ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬದ್ಧತೆ ಇರುವವರು ನಾಯಕರಾಗುತ್ತಾರೆ

Srinivasa Murthy VN
Updated On : 28 Mar 2013, 12:34 pm

ಬೆಂಗಳೂರು: ಯಾರಿಗೆ ಕೆಲಸದಲ್ಲಿ ಬದ್ದತೆ ಇರುತ್ತದೋ ಅವರು ಮುಂದೊಂದು ದಿನ ನಾಯಕರಾಗುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದ್ದಾರೆ.
ಸ್ನೇಹಸಂಭ್ರಮ ಬಳಗ ಮಾರುತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ. ಪಟೇಲ್ ಪಾಂಡು ಅವರಿಗೆ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಪಾಂಡು ಅವರನ್ನು ಅಭಿನಂದಿಸಿ ಮಾತನಾಡಿದರು. ಪಾಟೇಲ್ ಪಾಂಡು ಅವರು ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ನೌಕರರಿಗೆ ಅನುಕೂಲವಾಗಿದೆ. ಇವರಿಗೆ ಕೆಲಸದಲ್ಲಿ ಬದ್ದತೆ ಇದೆ. ಹೀಗಾಗಿ ಮುದೊಂದು ದಿನ ಇವರು ಸಂಘದ ಅಧ್ಯಕ್ಷರಾಗಬಹುದು. ಅಧ್ಯಕ್ಷ ಸ್ಥಾನ ಬಯಸುವುದು ತಪ್ಪಲ್ಲ. ಆದರೆ, ಅಧ್ಯಕ್ಷ ಸ್ಥಾನಕ್ಕಾಗಿಯೇ ಕೆಲಸ ಮಾಡುವುದು ತಪ್ಪು ಎಂದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ಬೈರಪ್ಪ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ವಿವಿ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್, ವಿ.ಎಂ. ನಾರಾಯಣ ಸ್ವಾಮಿ ಭಾಗವಹಿಸಿದ್ದರು.

ದೌರ್ಜನ್ಯವನ್ನು ಸಂಘ ಸಂಸ್ಥೆಗಳು ಖಂಡಿಸಲಿ
ಕ.ಪ್ರ. ವಾರ್ತೆ ಆನೇಕಲ್ಲು ಮಾ.27

ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ಸಂಘ ಸಂಸ್ಥೆಗಳು ಖಂಡಿಸಬೇಕು ಎಂದು ಪುರಸಭಾ ಮಾಜಿ ಉಪಾಧ್ಯಕ್ಷ ವೆಂಕಟೇಶ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಏರ್ಪಡಿಸಿದ್ದ ಭಾರತೀಯ ಜನ ಸೇವಾ ಸಂಘಟನೆಯ (ಬಿಜೆಎಸ್‌ಎಸ್) ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಭ್ರಷ್ಟಾಚಾರ ಪ್ರಕರಣಗಳು ಸಮಾಜದಲ್ಲಿ ಹೆಚ್ಚಾಗುತ್ತಿವೆ. ಇವುಗಳನ್ನು ವಿರೋಧಿಸುವ ಸಲುವಾಗಿ ಬಿಜೆಎಸ್‌ಎಸ್ ಸಂಘಟನೆಯನ್ನು ಸ್ಥಾಪಿಸಲಾಗುತ್ತಿದೆ. ಶುದ್ಧ ಸಮಾಜದ ನಿರ್ಮಾಣ ಮಾಡುವ ಕಾಯಕಕ್ಕೆ ನಾಂದಿ ಹಾಡಿರುವ ಅವರ ತತ್ವಗಳನ್ನು ಅನುಷ್ಠಾನಕ್ಕೆ ತರುವುದು ಸಂಘಟನೆಯ ಗುರಿ ಎಂದರು.  ಸಂಘಟನೆಯ ಮುಖಂಡ ಚಾಕಲೇಟ್ ಪ್ರಸಾದ್ ಮಾತನಾಡಿ ಯಾವುದೇ ರಾಜಕೀಯ ಪ್ರಭಾವವಿಲ್ಲದ  ಸಮಾಜ ಸೇವೆಯ ಗುರಿ ಹೊಂದಿರುವ ಸಂಘಟನೆಯನ್ನು ರೂಪಿಸಲಾಗುವುದು ಎಂದರು.  ಪುರಸಭಾ  ಮಾಜಿ ಉಪಾಧ್ಯಕ್ಷ ಬಿ.ಪಿ.ಮರಿಯಪ್ಪ, ಮಾಜಿ ಸದಸ್ಯರಾದ ಸಿ.ಬಾಬು, ಮಂಜುನಾಥ್, ಮತ್ತಿತರರು ಹಾಜರಿದ್ದರು.
ನೂತನ ಪಾದಾಧಿಕಾರಿಗಳು: ಗೌರವಾ ಧ್ಯಕ್ಷರಾಗಿ ಶ್ರೀನಿವಾಸ್, ಅಧ್ಯಕ್ಷರಾಗಿ ಮರಿಯಪ್ಪ, ಉಪಾಧ್ಯಕ್ಷರಾಗಿ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿಗಳಾಗಿ ಚಾಕಲೇಟ್ ಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆಯಾಗಿ ನಾಗರತ್ನ, ಉಪಾಧ್ಯಕ್ಷೆಯಾಗಿ ಗೌರಮ್ಮ, ಕೃಷ್ಣಮ್ಮ, ಪ್ರಾಧಾನ ಕಾರ್ಯದರ್ಶಿ, ಮುನಿವೆಂಕಟಮ್ಮ  ಖಜಾಂಚಿಯಾಗಿ ಸಭಯಲ್ಲಿ ನೇಮಕಗೊಂಡರು..

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement