ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕ್ಯಾನ್‌ಫಿನ್ ಹೋಮ್ಸ್ ಶಾಖೆ ಉದ್ಘಾಟನೆ

Srinivasa Murthy VN
Updated On : 23 Nov 2013, 1:16 am

ದೇವನಹಳ್ಳಿ:  ಕ್ಯಾನ್‌ಫಿನ್ ಹೋಮ್ಸ್ ಬ್ಯಾಂಕ್‌ನ 77 ನೇ ಶಾಖೆಯನ್ನು ಇಲ್ಲಿನ ಟಿಪ್ಪುಸುಲ್ತಾನ್ ರಸ್ತೆಯ ರಾಜಾರಾವ್ ಕಟ್ಟಡದಲ್ಲಿ ಉದ್ಘಾಟಿಸಲಾಯಿತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೀನಿಯರ್ ಡೈರಕ್ಟರ್ ಭಾಸ್ಕರ್ ಬೋಡಪತಿ ನೂತನ ಶಾಯನ್ನು ಉದ್ಘಾಟಿಸಿ ದೇವನಹಳ್ಳಿ ತಾಲೂಕು ಮುಂದಿನ ಕೆಲವೇ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳವಣಿಗೆಯಾಗಲಿದ್ದು, ವಸತಿ ಕಟ್ಟಡಗಳು ಮತ್ತು ಸಮುಚ್ಚಯಗಳು ಹೆಚ್ಚಾಗಲಿದೆ. ಬ್ಯಾಂಕಿನಿಂದ ಸಾರ್ವಜನಿಕರಿಗೆ ಮನೆ ಕಟ್ಟಿಕೊಳ್ಳಲು ಆರ್ಥಿಕ ಸಾಲ ಸೌಲಭ್ಯ ನೀಡುವಂತೆ ತಿಳಿಸಿ, ಈ ಭಾಗದ ಜನರ ಪ್ರಗತಿಯೊಂದಿಗೆ ನಿಮ್ಮ ಬ್ಯಾಂಕ್ ಸಹ ಬೆಳೆಯಲಿ ಎಂದರು.  ಬ್ಯಾಂಕಿನ ಮ್ಯಾನೇಜಿಂಗ್ ಡೈರಕ್ಟರ್ ಇಲಾಂಗೊ ಮಾತನಾಡಿ ಕೆನರಾ ಬ್ಯಾಂಕಿನ ಪ್ರಾಯೋಜಕದಲ್ಲಿ ನಡೆಯುತ್ತಿರುವ ಈ ಬ್ಯಾಂಕ್‌ನಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಇಚ್ಛಿಸುವವರಿಗೆ ಶೀಘ್ರ ಸಾಲ ಮಂಜೂರಾತಿ, 30 ವರ್ಷಗಳವರೆಗೆ ಹಣ ಮರುಪಾವತಿ, ಅಲ್ಲದೆ ಉತ್ತಮ ಸೇವೆ ನೀಡಲಿದೆ ಎಂದು ಹೇಳಿದರು. ಸಹಕಾರ ನಗರ ಶಾಖೆಯ ಸಂಜಯ್‌ಕುಮಾರ್, ಶಾಖಾ ವ್ಯವಸ್ಥಾಪಕ ಎಚ್.ಎನ್.ವಸಂತಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement