ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮರಳು ದಿನ್ನೆ ಕುಸಿದು 108 ಕುರಿಗಳ ಸಾವು

Srinivasa Murthy VN
Updated On : 29 Jun 2013, 12:39 pm

ಕನಕಪುರ: ತಾಲೂಕು ಅನಜವಾಡಿ ಗ್ರಾಮದ ಸಮೀಪ ಅರ್ಕಾವತಿ ನದಿ ದಡದಲ್ಲಿ ಮೇಯುತ್ತಿದ್ದ ಕುರಿಗಳ ಹಿಂಡು ಮರಳು ದಿನ್ನೆ ದಿಢೀರನೆ ಕುಸಿದ ಪರಿಣಾಮ ನೂರಾರು ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
 ಘಟನೆಯಿಂದಾಗಿ ಕುರಿಮಂದೆಯ ಮಾಲಿಕರಿಗೆ 8 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ರಾಮನಗರ ಮಾಜಿ ಶಾಸಕ ಕೆ.ರಾಜು ಭೇಟಿ ನೀಡಿ ಸಂತ್ರಸ್ತರಿಗೆ 5000 ಪರಿಹಾರ ನೀಡಿದರು.
ಘಟನೆಯ ವಿವರ:  ರಾಮನಗರ ತಾಲೂಕು ಕೈಲಾಂಚ ಹೋಬಳಿಯ ಆಲೇಮರದೊಡ್ಡಿಯ ತಮ್ಮಯ್ಯ ಎಂಬವರು ತಮ್ಮ 500 ಕುರಿಗಳಿದ್ದ ಹಿಂಡನ್ನ ಕಾಡಿನಲ್ಲಿ ಮೇಯಿಸಲು ಕೊಂಡೊಯ್ದಿದ್ದರು. ಅನಜವಾಡಿ ಸಮೀಪದ ಮತ್ತಿಕುಂಟೆ ಎಂಬಲ್ಲಿ ಕುರಿಗಳು ಅರ್ಕಾವತೀ ನದಿ ಪಾತ್ರದಲ್ಲಿ ಮೇಯುತ್ತಿದ್ದಾಗ ಮಾಲೀಕರ ಕಣ್ಣ ಮುಂದೆಯೇ ಮರಳು ದಿನ್ನೆ ಕುಸಿದು ಕುರಿಗಳ ಹಿಂಡು ಮಣ್ಣು, ಮರಳಿನಲ್ಲಿ ಸಮಾಧಿಯಾದವು. ಘಟನೆಯಲ್ಲಿ ಒಟ್ಟಾರೆ 108 ಕುರಿಗಳು ಸಾವನ್ನಪ್ಪಿವೆ. 40ಕ್ಕೂ ಹೆಚ್ಚು ಕುರಿಗಳ ಕಾಲು ಮುರಿದಿದೆ.
ಘಟನೆಯ ನಂತರ ಜೆಸಿಬಿ ಯಂತ್ರ ತರಿಸಿ ಮಣ್ಣನ್ನು ಬಗೆದು ಮಿಕ್ಕ ಕುರಿಗಳನ್ನು ರಕ್ಷಿಸಲಾಗಿದೆ. ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿದ್ದಾರೆ. ಪಶು ವೈದ್ಯಕೀಯ ಇಲಾಖೆ ವೈದ್ಯರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಗಾಯಗೊಂಡ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement