ಲಯನ್ಸ್ ವತಿಯಿಂದ ಆಯುರ್ವೇದ ಶಿಬಿರ
ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್, ದೊಡ್ಡಬಳ್ಳಾಪುರ ಲಯನ್ಸ್ ಚಾರಿಟೀಸ್ ಟ್ರಸ್ಟ್ ಮತ್ತು ಲಯನೆಸ್ ಕ್ಲಬ್ಗಳು ಹಾಗೂ ಸರ್ಕಾರಿ ಆಯುರ್ವೇದ ಆಸ್ಪತ್ರೆ ಸಹಯೋಗದಲ್ಲಿ 14ನೇ ಉಚಿತ ಆಯುರ್ವೇದ ಮತ್ತು ಹೋಮಿಯೋಪತಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಲಯನ್ಸ್ ಭವನದಲ್ಲಿ ನಡೆಯಿತು.
ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಕಾರ್ಯಕ್ರಮ ರೂಪಿಸಲಾಗಿತ್ತು. ಡಾ. ರಾಮಲಿಂಗಯ್ಯ ಮತ್ತು ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಮುರಳೀಕೃಷ್ಣ ನೇತೃತ್ವದ ವೈದ್ಯರ ತಂಡ ರೋಗಿಗಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ವಿ. ಶಿವಣ್ಣ ಅಧ್ಯಕ್ಷತೆ ವಹಿಸಿದ್ದ ಶಿಬಿರದಲ್ಲಿ ನೀರು ಮತ್ತು ನೈರ್ಮಲ್ಯದ ಬಗ್ಗೆ ವಿಚಾರ ಸಂಕಿರಣ ನಡೆಯಿತು. ಪರಿಸರವಾದಿ ಕೆ. ಗುರುದೇವ್ ನೀರು ಮತ್ತು ನೈರ್ಮಲ್ಯದ ಮಹತ್ವ ಮತ್ತು ಅನಿವಾರ್ಯತೆಯ ಕುರಿತು ಪ್ರಾತ್ಯಕ್ಷಿಕೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ನಡೆದ ಪಾಪ್ಸ್ಮಿಯರ್ ಕ್ಯಾಂಪ್ನಲ್ಲಿ ಡಾ.ಶ್ಯಾಂಪ್ರಸಾದ್, ಡಾ. ಇಂದಿರಾ ಶ್ಯಾಂಪ್ರಸಾದ್, ಡಾ. ತೇಜಸ್ವಿನಿ, ಕಾಮೇಶ್ವರಿದೇವಿ ಭಾಗವಹಿಸಿದ್ದರು. ರಘು ಏಜೆನ್ಸೀಸ್ ಶಿಬಿರವನ್ನು ಪ್ರಾಯೋಜಿಸಿತ್ತು.