ಬಿಎಸ್‌ಎನ್‌ಎಲ್ ಹೆಸರಲ್ಲಿ ವಂಚನೆ
ಬೆಂಗಳೂರು: ಕೆಲವು ದುಷ್ಕರ್ಮಿಗಳು ಗ್ರಾಹಕರನ್ನು ಬಿಎಸ್‌ಎನ್‌ಎಲ್ ಸಂಸ್ಥೆಯ ಸೇವೆಗಳಿಗಾಗಿ ಸಂಸ್ಥೆಯ ನೌಕರ ಸೋಗಿನಲ್ಲಿ ಸಂಪರ್ಕಿಸಿ ಹಣವನ್ನೂ ವಸೂಲಿ ಮಾಡಿ, ರಸೀತಿ ಕೊಡುತ್ತಿರುವುದು ಸಂಸ್ಥೆಯ ಗಮನಕ್ಕೆ ಬಂದಿದೆ. ಸಂಸ್ಥೆಯು ಅಂತಹ ಯಾವುದೇ ವ್ಯಕ್ತಿಗಳನ್ನು ನೇಮಕ ಮಾಡಿಲ್ಲ. ಆದ್ದರಿಂದ ಗ್ರಾಹಕರು ಯಾವುದೇ ವ್ಯಕ್ತಿ ಬಂದಾಗ ಬಿಎಸ್‌ಎನ್‌ಎಲ್ ಗ್ರಾಹಕ ಕೇಂದ್ರಗಳನ್ನು ಸಂಪರ್ಕಿಸಲು ಕೋರಲಾಗಿದೆ. ದೂ- 22864949 ಸಂಪರ್ಕಿಸಬಹುದು. ವಿಳಾಸಕ್ಕೆ ವೆಬ್‌ಸೈಟ್ www.bangaloretelecom.com ಸಂಪರ್ಕಿಸಬಹುದು.
ಗುರುಕುಲ ಪ್ರವೇಶಕ್ಕೆ ಅರ್ಜಿ
ರಾಮನಗರ: ಸಾಹಸ ಕಲಾ ಶಿಕ್ಷಣ ಕೇಂದ್ರದಿಂದ ರಾಮನಗರದಲ್ಲಿ ಪ್ರಾರಂಭಿಸಲಾಗಿರುವ ಜಾನಪದ ಗುರುಕುಲದ ಪ್ರವೇಶಕ್ಕಾಗಿ 8 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಬಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ. 13 ರಿಂದ 17 ವರ್ಷದೊಳಗಿನ ಬಾಲಕರಿಗೆ ಹೆಚ್ಚಿನ ವಿದ್ಯಾಭ್ಯಾಸದ ಜತೆಗೆ ಜಾನಪದ ಪ್ರದರ್ಶನ ಕಲೆಗಳಾದ ಕಂಸಾಳೆ, ಕೋಲಾಟ, ಪಟಕುಣಿತ, ಪೂಜಾ ಕುಣಿತ, ಜಾನಪದ ಗಾಯನ, ಜಾನಪದ ನಾಟಕ, ವೀರಗಾಸೆ, ಜಾನಪದ ಸಮರ ಕಲೆಗಳು, ಸಾಹಸ ಕ್ರೀಡೆಗಳಾದ ಗರಡಿ ಕುಸ್ತಿ, ಮಲ್ಲಕಂಬ, ಹಗ್ಗದ ವರಸೆ, ದೊಣ್ಣೆ ವರಸೆ, ಕತ್ತಿ ವರಸೆ ಸೇರಿದಂತೆ ಇನ್ನಿತರೆ ಕಲೆಗಳ ಅಭ್ಯಾಸ ಮತ್ತು ಅಧ್ಯಯನವಿರುತ್ತದೆ. ಹೆಚ್ಚಿನ ಮಾಹಿತಿಗೆ ದೂ.080- 27271022, ಮೊಣ9481456357 ಸಂಪಕಿಸಬಹದು ಎಂದು ಸಾಹಸ ಕಲಾ ಶಿಕ್ಷಣ ಕೇಂದ್ರದ ನಿರ್ದೇಶಕ ಹಾಸನ ರಘು ತಿಳಿಸಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ನೀಡಲು ಅರ್ಜಿ
ರಾಮನಗರ: ಮೈಸೂರಿನ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರವು ಅಂಧ, ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿಯಲ್ಲಿ ಡಿಪ್ಲೊಮೊ ಕೋರ್ಸನ್ನು ಕನ್ನಡ ಮಾಧ್ಯಮದಲ್ಲಿ ನೀಡಲು ಅರ್ಜಿ ಆಹ್ವಾನಿಸಿದೆ. ತರಬೇತಿ ಪಡೆಯಲು 10-2 ಅಥವಾ ಪಿಯುಸಿ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, 2013ರ ಜೂ.1ರ ಸಂಜೆ 5ಕ್ಕೆ ಮುಕ್ತಾಯವಾಗುವುದು. ಜೂ.10 ರಿಂದ ಜೂ.17ರವರೆಗೆ ಆನ್ ಲೈನ್ ಮೂಲಕ ಪ್ರವೇಶ ಪತ್ರ ಪಡೆದುಕೊಳ್ಳಬಹುದು. ಮಾಹಿತಿಗೆ ಸಂಸ್ಥೆಯ ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದು.
ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ರಾಮನಗರ: ಒಕ್ಕಲಿಗ ಜನಾಂಗದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಒಂದು ಲಕ್ಷ ನಗದು ನೀಡುವ ರಾಜ್ಯ ಮಟ್ಟದ ಪುರಸ್ಕಾರಕ್ಕೆ ರಾಜ್ಯ ಒಕ್ಕಲಿಗರ ಒಕ್ಕೂಟವು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಜತೆಗೆ ನಗರ ಪ್ರದಶೇದ ವಿದ್ಯಾರ್ಥಿಗಳಿಗೂ ಆದ್ಯತೆ ನೀಡಿ, ಶೇಕಡಾವಾರು ಅಂಕಗಳ ಆಧಾರದ ಮೇಲೆ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಅರ್ಹ ವಿದ್ಯಾರ್ಥಿಗಳು ನಕಲು ಅಂಕಪಟ್ಟಿಯ ಜತೆಗೆ ಜಾತಿ ಪ್ರಮಾಣ ಪತ್ರದ ನಕಲಿನೊಂದಿಗೆ ಪೋಷಕರ ವಿವರಗಳ ಸಮೇತ ಜೂನ್ 30ರೊಳಗೆ ಅರ್ಜಿಯನ್ನು ಅಧ್ಯಕ್ಷರು, ರಾಜ್ಯ ಒಕ್ಕಲಿಗರ ಒಕ್ಕೂಟ, ನಂ.133-1, ಶೋಭಾ ಟವರ್, ಗಾಂಧಿಬಜಾರ್ ಸರ್ಕಲ್, ಬಸವನಗುಡಿ, ಬೆಂಗಳೂರು- 560004 ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಮೊ.9986548536, 9345640705 ಸಂಪರ್ಕಿಸುವಂತೆ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಆರ್.ವೆಂಕಟೇಶ್ ತಿಳಿಸಿದ್ದಾರೆ.
ಭಯೋತ್ಪಾದನಾ ವಿರೋಧಿ ದಿನ: ಪ್ರಮಾಣ ವಚನ
ರಾಮನಗರ: ಭಯೋತ್ಪಾದನಾ ವಿರೋಧೀ ದಿನದ ಅಂಗವಾಗಿ ಮಂಗಳವಾರ ಕಂದಾಯ ಭವನದಲ್ಲಿ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಕಂದಾಯ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಯೋತ್ಪಾದನಾ ವಿರೋಧಿ ದಿನ ಪ್ರಮಾಣ ವಚನ ಸ್ವೀಕರಿಸಿದರು. ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದ ಭವ್ಯ ಪರಂಪರೆಯಲ್ಲಿ ದಣಢ ವಿಶ್ವಾಸವುಳ್ಳ ಭಾರತದ ಪ್ರಜೆಗಳಾದ ನಾವು ಎಲ್ಲಾ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ನಮ್ಮೆಲ್ಲ ಶಕ್ತಿ ಸಾಮರ್ಥ್ಯದಿಂದ ಎದುರಿಸುತ್ತೇವೆ. ನಮ್ಮ ಸಹಭಾಂಧವರಲ್ಲಿ ಶಾಂತಿ, ಸಾಮಾಜಿಕ ಸೌಹಾರ್ಧತೆ ಮತ್ತು ಪರಸ್ಪರ ಅರಿವನ್ನು ಸಾಧಿಸಲು, ಉತ್ತೇಜಿಸಲು ಮತ್ತು ಮಾನವ ಜೀವಕ್ಕೆ ಹಾಗೂ ಮೌಲ್ಯಗಳಿಗೆ ಬೆದರಿಕೆಯೊಡ್ಡುತ್ತಿರುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಡಲು ನಾವು ಪಣ ತೊಡುತ್ತೇವೆ ಎಂದು ಪ್ರಮಾಣ ಮಾಡಿದರು.
ಸಗಟು ಖರೀದಿಅರ್ಜಿ ಆಹ್ವಾನ
ರಾಮನಗರ: ಕನ್ನಡ ಪುಸ್ತಕ ಪ್ರಾಧಿಕಾರವು 2010ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಾಗಿ ಮುದ್ರಣಗೊಂಡ ಕನ್ನಡ ಪುಸ್ತಕಗಳನ್ನು ಪ್ರಾಧಿಕಾರದ ಸಗಟು ಖರೀದಿ ಯೋಜನೆಯಡಿ ಖರೀದಿಸಲು ಅರ್ಜಿ ಆಹ್ವಾನಿಸಿದೆ. ನಿಗದಿತ ಅರ್ಜಿ ನಮೂನೆಯನ್ನು ಜೂ.5 ರವರೆಗೆ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಕಚೇರಿ ಹಾಗೂ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಜೂ.15ರ ಸಂಜೆ 5ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560002 ದೂ.080-22484516, 22107704 ಸಂಪರ್ಕಿಸಬಹುದು.
ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ರಾಮನಗರ: 2013-14ನೇ ಸಾಲಿಗೆ ರಂಗಶಿಕ್ಷಣದಲ್ಲಿ ಒಂದು ವರ್ಷದ ಡಿಪ್ಲೋಮಾ ಕೋರ್ಸಿಗೆ ದ್ವಿತೀಯ ಪಿಯುಸಿ ಪಾಸಾಗಿರುವ 18 ರಿಂದ 28 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಹೆಯಾನ ರು.2000 ವಿದ್ಯಾರ್ಥಿ ವೇತನ ಹಾಗೂ ಉಚಿತ ವಸತಿ ಕಲ್ಪಿಸಲಾಗುವುದು. ಒಂದು ವರ್ಷದ ರಂಗಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಯು ಮುಂದಿನ ಎರಡು ವರ್ಷಗಳು ಹೆಚ್ಚಿನ ವೃತ್ತಿಪರ ನಟನಾ ಪರಿಣತಿ ತರಬೇತಿಗಾಗಿ ರಂಗಾಯಣ ರೆಪರ್ಟರಿಯಲ್ಲಿ ಕಿರಿಯ ಕಲಾವಿದನಾಗಿ ಒಪ್ಪಂದದ ಮೇಲೆ ಎರಡು ವರ್ಷ ಸೇವೆ ಸಲ್ಲಿಸಬೇಕು. ಈ ಎರಡು ವರ್ಷದ ಅವಧಿಯಲ್ಲಿ ನಿಗದಿತ ಸಂಭಾವನೆ ನೀಡಲಾಗುವುದು. ರಂಗಶಾಲೆಗೆ ಸೇರಬಯಸುವ ವಿದ್ಯಾರ್ಥಿಯು ರಂಗಾಯಣದ ಕಚೇರಿ ಅವಧಿಯಲ್ಲಿ ಖುದ್ದಾಗಿ ಅಥವಾ ರು.50ರ ಡಿಡಿ ಅಥವಾ ಮನಿ ಆರ್ಡರ್ ಅನ್ನು ನಿರ್ದೇಶಕರು, ರಂಗಾಯಣ ಇವರ ಹೆಸರಿನಲ್ಲಿ ಪಡೆದು, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು-570005 ಇಲ್ಲಿಗೆ ಮೇ 30ರೊಳಗೆ ಕಳುಹಿಸಬೇಕು. ನಂತರ ಪರಿಚಯ ಪತ್ರಿಕೆ ಹಾಗೂ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜೂ.15ರೊಳಗೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು. ವಿದ್ಯಾರ್ಥಿಗಳ ಪ್ರತಿಭೆ ಮತ್ತು ರಂಗಾಸಕ್ತಿಯನ್ನು ಪ್ರಧಾನವಾಗಿ ಪರಿಗಣಿಸಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಸಂದರ್ಶನವನ್ನು ಜೂ.20 ಮತ್ತು 21 ರಂದು ರಂಗಾಯಣದ ಆವರಣದಲ್ಲಿ ನಡೆಸಲಾಗುವುದು. ಶಾಲೆಯು ಜು.1ರಿಂದ ಪ್ರಾರಂಭವಾಗುವುದರಿಂದ ಆಯ್ಕೆಯಾದ ವಿದ್ಯಾರ್ಥಿಗಳು ಜೂ.30 ರೊಳಗೆ ಶಾಲೆಗೆ ಪ್ರವೇಶವನ್ನು ಪಡೆದುಕೊಳ್ಳಬೇಕು. ಮಾಹಿತಿಗೆ ದೂ: 0821-2512639, ಮೊ. 9448322815 ಸಂಪರ್ಕಿಸಬಹುದು.