ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಂಕಿತ ಡೆಂಘೀಜ್ವರಕ್ಕೆ ಬಸ್ ಚಾಲಕ ಬಲಿ

Srinivasa Murthy VN
Updated On : 28 Jun 2013, 12:20 pm

ಕ.ಪ್ರ.ವಾರ್ತೆ ಮಾಗಡಿ ಜೂ.27
ಶಂಕಿತ ಡೆಂಘೀಜ್ವರಕ್ಕೆ ಗುರುವಾರ ವ್ಯಕ್ತಿಯೊಬ್ಬ ಬಲಿಯಾದ ಘಟನೆ ತಾಲೂಕಿನ ಮರಲಗೊಂಡಲದಲ್ಲಿ ನಡೆದಿದೆ.
ಕಳೆದ 4 ದಿನಗಳಿಂದ ಜ್ವರದಿಂದ ಬಳಲುತಿದ್ದ ಮರಲಗೊಂಡಲದ ವಾಸಿ ಸರ್ಕಾರಿ ಬಸ್ ಚಾಲಕ ಶ್ರೀಧರ್ (26) ಡೆಂಘೀಜ್ವರಕ್ಕೆ ಮೃತಪಟ್ಟಿದ್ದಾನೆ.
ಜ್ವರ ಕಾಣಿಸಿಕೊಂಡ ಕೂಡಲೇ ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.  ಜ್ವರ ವಾಸಿಯಾಗದ ಕಾರಣ ರಕ್ತ ಪರೀಕ್ಷೆ ಮಾಡಿಸಿಕೊಂಡು ಶಂಕಿತ ಡೆಂಘೀಜ್ವರ ಎಂದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಶ್ರೀಧರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಈಗಾಗಲೇ ಶಂಕಿತ ಡೆಂಘೀಜ್ವರಕ್ಕೆ ತಾಲೂಕಿನಲ್ಲಿ  14 ಮಂದಿ ಬಲಿಯಾಗಿದ್ದಾರೆ. ಮರಲಗೊಂಡಲದಲ್ಲಿ ಡೆಂಘೀಜ್ವರಕ್ಕೆ ಇದು 2ನೇ ಬಲಿ. ಶಂಕಿತ ಡೆಂಘೀಗೆ ನಾಗರಿಕರು ಭಯಭೀತರಾಗಿದ್ದಾರೆ. ಮುಂಜಾಗತ್ರಾ ಕ್ರಮದಿಂದಾಗಿ ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲು ಅಗತ್ಯ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿಗಳು ಜನ ಜಾಗೃತಿಗೊಳಿಸುವ ಮೂಲಕ ಗ್ರಾಮ ನೈರ್ಮಲ್ಯ ಕಾಪಾಡಲು ಒತ್ತು ನೀಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ರಾಮನಗರ: ತಾಲೂಕಿನ ಬಾನಂದೂರು, ಶೇಷಗಿರಿಹಳ್ಳಿ, ಕಂಚುಗಾರನಹಳ್ಳಿಯಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಪ್ರತಿ ತಿಂಗಳು 2250 ರು. ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 44 ವರ್ಷದೊಳಗಿನ ಅರ್ಹ ಮಹಿಳಾ ಅಭ್ಯರ್ಥಿಗಳು ಜು.17ರ ಸಂಜೆ 5ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ದ್ವಿಪ್ರತಿಯಲ್ಲಿ ಅರ್ಜಿಯನ್ನು ರಾಮನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸಲ್ಲಿಸಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಯನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement