ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಟ್ಟಡ ಧ್ವಂಸ: 'ಕೈ' ವಿರುದ್ಧ ಆರೋಪ

Srinivasa Murthy VN
Updated On : 19 Mar 2013, 12:11 pm

ಮಾಗಡಿ: ಚುನಾವಣಾ ಪ್ರತೀಕಾರಕ್ಕೆ  ಟಿಎಪಿಸಿಎಂಎಸ್‌ನ ಈ-ಸ್ಟಾಂಪಿಂಗ್  ಕಟ್ಟಡವನ್ನು  ಕಾಂಗ್ರೆಸ್ಸಿಗರು ಧ್ವಂಸಗೊಳಿಸಿದ್ದಾರೆ ಎಂದು ಜೆಡಿಎಸ್ ಮುಖಂಡರು ಆರೋಪ ಮಾಡಿದ್ದಾರೆ. ಟಿಎಪಿಸಿಎಂಎಸ್‌ನ ಸಹಕಾರ  ಸಂಸ್ಥೆಗೆ  ಈ ಸ್ಟಾಂಪಿಂಗ್ ಮಳಿಗೆ ನಿರ್ಮಿಸಿಕೊಳ್ಳಲು ಪುರಸಭೆ  ನಿವೇಶನ ನೀಡಲು ಹಿಂದಿನ ಜೆಡಿಎಸ್ ಆಡಳಿತದ ಸದಸ್ಯರ ಪುರಸಭೆ ಸಾಮಾನ್ಯ ಸಭೆಯಲ್ಲಿ ಅನುಮತಿ ನೀಡಲಾಗಿತ್ತು. ಕಟ್ಟಡ ಕಾಮಗಾರಿಯೂ ನಡೆದಿತ್ತು. ಕಾಂಗ್ರೆಸ್ ಮುಖಂಡರಾದ  ಡಿ.ಸಿ.ಶಿವಣ್ಣ, ರಂಗಹನುಮಯ್ಯ, ವೆಂಕಟೇಶ್ ಬಾಬು ಅವರು ಧ್ವಂಸ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿ  ಟಿಎಪಿಸಿಎಂಎಸ್  ಕಾರ್ಯದರ್ಶಿ ವೆಂಕಟಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ  ಎಚ್.ಎನ್. ಅಶೋಕ್ ತಿಳಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement