ಜನಜಾಗೃತಿ ಸಮಿತಿಗೆ ರಾಜಗೋಪಾಲ್ ಆಯ್ಕೆ
ದೇವನಹಳ್ಳಿ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ಕಳೆದ ನಾಲ್ಕು ತಿಂಗಳ ಹಿಂದೆ ರಚನೆಯಾಗಿದ್ದು, ಈಗ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಕೆ.ನಾಗರಾಜ್ ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕೆಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ಸಾಮಾನ್ಯ ಜನರ ಮತ್ತು ರೈತರ ಶೋಷಣೆಯಾಗುತ್ತಿದೆ ಎಂದು ಅಧ್ಯಕ್ಷ ನಾಗರಾಜ್ ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ- ಹೊಸಕೋಟೆ ಎಂ. ರಾಜಗೋಪಾಲ್, ದೇವನಹಳ್ಳಿ ಸುಧಾಕರ್ ಹಾಗೂ ಕೆ.ಆರ್. ನಾಗರಾಜ್- ಉಪಾಧ್ಯಕ್ಷರು, ದೇವನಹಳ್ಳಿ ತಾಲೂಕು ಅಧ್ಯಕ್ಷ- ಡಿ.ಎ. ಮಂಜುನಾಥ್, ಗೌರವಾಧ್ಯಕ್ಷ- ಮುನಿಕದಿರಪ್ಪ, ಲಕ್ಷ್ಮೀನಾರಾಯಣಪ್ಪ- ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಮಹಿಳಾ ಘಟಕಕ್ಕೆ ಹೊಸಕೋಟೆ ಎಂ.ಸಿ. ಜಯಮಾಲ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
'ಮೌಢ್ಯ' ವಿರೋಧ ಕಾಯಿದೆ ಜಾರಿಯಾಗಲಿ
ದೇವನಹಳ್ಳಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಢನಂಬಿಕೆಗಳ ವಿರೋಧ ಕಾಯಿದೆ ಜಾರಿಗೆ ತರಲು ಉದ್ದೇಶಿಸಿರುವುದು ಅಭಿನಂದನೀಯ. ಆದರೆ ಕಾಯಿದೆಯಲ್ಲಿ ಜನರಲ್ಲಿ ದೇವರ ಬಗ್ಗೆ ಇರುವ ನಂಬಿಕೆಗಳಿಗೆ ಕಾಯಿದೆ ವಿರೋಧವಾಗಬಾರದು ಎಂದು ಭಾರತ ಜನಜಾಗೃತಿ ಸೇನೆ ರಾದ್ಯಾಧ್ಯಕ್ಷ ಸಿ. ಮುನಿಯಪ್ಪ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಸ್ವಲ್ಪ ಬದಲಾವಣೆ ಮಾಡಿ ಬೆಳಗಾವಿ ಅಧಿವೇಶನದಲ್ಲಿ ಕಾಯಿದೆ ಜಾರಿಗೆ ಬರಲಿ ಎಂದು ಮುನಿಯಪ್ಪ ಒತ್ತಾಯಿಸಿದ್ದಾರೆ.