ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಲಾಟರಿ ಮೂಲಕ ಮರು ಆಯ್ಕೆ

Srinivasa Murthy VN
Updated On : 23 May 2013, 12:28 pm

ರಾಮನಗರ: 2013-14ನೇ ಸಾಲಿನಲ್ಲಿ ತಾಲೂಕಿನ ಖಾಸಗಿ ಅನುದಾನಿತ ಶಾಲೆಗಳಲ್ಲಿ ಒಂದನೇ ತರಗತಿಗೆ ಆರ್‌ಟಿಇ ಯೋಜನೆಯಡಿಯಲ್ಲಿ ಆಯ್ಕೆಯಾಗದೆ ಉಳಿದ ಸೀಟುಗಳಿಗೆ ಅಭ್ಯರ್ಥಿಗಳನ್ನು ಲಾಟರಿ ಮೂಲಕ ಮರು ಆಯ್ಕೆ ಮಾಡಲಾಗುವುದು.
ಮೇ 24ರಂದು ಬಿಡದಿಯ ಸೆಂಟ್ ಥಾಮಸ್ ಹಿರಿಯ ಪ್ರಾಥಮಿಕ ಶಾಲೆ, ವಿಶ್ವಸಾಯಿ ಹಿರಿಯ ಪ್ರಾಥಮಿಕ ಶಾಲೆ, ಎಸ್‌ಎಲ್‌ಎನ್ ಶಾಲೆ, ಸಿಮ್ರಾನ್ ಶಾಲೆ, ರಾಮನಗರದ ನೇತಾಜಿ ಪಾಪುಲರ್ ಶಾಲೆ, ಶಾಂತಿನಿಕೇತನ ಶಾಲೆ, ಯೂನಿವರ್ಸಲಲ್ಶಾಲೆಯಲ್ಲಿ ಲಾಟರಿ ಪ್ರಕ್ರಿಯೆ ನಡೆಯಲಿದೆ.  ಮೇ 25 ರಂದು ಬಿಡದಿಯ ಜೆವಿಎನ್ ಪಿಎಸ್, ಬೈರಮಂಗಲದ ತ್ಯಾಗರಾಜ ಸೆಂಟ್ರಲ್ ಶಾಲೆ, ಲಕ್ಷ್ಮೀಸಾಗರದ ಸುವಿಶೇಷ ಜ್ಞಾನಪೀಠ ಶಾಲೆ, ರಾಮನಗರದ ಎಂ.ಹೆಚ್. ಶಾಲೆ, ವಾಸವಿ ಹಿರಿಯ ಪ್ರಾಥಮಿಕ ಶಾಲೆ, ತಿಲಕ್ ಶಾಲೆಗಳಲ್ಲಿ ಲಾಟರಿ ಪ್ರಕ್ರಿಯೆ ನಡೆಯಲಿದೆ.
ಮೇ 27 ರಂದು ಜಾಲಮಂಗಲದ ಟಿ.ಗಿರಿಯಪ್ಪ ಶಾಲೆ, ಶ್ಯಾನುಭೋಗನಹಳ್ಳಿಯ ಅರುಣೋದಯ ಪಬ್ಲಿಕ್ ಶಾಲೆ, ರಾಮನಗರದ ಹೋಲಿಕ್ರೆಸೆಂಟ್ ಶಾಲೆ. ಮೇ 28 ರಂದು ಬೈರಮಂಗಲದ ಶ್ರೀ ವಾಗ್ದೇವಿ ಶಾಲೆ, ಲಕ್ಷ್ಮೀಸಾಗರದ ಮಹರ್ಷಿ ಇಂಟರ್ ನ್ಯಾಷನಲ್ ಶಾಲೆ, ರಾಮನಗರ ಪವಿತ್ರ ರಾಷ್ಟ್ರೀಯ ವಿದ್ಯಾಲಯ ಶಾಲೆಗಳಲ್ಲಿ ಲಾಟರಿ ಮೂಲಕ ಈಗಾಗಲೇ ಅರ್ಜಿ ಸಲ್ಲಿಸಿದ್ದು, ಆಯ್ಕೆಯಾಗಿರದ ವಿದ್ಯಾರ್ಥಿಗಳನ್ನು ಮರು ಆಯ್ಕೆ ಮಾಡಲಾಗುವುದು.
ಉಳಿಕೆ ಸೀಟುಗಳ ಬಗ್ಗೆ ಮಾಹಿತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಥವಾ ಮೇಲ್ಕಂಡ ಶಾಲಾ ಕಚೇರಿಯನ್ನು ಸಂಪರ್ಕಿಸಬಹುದು ಎಂದು ರಾಮನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿಕೆಂಪೇಗೌಡ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement