ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವರದಕ್ಷಿಣೆಗಾಗಿ ಪತಿಯಿಂದಲೇ ಪತ್ನಿಗೆ ನೇಣು ಬಿಗಿದು ಕೊಲೆ

Srinivasa Murthy VN
Updated On : 19 May 2013, 12:39 pm

ರಾಮನಗರ: ನವವಿವಾಹಿತೆ ಗರ್ಭಿಣಿಯನ್ನು ವರದಕ್ಷಿಣೆಗಾಗಿ ಆಕೆಯ ಪತಿಯೇ ನೇಣು ಬಿಗಿದು ಕೊಲೆ ಮಾಡಿದ ಘಟನೆ ಆರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಕನಕಪುರ ತಾಲೂಕಿನ ಥಾಮಸಂದ್ರ ಗ್ರಾಮದ ಸುನೀತಾ (21) ಕೊಲೆಯಾದ ಗೃಹಿಣಿ. ಈಕೆಯನ್ನು ಕಳೆದ 10 ತಿಂಗಳ ಹಿಂದೆ ಹಳೆಗಬಾಡಿ ಗ್ರಾಮದ ರವಿಕುಮಾರ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ನಡುವೆ ಈಕೆ 6 ತಿಂಗಳ ಗರ್ಭಿಣಿಯಾಗಿದ್ದಳು. ವರದಕ್ಷಿಣಿ ತರುವಂತೆ ಪೀಡಿಸುತ್ತಿದ್ದ ರವಿಕುಮಾರ್ ಪತ್ನಿಗೆ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದ. ಶನಿವಾರ ಸಹ ವರದಕ್ಷಿಣೆಗಾಗಿ ಜಗಳವಾಡಿದ್ದಾರೆ. ಈತನ ತಂದೆ ಮರಿಯಪ್ಪ ಹಾಗೂ ತಾಯಿ ತಾಯಕ್ಕ ಮಗನಿಗೆ ಸಾಥ್ ನೀಡಿದ್ದರು. ಮೂವರು ಸೇರಿ ಸುನೀತಾಳನ್ನು ಮನಬಂದಂತೆ ಥಳಿಸಿ ನೇಣು ಬಿಗಿದು ಕೊಲೆ ಮಾಡಿದ್ದಾರೆ ಎಂದು ಸುನೀತಾಳ ಮಾವ ರಾಜು ಎಂಬುವವರು ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೆಪಿಸಿಸಿ ಕಚೇರಿ: ಕಾಣದ ಸಂಭ್ರಮ
ಬೆಂಗಳೂರು: ಪಕ್ಷ ಅಧಿಕಾರಕ್ಕೆ ಬಂದರೂ, ಪಕ್ಷದ ಕಚೇರಿಯಲ್ಲಿ ಇರಲಿಲ್ಲ ಸಂಭ್ರಮ..!
ಜನಜಂಗುಳಿಯಿಲ್ಲ, ಗಣ್ಯರ ಆಗಮನವಿಲ್ಲ, ಕಾರ್ಯಕರ್ತರ ವಿಜಯೋತ್ಸವ ಇಲ್ಲ. ಎಲ್ಲ ಇದ್ದೂ ಏನೂ ಇಲ್ಲದ ನೀರವ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿ ಶನಿವಾರ ಕಂಗೊಳಿಸಿದ ಪರಿ ಇದು. ಹೌದು. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ಕೆಪಿಸಿಸಿ ಮಾತ್ರ ಸೊರಗಿತ್ತು. ಇದಕ್ಕೆ ಪ್ರಧಾನ ಕಾರಣ ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಸೋಲು. ಜತೆಗೆ ಸಂಪುಟದಲ್ಲಿ ಸೇರುವುದಿಲ್ಲ ಎಂಬ ನಿರ್ಧಾರ. ಹೀಗಾಗಿ ಪಕ್ಷದ ಕಚೇರಿಯಲ್ಲಿ ಸಂಭ್ರಮದ ವಾತಾವರಣದ ಬದಲು, ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ ಎಂದು ನೊಂದ ನಾಯಕರ ಬೆಂಬಲಿಗರು ನಡೆಸಿದ ಪ್ರತಿಭಟನೆಗೆ ಸಾಕ್ಷಿಯಾಯಿತು. ಇದರ ಜತೆಗೆ ಸಚಿವರ ಪ್ರಮಾಣ ವಚನದ ನಂತರ ಸಂಪುಟ ಸಭೆ ನಡೆದಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸದಸ್ಯರು ವಿಧಾನಸೌಧಕ್ಕೆ ತೆರಳಿದರು. ನಂತರ ಖಾತೆ ಹಂಚಿಕೆ ಕಸರತ್ತು ನಡೆಯಿತು. ಹೀಗಾಗಿ ಯಾರಿಗೂ ಕೆಪಿಸಿಸಿ ಕಚೇರಿಯತ್ತ ತಲೆ ಹಾಕುವುದೇ ನೆನಪಾಗಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಕಾರ್ಯಕ್ರಮಕ್ಕೆ ತಡವಾಗಿ ಬಂದು ಬೇಗ ಹೊರಟು ಹೋದರು. ಮಾತ್ರವಲ್ಲ ಮಧ್ಯಾಹ್ನದ ಹೊತ್ತಿಗೆ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement