ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವೀರಸಾಗರ ಕಾಡಿನಲ್ಲಿ ಕಾಡಾನೆಗಳ ಬಿಡಾರ

Srinivasa Murthy VN
Updated On : 15 Nov 2013, 12:49 pm

ನೆಲಮಂಗಲ: ತಾಲೂಕಿನ ವೀರಸಾಗರ ಕಾಡಿನಲ್ಲಿ ನಿರೀಕ್ಷೆಯಂತೆ ಕಾಡಾನೆಗಳು ಬಿಡಾರ ಹೂಡಿವೆ. 3 ಕಾಡಾನೆಗಳು ಮತ್ತೆ ತಾಲೂಕಿಗೆ ಹಿಂತಿರುಗುತ್ತಿರುವ ಹಿನ್ನೆಲೆಯಲ್ಲಿ ನೆಲಮಂಗಲ ತಾಲೂಕು ಅರಣ್ಯಾಧಿಕಾರಿಗಳು ಈ ಆನೆಗಳ ಚಲನ ವಲನದ ಬಗ್ಗೆ ನಿಗಾ ವಹಿಸಿದ್ದು ಈ ಆನೆಗಳನ್ನು ನೆರೆಯ ಮಾಗಡಿ ತಾಲೂಕಿನ ಮೂಲಕ ಮತ್ತೆ ಸಾವನದುರ್ಗ ಕಾಡಿನ ಕಡೆ ಓಡಿಸಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆನೆಗಳನ್ನು ಓಡಿಸುವಾಗ ಸಾರ್ವಜನಿಕರು ಜಾಗೃತರಾಗಿದ್ದು ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಹಕಾರ ನೀಡಿದರೆ ಶೀಘ್ರವಾಗಿ ಆನೆಗಳನ್ನು ಸಾವನದುರ್ಗದ ಕಾಡಿಗೆ ಸೇರಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅರಣ್ಯಾಧಿಕಾರಿ ತಿಮ್ಮಯ್ಯ. ಕಳೆದ ತಿಂಗಳು ಆನೆಗಳು ದಾಳಿ ನಡೆಸಿದ್ದ ಸಂದರ್ಭದಲ್ಲಿ ತಾಲೂಕಿನ ವೀರಸಾಗರ, ಶ್ರೀಪತಿಹಳ್ಳಿ, ಕಲ್ಲಳ್ಳಯ್ಯನಪಾಳ್ಯ ಗ್ರಾಮಗಳಲ್ಲಿ ಬೆಳೆದು ನಿಂತಿದ್ದ ರಾಗಿ, ಬತ್ತ, ಟೊಮೋಟೋ, ಹುರುಳಿ, ಹೀರೇಕಾಯಿ, ಅಡಕೆ, ಬಾಳೆ, ತೆಂಗು ಹೀಗೆ ಸಿಕ್ಕ ಸಿಕ್ಕ ಬೆಳೆಯನ್ನೆಲ್ಲಾ ತಿಂದು ಹಾಳು ಮಾಡಿದ್ದವು.  ರಾತ್ರಿ ಈ ಆನೆಗಳನ್ನು ಶಿವಗಂಗೆ ಬೆಟ್ಟದ ಸಮೀಪದಿಂದ ಮುಂದೆ ಸಾಗಿಸಲು ಕಾರ್ಯತಂತ್ರ ರೂಪಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಮಡಿವಾಳ ಮಾಚಿದೇವರ ಪ್ರತಿಷ್ಠಾಪನೆ ಇಂದು
ದೊಡ್ಡಬಳ್ಳಾಪುರ:
ಶ್ರೀಮಡಿವಾಳ ಮಾಚಿದೇವರ ಸಂಘದ ನೇತೃತ್ವದಲ್ಲಿ ಮಾಚಿದೇವರ ಮತ್ತು ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಪ್ರತಿಷ್ಠಾಪನಾ ಕಾರ್ಯಕ್ರಮ ನ.15ರ ಶುಕ್ರವಾರ ತಾಲೂಕಿನ ಕಂಟನಕುಂಟೆ ಗ್ರಾಮದಲ್ಲಿ ನಡೆಯಲಿದೆ. ಶ್ರೀಶಿವಯೋಗಾನಂದಸ್ವಾವುಜಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಟಿ.ವೆಂಕಟರಮಣಯ್ಯ ಮತ್ತು ಕಿಮ್ಸ್ ಮಾಜಿ ಅಧ್ಯಕ್ಷ ಬಿ.ಮುನೇಗೌಡ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಜೆ.ನರಸಿಂಹಸ್ವಾಮಿ, ಉಪನ್ಯಾಸಕ ಮೂಡಲಗಿರಿಯಪ್ಪ, ಸಂಘದ ರಾಜ್ಯಾಧ್ಯಕ್ಷ ಆವತಿ ನಂಜಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement