ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಲಾಟರಿ ಮೂಲಕ ವಿದ್ಯಾರ್ಥಿ ಆಯ್ಕೆ

Srinivasa Murthy VN
Updated On : 23 May 2013, 11:40 am

ರಾಮನಗರ: 2013-14ನೇ ಸಾಲಿನಲ್ಲಿ ತಾಲೂಕಿನ ಖಾಸಗಿ ಅನುದಾನಿತ ಶಾಲೆಗಳಲ್ಲಿ ಒಂದನೇ ತರಗತಿಗೆ ಆರ್‌ಟಿಇ ಯೋಜನೆಯಡಿಯಲ್ಲಿ ಆಯ್ಕೆಯಾಗದೆ ಉಳಿದ ಸೀಟುಗಳಿಗೆ ಅಭ್ಯರ್ಥಿಗಳನ್ನು ಲಾಟರಿ ಮೂಲಕ ಮರು ಆಯ್ಕೆ ಮಾಡಲಾಗುವುದು. ಮೇ 24ರಂದು ಬಿಡದಿಯ ಸೆಂಟ್ ಥಾಮಸ್ ಹಿರಿಯ ಪ್ರಾಥಮಿಕ ಶಾಲೆ, ವಿಶ್ವಸಾಯಿ ಹಿರಿಯ ಪ್ರಾಥಮಿಕ ಶಾಲೆ, ಎಸ್‌ಎಲ್‌ಎನ್ ಶಾಲೆ, ಸಿಮ್ರಾನ್ ಶಾಲೆ, ರಾಮನಗರದ ನೇತಾಜಿ ಪಾಪುಲರ್ ಶಾಲೆ, ಶಾಂತಿನಿಕೇತನ ಶಾಲೆ, ಯೂನಿವರ್ಸಲಲ್ಶಾಲೆಯಲ್ಲಿ ಲಾಟರಿ ಪ್ರಕ್ರಿಯೆ ನಡೆಯಲಿದೆ.  ಮೇ 25 ರಂದು ಬಿಡದಿಯ ಜೆವಿಎನ್ ಪಿಎಸ್, ಬೈರಮಂಗಲದ ತ್ಯಾಗರಾಜ ಸೆಂಟ್ರಲ್ ಶಾಲೆ, ಲಕ್ಷ್ಮೀಸಾಗರದ ಸುವಿಶೇಷ ಜ್ಞಾನಪೀಠ ಶಾಲೆ, ಎಂ.ಹೆಚ್. ಶಾಲೆ, ವಾಸವಿ ಹಿರಿಯ ಪ್ರಾಥಮಿಕ ಶಾಲೆ, ತಿಲಕ್ ಶಾಲೆಗಳಲ್ಲಿ ಲಾಟರಿ ಪ್ರಕ್ರಿಯೆ ನಡೆಯಲಿದೆ. ಮೇ 27 ರಂದು ಜಾಲಮಂಗಲದ ಟಿ.ಗಿರಿಯಪ್ಪ ಶಾಲೆ, ಅರುಣೋದಯ ಪಬ್ಲಿಕ್ ಶಾಲೆ, ಹೋಲಿಕ್ರೆಸೆಂಟ್ ಶಾಲೆ. ಮೇ 28 ರಂದು ಬೈರಮಂಗಲದ ಶ್ರೀ ವಾಗ್ದೇವಿ ಶಾಲೆ, ಮಹರ್ಷಿ ಇಂಟರ್ ನ್ಯಾಷನಲ್ ಶಾಲೆ, ಪವಿತ್ರ ರಾಷ್ಟ್ರೀಯ ವಿದ್ಯಾಲಯ ಶಾಲೆಗಳಲ್ಲಿ ಲಾಟರಿ ಮೂಲಕ ಈಗಾಗಲೇ ಅರ್ಜಿ ಸಲ್ಲಿಸಿದ್ದು, ಆಯ್ಕೆಯಾಗಿರದ ವಿದ್ಯಾರ್ಥಿಗಳನ್ನು ಮರು ಆಯ್ಕೆ ಮಾಡಲಾಗುವುದು.

ಕಂಪ್ಯೂಟರ್ ಆಪರೇಟರ್‌ಗಳ ವೇತನ ಬಿಡುಗಡೆ
ಬೆಂಗಳೂರು:
ಬಿಬಿಎಂಪಿ ಕಂಪ್ಯೂಟರ್ ಆಪರೇಟರ್‌ಗಳು ವೇತನಕ್ಕಾಗಿ ಪ್ರತಿಭಟಿಸುತ್ತಿದ್ದ ಹಿನ್ನೆಲೆಯಲ್ಲಿ ಆಯುಕ್ತ ಸಿದ್ದಯ್ಯ ಬುಧವಾರ ರು. 2.9ಕೋಟಿ ಬಿಡುಗಡೆಗೊಳಿಸಿದರು. ಕಂಪ್ಯೂಟರ್ ಆಪರೇಟರ್‌ಗಳಿಗೆ ಬಿಬಿಎಂಪಿ ಕಿಯೋನಿಕ್ಸ್ ಸಂಸ್ಥೆ ಮೂಲಕ ವೇತನ ನೀಡುತ್ತಿದೆ. ಆದರೆ, ಕಿಯೋನಿಕ್ಸ್ ಸಕಾಲಕ್ಕೆ ಬಿಲ್ ಸಲ್ಲಿಸದೆ ವೇತನ ಬಿಡುಗಡೆ ವಿಳಂಬವಾಗಿತ್ತು. ಇನ್ನು ಮುಂದೆ ಹೀಗಾದಂತೆ ಸಕಾಲಕ್ಕೆ ಬಿಲ್ ಸಲ್ಲಿಸಿ ವೇತನ ಪಡೆಯಬೇಕೆಂದು ಸಿದ್ದಯ್ಯ ಹೇಳಿದರು. ವೇತನ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಕಂಪ್ಯೂಟರ್ ಆಪರೇಟರ್‌ಗಳು ಗುರುವಾರದಿಂದ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲಿದ್ದು, ಸೇವೆಗಳು ಎಂದಿನಂತಿರುತ್ತವೆ ಎಂದು ಅವರು ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement