ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಉಮಾಶ್ರೀ ಸಚಿವೆ, ಕೆ.ಆರ್.ಶ್ರೀನಿವಾಸ್ ಸಿಎಂ ಕಾರ್ಯದರ್ಶಿ: ಸಿದ್ದುಗೆ ಅಭಿನಂದನೆ

Srinivasa Murthy VN
Updated On : 19 May 2013, 12:38 pm

ದೊಡ್ಡಬಳ್ಳಾಪುರ: ರಾಜ್ಯ ಸಚಿವ ಸಂಪುಟಕ್ಕೆ ಶಾಸಕಿ ಉಮಾಶ್ರೀ ಅವರನ್ನು ಸೇರ್ಪಡೆ ಮಾಡಿಕೊಂಡು ಸಚಿವ ಸ್ಥಾನ ನೀಡಿರುವ ಕಾಂಗ್ರೆಸ್ ಹೈಕಮಾಂಡ್ ಮತ್ತು ಸಿಎಂ ಸಿದ್ಧರಾಮಯ್ಯ ಅವರನ್ನು ದೊಡ್ಡಬಳ್ಳಾಪುರದ ವಿವಿಧ ನೇಕಾರ ಸಂಘಟನೆಗಳು ಅಭಿನಂದಿಸಿವೆ. ಅದೇ ರೀತಿ ಕೆ.ಆರ್.ಶ್ರೀನಿವಾಸ್ ಅವರನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡಿರುವುದಕ್ಕೂ ಹರ್ಷ ವ್ಯಕ್ತಪಡಿಸಿವೆ.
ಉಮಾಶ್ರೀ ದೇವಾಂಗ ಸಮುದಾಯವನ್ನು ಪ್ರತಿನಿಧಿಸುವ ಏಕೈಕ ಶಾಸಕಿಯಾಗಿದ್ದು, ಅವರಿಗೆ ಮಂತ್ರಿಪದವಿ ದೊರೆತಿರುವುದು ಜನಾಂಗಕ್ಕೆ ಸಂದ ಗೌರವ. ಇಲ್ಲಿಯವರೆಗೆ ಜನಾಂಗದ ಯಾವ ಮಹಿಳೆಯೂ ಸಚಿವರಾಗಿರಲಿಲ್ಲ. ಉಮಾಶ್ರೀ ಸಚಿವರಾಗುವ ಮೂಲಕ ದೇವಾಂಗ ಜನಾಂಗದ ಮಹಿಳೆಯರಲ್ಲಿ ಹೊಸಶಕೆ ಆರಂಭವಾಗಿದೆ.
 ರಾಜಕೀಯವಾಗಿ ಪ್ರಾತಿನಿಧ್ಯಕ್ಕಾಗಿ ನಿರಂತರವಾಗಿ ಇದ್ದ ಬೇಡಿಕೆಗೆ ಕೊನೆಗೂ ಪ್ರಾಶಸ್ತ್ಯ ಸಿಕ್ಕಿದೆ. ಹಿಂದುಳಿದ ವರ್ಗಗಳಿಗೆ ಸೇರಿರುವ ನೇಕಾರ ಸಮುದಾಯ ರಾಜ್ಯದ 4ನೇ ಅತಿದೊಡ್ಡ ಸಮುದಾಯವಾಗಿದ್ದರೂ ಎಲ್ಲ ಹಂತಗಳಲ್ಲಿ ತುಳಿತಕ್ಕೊಳಗಾಗಿದೆ. ಪ್ರತಿ ಹಂತದಲ್ಲೂ ಜನಾಂಗದ ಪ್ರತಿನಿಧಿಗಳನ್ನು ಕಡೆಗಣಿಸಲಾಗುತ್ತಿದ್ದ ಇತಿಹಾಸ ಈಗ ಬದಲಾಗಿದೆ ಎಂದು ಸಂತಸ ವ್ಯಕ್ತಪಡಿಸಿವೆ.
ಬೆಂಗಳೂರು ಸುತ್ತಮುತ್ತ, ಉತ್ತರ ಕರ್ನಾಟಕದ ಬಹುಭಾಗಗಳೂ ಸೇರಿದಂತೆ ರಾಜ್ಯಾದ್ಯಂತ ಇರುವ ನೇಕಾರ ಸಮುದಾಯಗಳ ಅಭ್ಯುದಯ ಮತ್ತು ಬೆಳವಣಿಗೆಗೆ ಈ ಮುಖಂಡರು ಸಹಕರಿಸಬೇಕು. ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಪ್ರಗತಿಗೆ ಮಾರ್ಗದರ್ಶಿಯಾಗಬೇಕು. ಮುಂಬರುವ ದಿನಗಳಲ್ಲಿ ಜನಾಂಗದ ಮತ್ತಷ್ಟು ಜನ ಪ್ರಾತಿನಿಧಿಕವಾಗಿ ಆಡಳಿತಯಂತ್ರ ನಿರ್ವಹಿಸುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಶನಿವಾರ ನಡೆದ ದೇವಾಂಗ ಮಂಡಲಿಯ ಸಭೆಯಲ್ಲಿ ಅಭಿನಂದನಾ ನಿರ್ಣಯ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ದೊಡ್‌ಡಬಳ್ಳಾಪುರದಲ್ಲಿ ಕಾರ್ಯಕ್ರಮ ಏರ್ಪಡಿಸಿ, ನೂತನ ಸಚಿವೆ ಮತ್ತು ಸಿಎಂ ಕಾರ್ಯದರ್ಶಿ ಸೇರಿದಂತೆ ಗಣ್ಯರನ್ನು ಅಭಿನಂದಿಸಲಾಗುವುದು ಎಂದು ಅಧ್ಯಕ್ಷ ಎಂ.ಜಿ.ಶ್ರೀನಿವಾಸ್ ತಿಳಿಸಿದ್ದಾರೆ.
ಅದೇ ರೀತಿ ಇಲ್ಲಿನ ಶ್ರೀಗಾಯತ್ರಿ ಪೀಠ ಮಿತ್ರ ಬಳಗ ಟ್ರಸ್ಟ್, ಗಾಯತ್ರಿ ಪೀಠ ಯುವಬಳಗ ಮತ್ತು ಮಹಿಳಾ ಬಳಗ, ತೆಲುಗು ದೇವಾಂಗ ಸಂಘ, ಆಂಧ್ರದೇವಾಂಗ ಯೂತ್ಸ್ ಅಸೋಸಿಯೇಷನ್, ಪದ್ಮಶಾಲಿ ಸಂಘ, ತೊಗಟವೀರರ ಸಂಘ, ಸ್ವಕುಳಸಾಲಿ ಸಂಘ, ಪಟ್ಟಸಾಲಿ ಸಂಘ, ಕುರುಹಿನಶೆಟ್ಟಿ ಸಂಘ ಸೇರಿದಂತೆ ಹಲವು ನೇಕಾರ ಸಂಘಟನೆಗಳು ಅಭಿನಂದನೆ ಸಲ್ಲಿಸಿವೆ.

ಆಯುಕ್ತರಾಗಿ ಮರಳಿದ ಮಿರ್ಜಿ
ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರ ಸ್ಥಾನದಿಂದ ವರ್ಗಾವಣೆಗೊಂಡಿದ್ದ ಜ್ಯೋತಿಪ್ರಕಾಶ ಮಿರ್ಜಿ ಅವರನ್ನು ಮರಳಿ ನಗರ ಪೊಲೀಸ್ ಆಯುಕ್ತರಾಗಿ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement