ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗರ್ಭಿಣಿ ಕೊಲೆ ಪ್ರಕರಣ; ನಾಲ್ವರ ಬಂಧನ

Srinivasa Murthy VN
Updated On : 23 Nov 2013, 1:15 am

ರಾಮನಗರ: ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಗೊಲ್ಲರಹಟ್ಟಿಯಲ್ಲಿ ಕಳೆದ ಭಾನುವಾರ ನಡೆದಿದ್ದ ಗರ್ಭಿಣಿ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕುಂಬಳಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಭುವನೇಶ್ವರಿನಗರದ ರಾಜ, ಮಂಜುನಾಥ, ಶಿವರಾಜ್ ಮತ್ತು ಹನುಮಂತ ಎಂಬುವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಪ್ರಮುಖ ಆರೋಪಿ ಸೊಲ್ಲಾಪುರಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಘಟನೆ ವಿವರ: ಗರ್ಭಿಣಿ ಮುನಿವೆಂಕಟಮ್ಮ ಅವರನ್ನು ನ.17ರಂದು ದೊಡ್ಡಗೊಲ್ಲರಹಟ್ಟಿಯ ತನ್ನ ಮನೆಯಲ್ಲಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತನ್ನ ಸೋದರ ಮಾವನೊಂದಿಗೆ ಮದುವೆಯಾಗಿದ್ದ ಈಕೆ 6 ತಿಂಗಳಲ್ಲೇ ಗಂಡನಿಂದ ಬೇರ್ಪಟ್ಟು ಒಂಟಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಸೊಲ್ಲಾಪುರಿ ಎಂಬ ವ್ಯಕ್ತಿ ಜತೆ ವಾಸಿಸುತ್ತಿದ್ದ ಈಕೆ ಗರ್ಭಿಣಿಯಾಗಿದ್ದರು. ಇದನ್ನು ತಿಳಿದ ಸೊಲ್ಲಾಪುರಿ ಮೊದಲ ಹೆಂಡತಿ ಮಕ್ಕಳಾದ ಮಂಜುನಾಥ ಮತ್ತು ರಾಜ ಎಂಬುವರು ಮಗು ಹುಟ್ಟಿದರೆ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಆಸ್ತಿಯಲ್ಲಿ ಪಾಲು ಕೇಳಬಹುದು ಎನ್ನುವ ದುರಾಲೋಚನೆಯಿಂದ ತನ್ನ ಸ್ನೇಹಿತರಾದ ಶಿವರಾಜ್ ಮತ್ತು ಹನುಮಂತ ಎಂಬುವರ ಸಹಾಯದಿಂದ ನ.17ರಂದು ಮುನಿವೆಂಕಟಮ್ಮನ ಕತ್ತು ಕೊಯ್ದು ಕೊಲೆ ಮಾಡಿದ್ದರು. ಕೊಲೆಗೆ ಸೊಲ್ಲಾಪುರಿಯ ಕುಮ್ಮಕ್ಕು ಇದೆ ಎಂದು ಹೇಳಲಾಗುತ್ತಿದ್ದು, ಆತನ ಸುಳಿವು ಪತ್ತೆಯಾಗಿಲ್ಲ. 5 ದಿನಗಳಲ್ಲೇ ಪ್ರಕರಣವನ್ನು ಬೇಧಿಸಿದ ಇನ್ಸ್‌ಪೆಕ್ಟ್‌ರ್ ಮಂಜುನಾಥ್ ಅವರನ್ನು ಎಸ್‌ಪಿ ಅನುಪಮ್ ಅಗ್ರವಾಲ್ ಅಭಿನಂದಿಸಿದ್ದಾರೆ.

ಅಪಘಾತ; ಗಾಯಾಳು ಸಾವು
ಚನ್ನಪಟ್ಟಣ: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿರುವ ಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ರಾಮನಗರ ತಾಲೂಕಿನ ಹೆಬ್ಬಗೋಡಿಯ ಪುಟ್ಟಸ್ವಾಮಿ(60) ಮೃತ ದುರ್ದೈವಿಯಾಗಿದ್ದು ಕೆಂಗಲ್ ಸಮೀಪದ ನ.19ರಂದು ಶನಿಮಹಾತ್ಮೆ ದೇವಾಲಯದ ಬಳಿ ನಡೆದುಕೊಂಡು ಹೋಗುತ್ತಿರುವಾಗ ವಾಹನವೊಂದು ಡಿಕ್ಕಿ ಹೊಡೆದು ಹೋಗಿದ್ದು ತೀವ್ರ ಗಾಯಗೊಂಡಿದ್ದ ಇತನನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ನ.21ರ ರಾತ್ರಿ ಕೊನೆಯುಸಿರೆಳೆದಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement