ಇಂದು ಶರಣ ಸಂಗಮ- ಅರಿವಿನ ಅಂಗಳ ಧಾರ್ಮಿಕ ಸಮ್ಮೇಳನ
ಕ.ಪ್ರ. ವಾರ್ತೆ ಮಾಗಡಿ ಮಾ.23
ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದ ನೇತೃತ್ವದಲ್ಲಿ ಶರಣ ಸಂಗಮ- ಅರಿವಿನ ಅಂಗಳ ಧಾರ್ಮಿಕ ಸಮ್ಮೇಳನ ಮಾ.24 ರಂದು ಸಂಜೆ 4.30ಕ್ಕೆ ಇಲ್ಲಿನ ಡೂಂ ಲೈಟ್ ಡಾ.ಶಿವಕುಮಾರಸ್ವಾಮಿ ವೃತ್ತದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾಶಿವಯ್ಯ ತಿಳಿಸಿದ್ದಾರೆ.
ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘರಾಜೇಂದ್ರ ಶರಣರ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಶಿವಗಂಗೆ ಮೇಲಣಗವಿ ಮಹಾಸಂಸ್ಥಾನದ ಮಲಯ ಶಾಂತಮುನಿ ಶಿವಾಚಾರ್ಯಸ್ವಾಮೀಜಿ ಉಪನ್ಯಾಸ ನೀಡಲಿದ್ದಾರೆ.
ಮಾಜಿ ಸಚಿವ ಎಚ್.ಎಂ.ರೇವಣ್ಣ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶಾಸಕ ಎಚ್.ಸಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ಜಾನಪದ ಕಲಾ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ನೆಲಮಂಗಲ ಶಾಸಕ ಎಂ.ವಿ. ನಾಗರಾಜು ಇಲ್ಲಿನ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಚ್.ಎಂ. ಕೃಷ್ಣಮೂರ್ತಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.
ಸಮಾಜ ಸೇವಕ ಕೆ. ಬಾಗೇಗೌಡ, ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಪಿ. ರೇಣುಕಾರಾಧ್ಯ, ಮರಳಗವಿ ಮಠದ ಶಿವರುದ್ರಸ್ವಾಮಿ, ಗದ್ದುಗೆ ಮಠದ ಮಹಾಂತಸ್ವಾಮಿ, ಕಂಚಗಲ್ ಮಠದ ಬಸವಲಿಂಗಸ್ವಾಮಿ, ಗುಮ್ಮಸಂದ್ರ ಮಠದ ಚಂದ್ರಶೇಖರ ಸ್ವಾಮೀಜಿ, ಚಿಕ್ಕಮಸ್ಕಲ್ ಮಠದ ಬಸವಲಿಂಗಸ್ವಾಮಿ, ಚಿಲುಮೆ ಮಠದ ಬಸವಲಿಂಗಸ್ವಾಮಿ, ಮೂಡಲ ಮಠದ ಪಂಚಾಕ್ಷರಿಸ್ವಾಮಿ, ಪುರಸಭಾ ಸದಸ್ಯರಾದ ಶಿವರುದ್ರಮ್ಮ ವಿಜಯಕುಮಾರ್, ಎಂ.ಬಿ. ಮಹೇಶ್, ತಾ.ಪಂ ಇಓ ಕೆ.ಬಿ. ಅಕ್ಕೋಜಿ, ರಾಜ್ಯ ಸಂಘದ ಅಧ್ಯಕ್ಷ ಬಸವಲಿಂಗಯ್ಯ, ವೀರಶೈವ ಮಹಾಸಭಾ ಅಧ್ಯಕ್ಷ ಶಿವರುದ್ರಪ್ಪ, ಕಾರ್ಯದರ್ಶಿ ಗಂಗಾಧರಯ್ಯ, ಜಿಲ್ಲಾ ಗೌರವಾಧ್ಯಕ್ಷ ಮುದ್ದವೀರಪ್ಪ, ಚಿಕ್ಕಹೊನ್ನಗಂಗಯ್ಯ, ತಾ.ಸರ್ಕಾರಿ ನೌಕರರ ಸಂಘಧ ಅಧ್ಯಕ್ಷ ಟಿ.ಬಿ. ಗುಣಶೇಖರ್, ಟಿ.ಸಿ. ಬಸವರಾಜು, ರುದ್ರಮೂರ್ತಿ, ಪ್ರಭುದೇವ್, ವೈ.ಎನ್.ನಂಜುಂಡಯ್ಯ ಅರಸನಾಳ್, ದಿನೇಶ್, ಡಾ.ಸಿ. ರಾಜಶೇಖರ್ ಸೇರಿದಂತೆ ಇತರೆ ವೀರಶೈವ ಗಣ್ಯರು ಭಾಗವಹಿಸಲಿದ್ದಾರೆ.