ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾಜ್ಯದಲ್ಲಿ ಕನ್ನಡಕ್ಕಿಂತ ಪರಭಾಷೆಗೆ ಹೆಚ್ಚು ಒತ್ತು

Srinivasa Murthy VN
Updated On : 1 Jul 2013, 12:45 pm

ಕ.ಪ್ರ.ವಾರ್ತೆ ಸೂಲಿಬೆಲೆ  ಜೂ.30
ರಾಜ್ಯದಲ್ಲಿ ಪರಭಾಷೆ ವ್ಯಾಮೋಹ ಹೆಚ್ಚಾಗುತ್ತಿದ್ದು, ಕನ್ನಡ ಭಾಷೆ ಬೆಳವಣಿಗೆಯನ್ನು ಹೊಂದುವಂತ ವಿಷಯದಲ್ಲಿ ಹೆಚ್ಚು ಒತ್ತು ನೀಡದಿರುವುದು ದೊಡ್ಡ ದುರಂತ. ಸಾಹಿತ್ಯ ಸಮ್ಮೇಳನಗಳು ನಾಡು, ನುಡಿ ಬಗ್ಗೆ ಹೊಸ ಚಿಂತನೆಗಳನ್ನು ಹುಟ್ಟು ಹಾಕಲು ಸಹಕಾರಿಯಾಗಬೇಕು ಎಂದು ಪ್ರೊ ಚಂದ್ರಮೋಹನ್  ತಿಳಿಸಿದ್ದಾರೆ.
ಹೊಸಕೋಟೆ ಪಟ್ಟಣದಲ್ಲಿ  ಆಯೋಜಿಸಿದ್ದ  ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಕುವೆಂಪು ಮಂಟಪ್ಪ ಹಾಗೂ ಕೊರಟಿ ಶ್ರೀನಿವಾಸ್ ವೇದಿಕೆಯಲ್ಲಿ ಸೇರಿದ್ದ ಕಾಲಾಭಿಮಾನಿಗಳನ್ನು ಉದ್ದೇಶಿಸಿ ಸಮ್ಮೇಳನಾಧ್ಯಕ್ಷರಾದ ಪ್ರೊ .ಚಂದ್ರಮೋಹನ್ ಮಾತನಾಡಿದರು.
ಕನ್ನಡ ಭಾಷೆ ಸಂರ್ಪೂಣ ಸತ್ವಪೂರ್ಣಗೊಳ್ಳಬೇಕು. ಕನ್ನಡ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ಸಿಗದೆ ಅನ್ಯ ಭಾಷೆಗಳ ಹಾವಳಿಯ ಮಧ್ಯ ನಲುಗುವಂತಾಗಿದೆ.
ಕನ್ನಡವನ್ನು ಮಕ್ಕಳಲ್ಲಿ ಬೆಳೆಸಬೇಕಾದ ಕನ್ನಡ ಶಾಲೆಗಳು ಮೂಲ ಸೌಲಭ್ಯಗಳಿಂದ ಸೋರುಗುತ್ತಿವೆ. ಕನ್ನಡಿಗರೆಲ್ಲ ಕಂಕಣಕಟ್ಟಿಕೊಂಡು ಕನ್ನಡವನ್ನು ಉಳಿಸಿಬೆಳೆಸುವ ಪ್ರತಿಜ್ಞೆಯನ್ನು ಮಾಡಬೇಕು. ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರಗಳು ಹೆಚ್ಚು ಕಾಳಜಿಯನ್ನು ತೋರಬೇಕು.
ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ, ಪೋಷಕರ ಸ್ವಪ್ರತಿಷ್ಠೆ ಹಾಗೂ ಸರ್ಕಾರಿ ಶಾಲೆಗಳ ಬಗೆಗಿನ ನಿರಾಸಕ್ತಿ ಫಲವಾಗಿ ಕನ್ನಡ ಶಾಲೆಗಳನ್ನು ಮುಚ್ಚುವಂಥ ಪರಿಸ್ಥಿತಿ ಉದ್ಭವಿಸುತ್ತಿದೆ  ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಬಿಂಬವಾಗಲಿ: ಶಾಸಕ ಎನ್.ನಾಗರಾಜ್ ಮಾತನಾಡಿ, ಸಾಹಿತ್ಯ ಜನಜೀವನದ ಪ್ರತಿಬಿಂಬವಾಗಬೇಕು.
ಸಾಹಿತ್ಯ ಜೀವನದಲ್ಲಿ ಅನ್ನ, ಬಟ್ಟೆ ವಸತಿಗಳನ್ನು ಒದಗಿಸಿಕೊಡುವುದಿಲ್ಲ. ಆದರೆ, ಉತ್ತಮ ಜ್ಞಾನವನ್ನು ನೀಡಿ
ಸನ್ಮಾರ್ಗದತ್ತ ತೆಗೆದುಕೊಂಡು ಹೋಗುತ್ತದೆ. ಜೀವನಕ್ಕೆ ಹೊಸ ದೃಷ್ಟಿಕೋನ ನೀಡಿ ಉತ್ತಮ ಸಂಸ್ಕೃತಿ, ಸಂಸ್ಕಾರದ ನಾಗರಿಕತೆಯತ್ತ ಕರೆದುಕೊಂಡು ಹೋಗುವ ಶಕ್ತಿ ಸಾಹಿತ್ಯಕ್ಕೆ ಇದೆ.
ಕನ್ನಡ ನಾಡು ನುಡಿಯ ಬೆಳವಣಿಗೆಗೆ ಅಗತ್ಯವಾಗಿರುವ ಕನ್ನಡ ಸಾಹಿತ್ಯ ಭವನದ ಅಗತ್ಯವಿದೆ.ಹೊಸಕೋಟೆ ತಾಲೂಕು ಕನ್ನಡ ಸಾಹಿತ್ಯ ಚಟುವಟಿಕೆ ಮತ್ತು ಉತ್ತಮ ಪರಂಪರೆಯನ್ನು ಹೊಂದಿರುವ ತಾಲೂಕಾಗಿದ್ದು,ಸಂಘ,ಸಂಸ್ಥೆಗಳು ಕನ್ನಡ ಬೆಳೆಸುವ ನಿಟ್ಟಿನಲ್ಲಿ ಹೆಚ್ಚು ಕ್ರಿಯಶೀಲತನೆಯನ್ನು ತೋರಬೇಕು ಎಂದರು.
ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹುಲಿಕಲಲ್ನಟರಾಜಜ್ಮಾತನಾಡಿ,ಇರತೆ ಭಾಷೆಗಳಿಗೆ ಸಿಕ್ಕಂತೆ ಕನ್ನಡಕ್ಕೂ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕದ್ದು,ಇದರಡಿಯಲ್ಲಿ ಸಿಗಬೇಕಿರುವ ಸೌಲಭ್ಯಗಳ ಮಾತ್ರ ಇನ್ನೂ ಸಿಕ್ಕಿಲ್ಲ.
ಈ ನಿಟ್ಟಿನಲ್ಲಿ ರಾಜ್ಯದ ಸಂಸದರು ಪಕ್ಷಾತೀತವಾಗಿ ಹೋರಾಟ ನಡೆಸಬೇಕು. ತಾಲೂಕಿನ ಯುವ ಕಲಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಇದಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರಾದ ಪ್ರೊ.ಚಂದ್ರಮೋಹನ್, ಜಿಲ್ಲಾಧ್ಯಕ್ಷ ಹುಲಿಕಲ್ ನಟರಾಜ್, ಶಾಸಕ ಎನ್. ನಾಗರಾಜ್ ಅವರನ್ನು ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ವೀರಗಾಸೆ ಕುಣಿತ, ಡೊಳ್ಳು ಕುಣಿತ, ಜಾನಪದ ನೃತ್ಯವು ಸಮ್ಮೇಳನಕ್ಕೆ ಕಳೆ ತಂದಿತ್ತು.
ಸಾಹಿತ್ಯ ಅಭಿಮಾನಿಗಳು, ವಿದ್ಯಾರ್ಥಿಗಳು ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದ್ದರು.
ಹೊಸಕೋಟೆ ಕಸಾಪ ಅಧ್ಯಕ್ಷ ಕೆ.ವಿ ಶ್ರೀಕಾಂತ್, ದೇವನಹಳ್ಳಿ ಕಸಾಪ ಅಧ್ಯಕ್ಷ ರಾಜ್‌ಗೋಪಾಲ್, ಬಿಒಇ ಬಸವರಾಜೇಗೌಡ, ಇಒ ಕೃಷ್ಣಪ್ಪ ಲೋಹಾರ್ ಸೇರಿದಂತೆ ಕಸಾಪ ಪದಾಧಿಕಾರಿಗಳು, ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement