ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಭಕ್ತರ ಸಮ್ಮುಖದಲ್ಲಿ ಕಲ್ಲುಗಾಲಿ ಬ್ರಹ್ಮರಥೋತ್ಸವ

Srinivasa Murthy VN
Updated On : 1 Apr 2013, 12:37 pm

ಕ.ಪ್ರ.ವಾರ್ತೆ ವಿಜಯಪುರ ಮಾ.31
ಇಲ್ಲಿನ ಗುರಪ್ಪನಮಠದಲ್ಲಿರುವ ಶ್ರೀ ಓಂಕಾರೇಶ್ವರ ಸ್ವಾಮಿ ಕಲ್ಲುಗಾಲಿ ರಥೋತ್ಸವ ಅದ್ಧೂರಿಯಾಗಿ  ನೆರವೇರಿತು.
ತುಮಕೂರು ಜಿಲ್ಲೆಯ ಪಟ್ಟನಾಯ್ಕನಹಳ್ಳಿಯ ಶ್ರೀ ಗುರುಗೊಮಡ ಬ್ರಹ್ಮೇಶ್ವರ ಸ್ವಾಮಿ ಸಂಸ್ಥಾನಮಠದ ಶ್ರೀ ನಂಜಾವಧೂತ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಪ್ರಯುಕ್ತ ದೇವಾಲಯದ ಸನ್ನಿಧಿಯಲ್ಲಿ ಶಿವಸಪ್ತಾಹ ಅಖಂಡ ಭಜನೆ ನಡೆದಿದ್ದು, ಶಿವಪಂಚಾಕ್ಷರೀ  ಮಹಾಮಂತ್ರ ಪಠಣ, ಪೂರ್ಣಾಹುತಿ , ಶಿವನಾಮ ಭಜನೆ ನಡೆಯಿತು.
ದೇವಾಲಯದಲ್ಲಿ ಅಂಕುರಾರ್ಪಣೆ , ಧ್ವಜಾರೋಹಣ ,ಗಿರಿಜಾ ಕಲ್ಯಾಣೋತ್ಸವ, ರುದ್ರಾಕ್ಷಿ ಮಂಟಪೋತ್ಸವ, ಅನ್ನಸಂತರ್ಪಣೆ ನಡೆಯಿತು. ರಥೋತ್ಸವವು ದೇವಾಲಯದ ಮುಂಭಾಗದಿಂದ ಜಿ.ಎಂ.ಸರ್ಕಲ್‌ವರೆಗೆ ಭಕ್ತರ ಜಯಘೋಷದೊಂದಿಗೆ ಎಳೆದು ರಾತ್ರಿ ಮತ್ತೆ ದೇವಾಲಯದವರೆಗೆ ಎಳೆಯಲಾಯಿತು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ, ಮೂಲ ದೇವರಿಗೆ ಹೂವಿನ ಅಲಂಕಾರ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ರಥೋತ್ಸವದಲ್ಲಿ ಕಾಂಗ್ರೆಸ್ ಯುವ ಮುಖಂಡ  ಮಂಜುನಾಥ್, ಪುರಸಭಾ ಸದಸ್ಯ ನಾಗರಾಜ್, ಮಹೇಶ್, ಮಾಜಿ ಪುರಸಭಾ ಸದಸ್ಯ ವೀರಣ್ಣ, ಮಾಜಿ ಪುರಸಭಾ ಸದಸ್ಯ ಟಿಲ್ಲರ್ ಮಂಜು , ಶ್ರೀ ಓಂಕಾರೇಶ್ವರ ಟ್ರಸ್ಟನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement