ಕ್ಷುಲ್ಲಕ ಕಾರಣಕ್ಕೆ ಸುತ್ತಿಗೆಯಿಂದ ಹೊಡೆದು ಕೊಲೆ
ಕ.ಪ್ರ. ವಾರ್ತೆ ಆನೇಕಲ್ಲು ಮೇ 26
ಕೂಲಿ ಕಾಸು ಹಂಚಿಕೆಯಲ್ಲಿನ ವ್ಯತ್ಯಾಸಕ್ಕಾಗಿ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯ ನೀಲಾದ್ರಿ ಅಪಾರ್ಟ್ಮೆಂಟ್ ಬಳಿ ನಡೆದಿದೆ.
ಕೊಲೆ ಮಾಡಿದವ ಕೃಷ ್ಣ(40). ನಾಗಪ್ಪ (50) ಕೊಲೆಯಾದವ. ಮೂಲತಃ ಆಂಧ್ರದವರಾದ ಇವರು ಕಳೆದ 6 ತಿಂಗಳಿಂದ ಮನೆ ಕಟ್ಟುವಲ್ಲಿ ಸೆಂಟ್ರಿಂಗ್ ಮಟೀರಿಯಲ್ ಪೂರೈಕೆ ಮಾಡುತ್ತಿದ್ದರು.
ಶನಿವಾರ ಬಂದ ಬಟವಾಡೆ ಹಂಚಿಕೆ ವಿಷಯದಲ್ಲಿ ಮನಸ್ಥಾಪ ಬಂದು ಸಂಜೆಯೇ ಜಗಳ ನಡೆಯಿತು. ಸಹ ಕಾರ್ಮಿಕರು ಇಬ್ಬರ ಜಗಳ ಬಿಡಿಸಿ ನ್ಯಾಯ ಮಾಡಿದ್ದರೂ ಸಂಜೆ ಕುಡಿದು ಬಂದ ಕೃಷ್ಣ ಸುತ್ತಿಗೆಯಿಂದ ನಾಗಪ್ಪನ ತಲೆಗೆ ಬಡಿದು ಸಾಯಿಸಿದ ಎಂದು ಪೊಲೀಸರು ತಿಳಿಸಿದರು.
ಎಲೆಕ್ಟ್ರಾನಿಕ್ ಸಿಟಿ ಪಿಎಸ್ಸೈ ಮತ್ತು ಸಿಬ್ಬಂದಿ ಗೋಪಾಲ ಎಂಬುವವನನ್ನು ಬಂಧಿಸಿದ್ದು ಕೃಷ್ಣನ ಪತ್ತೆಗೆ ಬಲೆ ಬೀಸಲಾಗಿದೆ ಎಂದಿದ್ದಾರೆ.