ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಿವೇಶನ ದುರ್ಬಳಕೆ ತಡೆಗೆ ಆಗ್ರಹ

Srinivasa Murthy VN
Updated On : 22 Nov 2013, 12:16 pm

ಮಾಗಡಿ: ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಲು ಮೀಸಲಿಟ್ಟ ನಿವೇಶನದಲ್ಲಿ ಹಾಲಿನ ಡೈರಿ ಮತ್ತು ರಾಜೀವ್‌ಗಾಂಧಿ ಭವನ ನಿರ್ಮಿಸಲು ಮುಂದಾಗಿರುವುದನ್ನು ಪಂಚಾಯ್ತಿ ಕೈಬಿಡದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಬಿ.ಜೆ. ನರಸಿಂಹಮೂರ್ತಿ ಎಚ್ಚರಿಸಿದ್ದಾರೆ.
ತಾಪಂಗೆ ಭೇಟಿ ನೀಡಿದ ಜಿಪಂ ಸಿಇಒ ಡಾ. ವೆಂಕಟೇಶ್‌ಗೆ ಬಿ.ಜೆ. ನರಸಿಂಹಮೂರ್ತಿ ಈ ವಿಷಯ ಪ್ರಸ್ತಾಪಿಸಿ ನಿವೇಶನ ದುರ್ಬಳಕೆಯಾಗದಂತೆ ತಡೆಯುವಂತೆ ಸಿಇಒ ಅವರಲ್ಲಿ ಮನವಿ ಮಾಡಿದರು.
ತಾಲೂಕಿನ ಬೆಳಗುಂಬ ಗ್ರಾಮದಲ್ಲಿರುವ ಹರಿಜನ ಕಾಲೋನಿಯಲ್ಲಿ ತಗ್ಗೀಕುಪ್ಪೆ ಪಂಚಾಯ್ತಿ ವತಿಯಿಂದ ಸೈಟ್ ನಂ.31ನ್ನು ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಲು ನಿವೇಶನವನ್ನು ನೀಡಿದ್ದು, ದಾಖಲಾತಿ ಸಹ ಮಾಡಿಕೊಡಲಾಗಿತ್ತು. ದುರಂತವೆಂದರೆ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಲು ಮೀಸಲಟ್ಟ ನಿವೇಶನದಲ್ಲಿ ಹಾಲಿನ ಡೈರಿ ಮತ್ತು ರಾಜೀವ್‌ಗಾಂಧಿ ಭವನ ನಿರ್ಮಿಸಲು ಮುಂದಾಗಿರುವ ಗ್ರಾಪಂ ಕ್ರಮ ಖಂಡನೀಯವಾದುದು. ಒಂದು ವೇಳೆ ಡೈರಿ ಮತ್ತು ರಾಜೀವ್ ಗಾಂಧಿ ಭವನ ನಿರ್ಮಿಸಲು ಮುಂದಾದರೆ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳುವುದಾಗಿ ಬಿ.ಜೆ. ನರಸಿಂಹಮೂರ್ತಿ ತಿಳಿಸಿದರು.
ಬೆಳಗುಂಬ ಗ್ರಾಮದಲ್ಲಿರುವ ಹರಿಜನ ಕಾಲೋನಿಯ ನಿವೇಶನವನ್ನು ಕಬಳಿಸುವ ಮತ್ತು ದಲಿತರನ್ನು ಒಕ್ಕಲೆಬ್ಬಿಸುವ ಮೂಲಕ ಅಸ್ಪಶ್ಯತೆಗೆ ಇಂಬು ನೀಡುವ ಹುನ್ನಾರವಾಗಿದೆ. ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವ ಆಲೋಚನೆ ಸಹ ಮಾಡಲಾಗಿದೆ ಎಂದು ತಾ.ಪಂ. ಅಧ್ಯಕ್ಷ ಜಿ. ಕೃಷ್ಣ ಮತ್ತು ಸಿಇಒ ಅವರಿಗೆ ಮನವರಿಕೆ ಮಾಡಿದರು. ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಕಾರ್ಯಾಧ್ಯಕ್ಷ ಜಿ. ಪ್ರಕಾಶ್, ನರಸಿಂಹಯ್ಯ, ಗೋಪಾಲ್, ಬಿ.ವಿ. ಶ್ರೀನಿವಾಸಮಮೂರ್ತಿ, ಓಬಳಯ್ಯ, ಉಮೇಶ್, ಮಂಜುನಾಥ್, ಶ್ರೀನಿವಾಸಮೂರ್ತಿ, ಗೋವಿಂದರಾಜು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement