದ ಕೆ.ಆರ್. ಪಾಲಾಕ್ಷಯ್ಯ, ಆರ್.ಅಂಬಿಕಾ, ನಂಜುಂಡಯ್ಯ, ವೆಂಕಟೇಶ್, ಲಕ್ಷ್ಮಣ್, ಅಂಕಮ್ಮ, ರತ್ನಮ್ಮ, ಬಸವರಾಜು ತಾ.ಪಂ. ಸದಸ್ಯೆ ಅರುಂಧತಿ ಚಿಕ್ಕಣ್ಣ, ತಾಲೂಕು ಯೋಜನಾಧಿಕಾರಿ ಎಂ.ವಿ. ಚಂದ್ರಶೇಖರ್, ಪಂಚಾಯ್ತಿ ಕಾರ್ಯದರ್ಶಿ ಎಂ.ಲಿಂಗಮೂರ್ತಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement