ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದಾಸ ಸಾಹಿತ್ಯದ ಅನರ್ಘ್ಯ ರತ್ನ ಕನಕ: ಜೋಷಿ

Srinivasa Murthy VN
Updated On : 21 Nov 2013, 12:51 pm

ಚನ್ನಪಟ್ಟಣ: ಭಗವಂತನ ಸಾನ್ನಿಧ್ಯಕ್ಕೆ ಭಕ್ತಿರಸವೇ ಪ್ರಧಾನ ಎಂಬುದನ್ನು ಜಗತ್ತಿಗೆ ಸಾಕ್ಷೀಕರಿಸಿದ ಮಹಾನ್ ದಾರ್ಶನಿಕ ಕನಕದಾಸರು ಎಲ್ಲ ಜಾತಿ, ಮತ ಮೀರಿದ ಅನಿಕೇತನ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮಧುಸೂದನಾಚಾರ್ಯ ಜೋಷಿ ತಿಳಿಸಿದರು.
ತಾಲೂಕು ಆಡಳಿತದ ವತಿಯಿಂದ ನಗರಸಭೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಕನಕದಾಸರಂತಹ ದಾಸ ಸಾಹಿತ್ಯದ ಅನರ್ಘ್ಯ ರತ್ನವನ್ನು ಜಾತಿ- ಪಂಥದ ದೃಷ್ಟಿಕೋನದಿಂದ ನೋಡಿದರೆ ಅವರ ನಿಜವಾದ ವ್ಯಕ್ತಿತ್ವ ಕಾಣುವುದಿಲ್ಲ. ದಾಸರು ಜಾತಿಯ ಸಂಕೊಲೆಗಳನ್ನು ದಾಟಿ ತಾತ್ವಿಕ ಪ್ರಯೋಗಗಳನ್ನು ನಡೆಸುವ ಮೂಲಕ ದಾಸ ಸಾಹಿತ್ಯಕ್ಕೆ ವಿಶ್ವಮಾನ್ಯತೆ ತಂದು ಕೊಟ್ಟ ಮಹಾನ್ ದಾರ್ಶನಿಕ ಎಂದರು.
ಶಾಸಕ ಸಿ.ಪಿ. ಯೋಗೇಶ್ವರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರವನ್ನು ಶಾಲಾ ಮಕ್ಕಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಶಿವರುದ್ರಪ್ಪ, ಗ್ರೇಡ್-2 ತಹಸೀಲ್ದಾರ್ ಶಿವಸ್ವಾಮಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ತಾಪಂ ಅಧ್ಯಕ್ಷೆ ಪವಿತ್ರಾ, ಪೌರಾಯುಕ್ತ ಜಗದೀಶ್, ಬಿಇಒ ಶಿವಪ್ಪ, ಸಿಡಿಪಿಒ ಪುಟ್ಟಸ್ವಾಮಿ, ನಗರಸಭಾ ಸದಸ್ಯರಾದ ವೆಂಕಟೇಶ್, ರಮೇಶ್ಬಾಬು, ಜಕೀ ಅಹಮದ್ಖಾನ್, ಲಿಯಾಕತ್ ಆಲಿಖಾನ್, ಪಿ. ಮಧು, ಎಇಇ ನಾಟೇಕರ್, ನಾರಾಯಣಗೌಡ ಉಪಸ್ಥಿತರಿದ್ದರು.

'ಜಾತಿ ಎಂಬ ಅಜ್ಞಾನ ತೊಲಗಲಿ'
ಮಾಗಡಿ: ಜಾತಿ ಎಂಬ ಅಜ್ಞಾನ ಸಮಾಜದಲ್ಲಿ ತೊಲಗಬೇಕಿದೆ ಎಂದು ಒಕ್ಕಲಿಗರ ಸಂಘದ ಕಾರ್ಯದರ್ಶಿ, ವಕೀಲ ಡಿ.ಎಚ್. ಮಲ್ಲಿಕಾರ್ಜುನಯ್ಯ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಶ್ರೀ ವಿದ್ಯಾನಿಧಿ, ಕೆಂಪೇಗೌಡ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಜಾತಿ ಪದ್ಧತಿ ನಿರ್ಮೂಲನೆ, ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ಸಾರಿದ ಮಹಾನ್ ಸಂತ ಕನಕದಾಸರು ಎಂದರು.
ಮುಖ್ಯ ಶಿಕ್ಷಕ ರಾಮಾಂಜನೇಯ, ಶಿಕ್ಷಕರಾದ ಚಂದ್ರಪ್ಪ, ಶಿವಕುಮಾರ್, ಶಿವಯೋಗಿ, ಧನಲಕ್ಷ್ಮೀ, ವಿದ್ಯಾರ್ಥಿಗಳಾದ ದೀಪಕ್ ಗೌಡ, ಗುರುಪ್ರಸಾದ್, ಸುಮಾ, ಚಂದನ, ಸಾಗರ್, ರವಿಕುಮಾರ್, ಹೇಮಂತ್, ರಚನಾ, ಬಿಂದುಶ್ರೀ ಇತರರು ಕನಕದಾಸರ ಬಾಲ್ಯ, ಬದುಕು, ಜೀವನ, ಸಾಧನೆ ಕುರಿತು ಮಾತನಾಡಿದರು. ಕನಕದಾಸ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪೋಷಕ ಬೋಧಕ ಸಮಿತಿ ಅಧ್ಯಕ್ಷ ಟಿ.ಎಂ. ಶ್ರೀನಿವಾಸ್ ತಿಳಿಸಿದರು.
ಶಿಕ್ಷಕ ಅರ್ಜುನ್ ಸ್ವಾಗತಿಸಿದರು. ಶಿಕ್ಷಕ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು, ರೇಣುಕಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement