ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹೊಸಕೋಟೆ ಸಮಗ್ರ ಅಭಿವೃದ್ಧಿಗೆ ಬದ್ಧ: ಶಾಸಕ ಎಂಟಿಬಿ ನಾಗರಾಜ್

Srinivasa Murthy VN
Updated On : 25 May 2013, 11:59 am

ಸೂಲಿಬೆಲೆ: ಹೊಸಕೋಟೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದು, ಸಮರ್ಥ ಮತ್ತು ದಕ್ಷ ಆಡಳಿತ ನಡೆಸಲು ಅಧಿಕಾರಿಗಳ ಸಹಕಾರ ಅಗತ್ಯವಾಗಿದೆ ಎಂದು ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.
ಸೂಲಿಬೆಲೆ ಟೌನ್ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಏರ್ಪಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಜನರ ಅಭಿಲಾಷೆಗೆ ತಕ್ಕಂತೆ ಕೆಲಸ ಮಾಡಲು ಅಧಿಕಾರಿಗಳು ಸಿದ್ಧರಿರಬೇಕು. ಈ ನಿಟ್ಟಿನಲ್ಲಿ ಅಶಿಸ್ತು ಸಹಿಸವುದಿಲ್ಲ. ಕಾರ್ಯಕರ್ತರು ಜನರ ಸಮಸ್ಯೆಗಳನ್ನು ಅರಿತು ಕೆಲಸ ಮಾಡಬೇಕು ಎಂದರು. ಸೂಲಿಬೆಲೆ ತಾಪಂ ಮಾಜಿ ಸದಸ್ಯ ಚನ್ನಪ್ಪ, ರಮೇಶ್, ರಾಘವೇಂದ್ರ, ಮೌಲಖಾನ್,ಅಮ್ಜಾದ್ ಮತ್ತಿತರರು ನೂತನ ಶಾಸಕರಿಗೆ ಶಾಲು ಹೊದಿಸಿ ಅಭಿನಂದನೆ ಸಲ್ಲಿದರು.

28 ರಂದು ರೇಷ್ಮೆ ಇಲಾಖೆ ಕಚೇರಿಗೆ ರೈತರ ಮುತ್ತಿಗೆ
ದೇವನಹಳ್ಳಿ:
ರೇಷ್ಮೆ ಮೊಟ್ಟೆ ಹಾಗೂ ಚಾಕಿ ದುಬಾರಿ ಬೆಲೆ ಏರಿಕೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ರೇಷ್ಮೆ ಬೆಳೆಗಾರರ ಹಿತ ರಕ್ಷಣಾ ಸಮಿತಿ ಕಾರ್ಯಕರ್ತರಿಂದ ಮೇ 28 ರಂದು ಬೆಂಗಳೂರಿನ ರೇಷ್ಮೆ ಇಲಾಖೆ ಆಯುಕ್ತರ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಜಿಲ್ಲಾ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ ಜಿ.ಎಂ.ಕಲ್ಯಾಣ ಕುಮಾರ್ ತಿಳಿಸಿದ್ದಾರೆ. ದೇವನಹಳ್ಳಿ ತಾಲೂಕು ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚನ್ನರಾಯಪಟ್ಟಣ ಜನಾರ್ದನ್ ಮತ್ತಿತರರು ಉಪಸ್ಥಿತರಿದ್ದರು.  

ಜೂನ್-ಜುಲೈನಲ್ಲಿ ಕರಾಮುವಿ ಪರೀಕ್ಷೆ
ರಾಮನಗರ:
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 2013ರ ಜೂನ್, ಜುಲೈ ಮಾಹೆಯಲ್ಲಿ ವಾರ್ಷಿಕ ಪರೀಕ್ಷೆ ನಡೆಸಲಿದೆ. ಪರೀಕ್ಷಾ ಶುಲ್ಕ ಪಾವತಿಸಲು ದಂಡ ಶುಲ್ಕ ವಿಲ್ಲದೆ ಜೂನ್ 10 ಕಡೆಯ ದಿನ. ರು.200 ದಂಡದೊಂದಿಗೆ ಜೂನ್ 20 ಕಡೆಯ ದಿನ.
ಶುಲ್ಕದ ವಿವರ: ಎಂಎಸ್ಸಿ ಪ್ರಥಮ ಸೆಮಿಸ್ಟರ್ ಹಾಗೂ ತೃತೀಯ ಸೆಮಿಸ್ಟರ್, ಎಂಎಸ್ಸಿ ಸೈಕಾಲಜಿ ಪ್ರಥಮ ಹಾಗೂ ದ್ವಿತೀಯ ವರ್ಷಗಳ ವಾರ್ಷಿಕ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕ ಒಂದು ಪತ್ರಿಕೆಗೆ ರು.600, 2 ಪತ್ರಿಕೆಗೆ ರು.900, 3 ಮತ್ತು ಹೆಚ್ಚಿನ ಪತ್ರಿಕೆಗಳಿಗೆ ಹಾಗೂ ಪೂರ್ಣ ಪರೀಕ್ಷೆಗೆ ರು.1500.
ಶುಲ್ಕ ಪಾವತಿಸುವ ಅರ್ಜಿಯನ್ನು ಅಂಚೆ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸಲಾಗಿದೆ. ತಲುಪದಿರುವ ವಿದ್ಯಾರ್ಥಿಗಳು ಪ್ರಾದೇಶಿಕ ನಿರ್ದೇಶಕರ ಕಚೇರಿ, ಪ್ರಾದೇಶಿಕ ಕೇಂದ್ರ, ರಾಮನಗರ ಇಲ್ಲಿ ಖುದ್ದಾಗಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ರಾಮನಗರ ಪ್ರಾದೇಶಿಕ ಕಚೇರಿ ದೂ.080- 27274443 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement