ಪಠ್ಯಕ್ರಮದ ಜೊತೆಗೆ ಕ್ರೀಡೆಗೂ ಪ್ರೋತ್ಸಾಹ ನೀಡಿ: ಮರ್ಲಿನ್
ಆನೇಕಲ್: ಪೋಷಕರು ತಮ್ಮ ಮಕ್ಕಳು ಇಂತಹುದೇ ಕೋರ್ಸ್‌ನಲ್ಲಿ ಪದವಿ ಪಡೆಯಬೇಕೆಂಬ ಹಂಬಲ ಹೊಂದಿರುವುದರಿಂದ ಮಕ್ಕಳಲ್ಲಿನ ಪ್ರತಿಭೆಯ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಮಕ್ಕಳ ಸ್ವಂತ ಅಭಿರುಚಿಗೆ ಪ್ರೋತ್ಸಾಹ ನೀಡುವ ಮೂಲಕ ವಿಶಿಷ್ಟ ವ್ಯಕ್ತಿಯಾಗಿ ಬೆಳೆಯಲು ಅವಕಾಶ ನೀಡಬೇಕೆಂದು ರಾಷ್ಟ್ರೀಯ ಅಥ್ಲೇಟಿಕ್ ಚಾಂಪಿಯನ್ ಮರ್ಲಿನ್ ಕೆ. ಜೊಸೇಫ್ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ಹುಲ್ಲಹಳ್ಳಿಯ ಕ್ರೈಸ್ಟ್ ಅಕಾಡೆಮಿ ವಿದ್ಯಾಸಂಸ್ಥೆಯು ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಪೋಷಕರು ವಿದ್ಯಾರ್ಜನೆ ಸಮಯದಲ್ಲಿದ್ದ ವಾತಾವರಣಕ್ಕಿಂತ ವಿಭಿನ್ನ ವಾತಾವರಣ ಹಾಗೂ ವಿಫುಲ ಅವಕಾಶಗಳಿದ್ದು ನಿಮ್ಮ ಮಕ್ಕಳನ್ನು ವಿಶ್ವ ಮಟ್ಟದಲ್ಲಿ ಸ್ಪರ್ಧಿಸಲು ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು.