ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸೋತ ಮಾತ್ರಕ್ಕೆ ಅಜ್ಞಾತವಾಸಕ್ಕೆ ಹೋಗಲ್ಲ: ಬಚ್ಚೇಗೌಡ

Srinivasa Murthy VN
Updated On : 28 Jun 2013, 12:19 pm

ಕ.ಪ್ರ.ವಾರ್ತೆ ಸೂಲಿಬೆಲೆ ಜೂ.27
ರಾಜಕಾರಣದಲ್ಲಿ ಸೋಲು, ಗೆಲುವು ಸಹಜ, ಸೋತ ಮಾತ್ರಕ್ಕೆ ಅಜ್ಞಾತವಾಸಕ್ಕೆ ಹೋಗಲ್ಲ. ಈ ಬಗ್ಗೆ ಕಾರ್ಯಕರ್ತರು ಭಯಪಡಬೇಕಿಲ್ಲ ಎಂದು ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಹೇಳಿದ್ದಾರೆ.
ಸೂಲಿಬೆಲೆ ಹೋಬಳಿ ದೊಡ್ಡಅರಳಿಗೆರೆ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಚನ್ನಕೇಶವಸ್ವಾಮಿ ದೇಗುಲದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ರಾಜ್ಯದಲ್ಲಿಯೇ ಹೆಮ್ಮೆ ಪಡುವಂತ ಅಭಿವೃದ್ಧಿ ಕೆಲಸಗಳನ್ನು ಹೊಸಕೋಟೆ ಕ್ಷೇತ್ರಕ್ಕೆ ಮಾಡಿದ್ದೇನೆ. ಪರಿಣಾಮ 78 ಸಾವಿರ ಮತಗಳು ಸಿಕ್ಕಿವೆ. ನನ್ನಗೂ ಕ್ಷೇತ್ರದಲ್ಲಿ ಕಾರ್ಯಕರ್ತರಿದ್ದಾರೆ. ಇವರನ್ನು ಬಿಟ್ಟು ಅದೈರ್ಯದಿಂದ ಮನೆ ಸೇರಿಲ್ಲ. ಹಾಗಂತ ಅಧಿಕಾರ ಸಿಕ್ಕಾಗ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ನಾನು ಅಧಿಕಾರದಲ್ಲಿದ್ದಾಗ ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಯಾವುದೇ ಸರ್ಕಾರ ಬಂದರೂ  ಜನ ಒಳ್ಳೆಯ ಆಡಳಿತವನ್ನು ನಿರೀಕ್ಷೆ ಮಾಡುತ್ತಾರೆ. 1 ರು.ಗೆ ಕೆಜಿ ಅಕ್ಕಿ ಕೊಡ್ತಾರೆ ಅಂತಾದರೇ ಕೊಡಲಿ ಒಳ್ಳೆಯದಲ್ವೇ. ಕಾಲ ಬಂದಲಾದಂತೆ ರಾಜಕಾರಣದಲ್ಲಿ ಯುವಕರಿಗೆ ಆದ್ಯತೆ ಕೊಡಬೇಕು. ಧಾರ್ಮಿಕವಾಗಿ ಮನುಷ್ಯ ಬೆಳೆದಷ್ಟು ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ. ದೇಗುಲ ಜೀರ್ಣೋದ್ಧಾರ ಕಾರ್ಯಗಳು ಪುಣ್ಯದ ಕೆಲಸಗಳು ಎಂದು ಮಾಜಿ ಸಚಿವರು ತಿಳಿಸಿದರು. ವಿಜಯಪುರ ಬಸವ ಕಲ್ಯಾಣ ಮಠದ ಮಹಾದೇವಸ್ವಾಮಿಗಳು ಮಾತನಾಡಿ, ಅಜ್ಞಾನದಿಂದ ಸುಜ್ಞಾನದ ಕಡೆ ಬರಲು ನಿತ್ಯ ದೇವರಧ್ಯಾನ ಅಗತ್ಯವಾಗಿದೆ. ಆಧ್ಯಾತ್ಮಿಕವಾಗಿ ಪ್ರತಿಯೊಬ್ಬರು ದೇವರ ನಾಮಸ್ಮರಣೆಯನ್ನು ನಿತ್ಯ ಮಾಡುವ ಮೂಲಕ ಧಾರ್ಮಿಕ ಪದ್ಧತಿಗಳನ್ನು ಮಕ್ಕಳಿಗೆ ಬೆಳಸಬೇಕು ಎಂದು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಎಂ ನಾರಾಯಣಸ್ವಾಮಿ, ಎಂಪಿಎಸಿ ಅಧ್ಯಕ್ಷ ಸಿ. ಮುನಿಯಪ್ಪ ಮಾತನಾಡಿದರು. ಇದಕ್ಕೂ ಮುನ್ನ ದೇಗುಲದಲ್ಲಿ ಕಳಸ ಸ್ಥಾಪನೆ ಕಾರ್ಯ ಭಕ್ತಿಯಿಂದ ನಡೆಯಿತು. ಸುಮಾರು 15 ಲಕ್ಷದಷ್ಟು ಹಣವನ್ನು ದೇಗುಲದ ಜೀರ್ಣೋದ್ಧಾರಕ್ಕೆ ಸಹಾಯಹಸ್ತ ನೀಡಿದ್ದ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ ಸತೀಶ್ ಗೌಡರ ಸೇವೆಯನ್ನು ಸ್ಮರಿಸಲಾಯಿತು. ಹಿರಿಯ ಮುಖಂಡ ಸೊಣ್ಣಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್‌ಗೌಡ, ದೇವರಾಜ್, ಮಂಜುಳ ವೆಂಕಟೇಶ್, ನಾರಾಯಣಪ್ಪ, ಸಿಎಂ ನಾರಾಯಣಸ್ವಾಮಿ ಸೇರಿದಂತೆ ಮುಖಂಡರು ಹಾಜರಿದ್ದರು.

ನಾಲ್ವರು ಕಳ್ಳರ ಸೆರೆ; 4 ಬೈಕ್, ಚಿನ್ನದ ಉಂಗುರ ವಶ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಜೂ.27
ನಾಲ್ವರು ದ್ವಿಚಕ್ರವಾಹನ ಕಳ್ಳರನ್ನು ಬಂಧಿಸಿರುವ ಗ್ರಾಮಾಂತರ ಪೊಲೀಸರು ಬಂಧಿತರಿಂದ 4 ಬೈಕ್‌ಗಳು, 1 ಚಿನ್ನದ ಉಂಗುರ ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ದೊಡ್ಡಬಳ್ಳಾಪುರ ಹೊರವಲಯದ ಮುತ್ತೂರು ಗ್ರಾಮದ ಮಂಜುನಾಥ(24), ದೀಪಕ್(21), ಲೋಕೇಶ್(20), ನಾರಾಯಣಸ್ವಾಮಿ(24) ಎಂದು ಗುರುತಿಸಲಾಗಿದೆ.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಅಪೆರಲ್‌ಪಾರ್ಕ್, ಟೆಕ್ಸ್‌ಟೈಲ್ ಪಾರ್ಕ್ ಮತ್ತಿತರ ಕಡೆಗಳಲ್ಲಿ ರಾತ್ರಿ ಪಾಳಿ ಮುಗಿಸಿ ಬರುವ ಕಾರ್ಮಿರನ್ನು ಬೆದರಿಸಿ ನಗನಾಣ್ಯ ಲೂಟಿ ಮಾಡುತ್ತಿದ್ದ ಕುರಿತು ದೂರುಗಳು ದಾಖಲಾಗುತ್ತಿದ್ದದ್ದರ ಬೆನ್ನುಹತ್ತಿದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಬೆಸೆಂಟ್‌ಪಾರ್ಕ್, ರೈಲುನಿಲ್ದಾಣ, ಮಾಕಳಿದುರ್ಗ ಮತ್ತಿತರ ಪ್ರದೇಶಗಳಲ್ಲಿ ದ್ವಿಚಕ್ರವಾಹನ ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು ಎಂದು ವಿವರಿಸಿರುವ ಪೊಲೀಸರು ಈ ಆರೋಪಿಗಳ ವಿರುದ್ಧ  ಹಲವು ಪ್ರಕರಣಗಳಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement