ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜವಳಿ ಪಾರ್ಕ್‌ಗಾಗಿ 29 ರಂದು ಸಿಎಂ ಭೇಟಿಗೆ ನೇಕಾರರ ನಿಯೋಗ

Srinivasa Murthy VN
Updated On : 21 May 2013, 1:15 am

ಬೆಳಗಾವಿ: ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಜವಳಿ ಪಾರ್ಕ್ ಸ್ಥಾಪನೆಗೆ ಚಾಲನೆ ನೀಡುವಂತೆ ಆಗ್ರಹಿಸಿ ಮೇ 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಬೆಳಗಾವಿ ನೇಕಾರರ ವೇದಿಕೆ ನಿಯೋಗ ಬೆಂಗಳೂರಿಗೆ ತೆರಳಲಿದೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ನೇಕಾರರ ವೇದಿಕೆ ಜಿಲ್ಲಾ ಕಾರ್ಯದರ್ಶಿ ಪರಶುರಾಮ ಢಗೆ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಕ್ಕೆ 6 ಜವಳಿ ಪಾರ್ಕ್‌ಗಳನ್ನು ಮಂಜೂರು ಮಾಡಿದ್ದು, ಇದರಲ್ಲಿ ಬರೀ ಒಂದೇ ಒಂದು ಟೆಕ್ಸ್‌ಟೈಲ್ ಪಾರ್ಕ್ ನಿರ್ಮಿಸಲಾಗಿದೆ. ನೆನೆಗುದಿಗೆ ಬಿದ್ದಿರುವ ಈ ಎಲ್ಲ ಯೋಜನೆಗಳನ್ನು ನಿರ್ಮಿಸುವ ಕಾಮಾಗಾರಿಗೆ ಚಾಲನೆ ನೀಡಬೇಕೆಂದು ಒತ್ತಾಯಿಸಲಾಗುವುದು ಎಂದರು.
ಬಡ ನೇಕಾರರ ಕುಟುಂಬಗಳಿಗೆ ಮನೆ ಕಟ್ಟಿಸಿ ಕೊಡಬೇಕು. ಶೇ.3ರ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಜವಳಿ ಮಾರುಕಟ್ಟೆ ಸಂಕೀರ್ಣ, ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ವಿತರಿಸುವ ಸೀರೆಯನ್ನು ನೇಕಾರರಿಂದಲೇ ಖರೀದಿಸಬೇಕು. ಜವಳಿ ಇಲಾಖೆ ಬಗ್ಗೆ ಮಾಹಿತಿ ಹೊಂದಿದ ಅಧಿಕಾರಿಗಳನ್ನೇ ಸರ್ಕಾರ ನೇಮಿಸಬೇಕೆಂದು ಒತ್ತಾಯಿಸಲಾಗುವುದು ಎಂದರು.  ಬೆಳಗಾವಿ, ಗದಗ, ತುಮಕೂರು ಜಿಲ್ಲೆಯ ನೇಕಾರರ ವೇದಿಕೆಯ ಪದಾಧಿಕಾರಿಗಳೊಳಗೊಂಡ ನಿಯೋಗ ಸಿಎಂ, ಜವಳಿ ಸಚಿವ ಹಾಗೂ ನೇಕಾರರ ನಾಯಕಿ ಉಮಾಶ್ರೀ ಅವರನ್ನು ಭೇಟಿ ಮಾಡಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement