ಮತದಾರರಿಗೆ ಅಭಿನಂದನೆ
ಕ.ಪ್ರ.ವಾರ್ತೆ, ರಾಮನಗರ, ಮಾ.22
ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವನ್ನು ಬೆಂಬಲಿಸಿರುವ ಮತದಾರರನ್ನು ಪಕ್ಷದ ಜಿಲ್ಲಾಧ್ಯಕ್ಷ ಮೊಹಮ್ಮದ್ ಫಾರೂಕ್ ಹಾಗೂ ಪ್ರಧಾನ ಕಾರ್ಯದರ್ಶಿ ಫೈರೋಜ್ ಅಲಿ ಖಾನ್ ಅಭಿನಂದಿಸಿದ್ದಾರೆ.
ಪಕ್ಷದಿಂದ ರಾಮನಗರದಲ್ಲಿ 4 ಹಾಗೂ ಕನಕಪುರದಲ್ಲಿ 3 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಈ ಚುನಾವಣೆಯಲ್ಲಿ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ನೇತೃತ್ವ ವಹಿಸಿದ್ದ ಮೊಹಮ್ಮದ್ ಫಾರೂಕ್ ಹಾಗೂ ಫೈರೋಜ್ ಅಲಿಖಾನ್ ಮತದಾರರನ್ನು ಕೋರಿದ್ದಾರೆ.
ಬೆರಳಚ್ಚು ಬಯೋವುಟ್ರಿಕ್ ನೀಡಿ
ಕ.ಪ್ರ.ವಾರ್ತೆ, ರಾಮನಗರ, ಮಾ.22
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಡಿ.2010ರ ಹಿಂದೆ ನೀಡಲಾಗಿದ್ದ ಎಲ್ಲಾ ಕಾಯಂ ಪಡಿತರ ಚೀಟಿ ಹೊಂದಿರುವವರು ಬೆರಳಚ್ಚು ಬಯೋವುಟ್ರಿಕ್ ನೀಡಬೇಕಿರುತ್ತದೆ. ಮಾ.31ರೊಳಗೆ ಹತ್ತಿರದ ಕೇಂದ್ರಗಳಲ್ಲಿ ಬೆರಳಚ್ಚು ಬಯೋವುಟ್ರಿಕ್ ನೀಡಬೇಕಾಗಿ ಸೂಚಿಸಿದೆ. ಜ.2011ರ ನಂತರ ಹೊಸ ಪಡಿತರ ಚೀಟಿ ಪಡೆದವರಿಗೆ ಈ ಪ್ರಕ್ರಿಯೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ತಿಳಿಸಿದ್ದಾರೆ.