ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಕೆನರಾ ಬ್ಯಾಂಕ್: ನೆಟ್ ಬ್ಯಾಂಕಿಂಗ್ ಸೇವೆ

Srinivasa Murthy VN
Updated On : 25 Nov 2013, 1:07 am

ದೇವನಹಳ್ಳಿ: ಇಲ್ಲಿನ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಸ್ವಯಂ ಚಾಲಿತ ಇ- ಬ್ಯಾಂಕಿಂಗ್ ಸೇವೆಯನ್ನು ಭಾನುವಾರದಿಂದ ಆರಂಭಿಸಿದ್ದು ಬ್ಯಾಂಕಿನ ಡಿಜಿಎಮ್ ಆರ್. ಸಂಪತ್‌ಕುಮಾರ್ ಉದ್ಘಾಟಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಇದೇ ಪ್ರಥಮ ಬಾರಿಗೆ ಕೆನರಾ ಬ್ಯಾಂಕ್ ಈ ಸೇವೆ ಆರಂಭಿಸಿದ್ದು  ಪ್ರತ್ಯೇಕ ಇ- ಟರ್ಮಿನಲ್‌ನಲ್ಲಿ ಎಟಿಎಂ ವ್ಯವಸ್ಥೆ, ಗ್ರಾಹಕರು ತಮ್ಮ ಖಾತೆಗೆ ನಗದು ಹಣ ಪಾವತಿಸುವುದು, ಚೆಕ್‌ಗಳ ಕ್ಲಿಯರೆನ್ಸ್ ಅಲ್ಲದೆ ಪಾಸ್‌ಬುಕ್ ಎಂಟ್ರಿ ಎಲ್ಲವನ್ನು ಟಚ್ ಸ್ಕ್ರೀನ್ ಆಪರೇಟ್ ಮೂಲಕ ಸ್ವಯಂ ಚಾಲಿತಯಂತ್ರಗಳು ಕೆಲಸ ಮಾಡುತ್ತವೆ ಎಂದು ಸಂಪತ್‌ಕುಮಾರ್ ತಿಳಿಸಿದರು. ದಿನದ 24 ಗಂಟೆಯೂ ಸೇವೆ ಲಭ್ಯವಿರುತ್ತದೆ ಎಂದರು.
ಬ್ಯಾಂಕಿನ ಎಜಿಎಮ್ ಆರ್.ಜಿ. ಸ್ವಾಮಿ ಮಾತನಾಡಿ ಇಲ್ಲಿನ ಎಟಿಎಂಗೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು ಕೆನರಾ ಬ್ಯಾಂಕಿನ ಯಾವುದೇ ಎಟಿಎಂಗಳಿಗೆ ರೋಲಿಂಗ್ ಶಟರ್ ಇರುವುದಿಲ್ಲ. ಅಲ್ಲದೆ ಒಬ್ಬ ಗ್ರಾಹಕ ಎಟಿಎಂ ಒಳಗೆ ಪ್ರವೇಶಿಸಿದ ನಂತರ ಮತ್ತೆ ಇನ್ನೊಬ್ಬರು ಪ್ರವೇಶ ಇರುವುದಿಲ್ಲ ಎಂದರು.  
ಕೆನರಾ ಬ್ಯಾಂಕಿನ ಅಧಿಕಾರಿಗಳಾದ ಎಜಿಎಂ ಮಂಜುನಾಥಸ್ವಾಮಿ, ಕೆ.ಎಲ್.ಕಾಮತ್, ಎನ್.ಎಂ.ಭಟ್ ಹಾಗೂ ಮುಖ್ಯ ವ್ಯವಸ್ಥಾಪಕಿ ಲಲಿತ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement