ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಿಬಿಎಂಪಿ ಉದ್ಯಾನವನ ನಿರ್ವಹಣೆ ಬಾಕಿ ಶೀಘ್ರವೇ ಬಿಡುಗಡೆ: ಸಿದ್ದಯ್ಯ

Srinivasa Murthy VN
Updated On : 17 May 2013, 12:33 pm

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಉದ್ಯಾನವನ ನಿರ್ವಹಣೆಯ ಗುತ್ತಿಗೆದಾರರಿಗೆ ನಾಲ್ಕೈದು ದಿನಗಳಲ್ಲಿ ಬಾಕಿ ಇರುವ ಶುಲ್ಕ ಪಾವತಿಸುವುದಾಗಿ ಪಾಲಿಕೆ ಆಯುಕ್ತ ಸಿದ್ದಯ್ಯ ತಿಳಿಸಿದ್ದಾರೆ.
  ಗುತ್ತಿಗೆದಾರರ ಮುಷ್ಕರದ ಹಿನ್ನೆಲೆಯಲ್ಲಿ ಆಯುಕ್ತರು ಬುಧವಾರ ಎಲ್ಲಾ ವಲಯದ ತೋಟಗಾರಿಕೆ ಅಧೀಕ್ಷಕರ ಸಭೆ ಕರೆದು ಉದ್ಯಾನ ನಿರ್ವಹಣೆಯಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಕೂಲಂಕಷ ಪರಿಶೀಲನೆ ನಡೆಸಿದರು.
   2009-10ರ ನಂತರ ಹೊಸ ಟೆಂಡರ್ ಕರೆಯದೆ ಹಳೆ ಗುತ್ತಿಗೆ ಸೇವೆ ಮುಂದುವರಿಸಲು ಕಾರಣವೇನು ಎಂಬುದರ ಕುರಿತು ಚರ್ಚೆ ನಡೆಸಿದರು. ಬೇಸಿಗೆ ಸಂದರ್ಭದಲ್ಲಿ ಉದ್ಯಾನಗಳ ನಿರ್ವಹಣೆ ಅತ್ಯಗತ್ಯವಾಗಿರುವುದರಿಂದ ಅದಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ತೋಟಗಾರಿಕೆ  ಅಧಿಕ್ಷಕರಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. ಉದ್ಯಾನಗಳ ನಿರ್ವಹಣೆಗಾಗಿ ಅವಶ್ಯವಾದ ಆಡಳಿತಾತ್ಮಕ ಅನುಮೋದನೆ, ಟೆಂಡರ್ ಪ್ರಕ್ರಿಯೆ ವಿಷಯಗಳ ಬಗ್ಗೆ ಗಮನ ಹರಿಸಿ ಕ್ರಮಬದ್ಧವಾಗಿ ನಿರ್ವಹಿಸುವಂತೆ ಅಧೀಕ್ಷಕರಿಗೆ ನಿರ್ದೇಶನ ನೀಡಲಾಗಿದೆ. ಗುತ್ತಿಗೆ ಮುಂದುವರಿಸುವುದನ್ನು ಸ್ಥಗಿತಗೊಳಿಸಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಬೇಕು ಎಂದು ಆಯುಕ್ತರು ಸೂಚನೆ ನೀಡಿದರು.

ಗಮಕ, ದೇವರನಾಮ ತರಗತಿ ಜುಲೈನಲ್ಲಿ
ಕರ್ನಾಟಕ ಗಮಕ ಕಲಾ ಪರಿಷತ್ತು ಗಮಕ ಹಾಗೂ ದೇವರನಾಮ ತರಗತಿಗಳನ್ನು ಜುಲೈ ತಿಂಗಳಿನಿಂದ ಪ್ರಾರಂಭಿಸಲಿದೆ. ನುರಿತ ಗಮಕಿಗಳು ಹಾಗೂ ಅಧ್ಯಾಪಕರು ತರಗತಿಗಳನ್ನು ನಡೆಸಲು ಪರಿಷತ್ತನ್ನು ಸಂಪರ್ಕಿಸಬಹುದು. ಅವಶ್ಯವಿದ್ದವರಿಗೆ ಪರಿಷತ್ತಿನಿಂದ ತರಬೇತಿ ನೀಡಲಾಗುವುದು ಮಾಹಿತಿಗೆ- 26622962, 8762265093.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement