ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆತ್ಮಸಾಕ್ಷಿ ಇಲ್ಲದ ಯೋಗೇಶ್ವರ್: ಅನಿತಾ ಕುಮಾರಸ್ವಾಮಿ

Srinivasa Murthy VN
Updated On : 3 Mar 2013, 12:05 pm

ಚನ್ನಪಟ್ಟಣ: ಯಾವುದೇ ಜನಪ್ರತಿನಿಧಿಯಲ್ಲದೆ ಕೆರೆ ಪೂಜೆ ಮಾಡುತ್ತಿರುವ ಯೋಗೇಶ್ವರ್‌ಗೆ ಆತ್ಮಸಾಕ್ಷಿ ಇದೆಯೇ ಎಂದು ಶಾಸಕಿ ಅನಿತಾಕುಮಾರಸ್ವಾಮಿ ಪ್ರಶ್ನಿಸಿದರು.
ಪಟ್ಟಣದ ಕೆಲ ವಾರ್ಡ್ ಗಳಲ್ಲಿ ತಮ್ಮ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯೋಗೇಶ್ವರ್ ಕೋಡಂಬಹಳ್ಳಿ ಗ್ರಾಮದಲ್ಲಿ ಕೆರೆ ಪೂಜೆ ಮಾಡುತ್ತಿದ್ದು ಇವರು ಪೂಜೆ ಮಾಡುತ್ತಿರುವುದರ ಅರ್ಥವಾದರೂ ಏನು ಎಂದು ಪ್ರಶ್ನಿಸಿದರು.
ಯೋಗೇಶ್ವರ್ ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿ ಇದೀಗ ಆ ಪಕ್ಷಕ್ಕೆ ಮೋಸಮಾಡಿ ಹೊರ ಬಂದಿದ್ದಾರೆ, ಇಂತಹವರ ವಿರುದ್ಧ ಸರ್ಕಾರವೇ ಕ್ರಮತೆಗೆದು ಕೊಳ್ಳಬೇಕು ಎಂದ ಅವರು ಜಿಲ್ಲಾಡಳಿತ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸಿದರು.
ಹಿಂದೆಲ್ಲ ಸೀರೆ, ದೇವಸ್ಥಾನ, ಗ್ಯಾಸ್, ಕೇಬಲ್ ಎಂದು ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಗೆಲುವು ಸಾಧಿಸಿರುವ ಯೋಗೇಶ್ವರ್ ಇದೀಗ ಅದೇ ಭ್ರಮೆಯಲ್ಲಿ ನೀರಾವರಿ ಎಂಬ ಹೊಸ ಗಿಮಿಕ್ ಆರಂಭಿಸಿದ್ದು ಒಂದು ಯೋಜನೆಗೆ ಹತ್ತಾರು ಬಾರಿ ಪೂಜೆಮಾಡಿ ಜನರನ್ನು ಮರಳು ಮಾಡುವ ಇವರಿಗೆ ಜನತೆಯೇ ತಕ್ಕುತ್ತರ ನೀಡಲಿದ್ದಾರೆ ಎಂದರು.
ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತನೀಡಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ, ನಿಮ್ಮೆಲ್ಲ ಸಮಸ್ಯೆಗಳಿಗೂ ನಮ್ಮ ಪಕ್ಷ ಪರಿಹಾರ ನೀಡಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಒಕ್ಕಲಿಗರ ಸಂಘದ ನಿರ್ದೇಶಕ, ಮುಖಂಡರಾದ ನಿಜಲಿಂಗೇಗೌಡ, ಹಾಪ್‌ಕಾಮ್ಸ್ ವರದರಾಜು, ಮಲ್ಲಿಕಾರ್ಜುನೇಗೌಡ,ತಾ.ಪಂ ಅಧ್ಯಕ್ಷೆ ಶಾಂತಮ್ಮ ಮಹೇಶ್, ನಗರ ಜೆಡಿಎಸ್ ಅಧ್ಯಕ್ಷ ಸತ್ಯನಾರಾಯಣ, ರಾಮಚಂದ್ರು, ವಿಶಾಲ್ ರಘು, ಮಾಸ್ತೀಗೌಡ, ಯುವ ಜೆಡಿಎಸ್‌ನ ಸತೀಶ್ ಬಾಬು, ಧರಣೀಶ್, ಯು.ಬಿ.ಚಂದ್ರು,  ಹರ್ಷಗೌಡ,  ಕೋಟೆ ಪ್ರಕಾಶ್,ವಿದ್ಯಾರ್ಥಿಘಟಕದ ಅಧ್ಯಕ್ಷ ಆಶೀಶ್, ನಾಗೇಂದ್ರ ಕೊಲೂರಿ, ಮಂಜುನಾಥ್,ಜಯಪ್ರಕಾಶ್, ಮತ್ತೀಕೆರೆ ಮೆಹರೀಷ್ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement