29ರಿಂದ ಸಹಸ್ತ್ರ ಚಂಡಿಕಾ ಮಹಾಯಜ್ಞ
ಕನಕಪುರ: ತಮಿಳುನಾಡಿನ ಗಡಿಪ್ರದೇಶದ ರಾಜಾಪುರ ವೀರಧರ್ಮ ಸಿಂಹಾಸನ ಮಹಾಸಂಸ್ಥಾನದ ದ್ವಾದಶ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಸಹಸ್ತ್ರ ಚಂಡಿಕಾ ಮಹಾಯಜ್ಞ, 108 ಗುರುಗಳ ಮಂಟಪ ಪೂಜಾ ಮಹೋತ್ಸವ, ಅತಿರುದ್ರ ಮಹಾಯಾಗ ಹಾಗೂ ದ್ವಾದಶ ಜ್ಯೋತಿರ್ಲಿಂಗಗಳ ಪ್ರತಿಷ್ಠಾಪನಾ ಮಹೋತ್ಸವ ನ.29ರಿಂದ ಡಿ.8ರವರೆಗೆ ನಡೆಯಲಿದೆ, ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜಾ ವಿಧಿ-ವಿಧಾನಗಳು ನಡೆಯಲಿವೆ, ಆನೇಕಲ್ ತಾಲೂಕು ಪೆನ್ನಾಘರ ಸಮೀಪದ ರಾಜಾಪುರ ಮಠದ ಆವರಣದಲ್ಲಿ ನಡೆಯುವ ಈ ಬೃಹತ್ ಸಮಾರಂಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮರಳವಾಡಿ ಉಮಾಶಂಕರ್ ಕೋರಿದ್ದಾರೆ.