ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಲಯನ್ಸ್ ಸಂಸ್ಥೆಸೌರಶಕ್ತಿ ಬಗ್ಗೆ ಉಪನ್ಯಾಸ

Srinivasa Murthy VN
Updated On : 25 Nov 2013, 1:06 am

ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ, ಲಯನ್ಸ್ ಸೇವಾ ಪ್ರತಿಷ್ಠಾನ, ರಾಜ್ಯ ಸೌರಶಕ್ತಿ ತರಬೇತಿ ಕೇಂದ್ರ ಹಾಗೂ ಕರ್ನಾಟಕ ವಿದ್ಯುತ್ ನಿಗಮ ಸಹಕಾರದೊಂದಿಗೆ ಇಲ್ಲಿನ ಲಯನ್ಸ್ ಸೇವಾ ಭವನದಲ್ಲಿ ಭಾನುವಾರ ಸೌರಶಕ್ತಿ ಬಳಕೆ ಕುರಿತು ಉಪನ್ಯಾಸ, ಪ್ರದರ್ಶನ ನಡೆಯಿತು.
ಇದರ ಜತೆಯಲ್ಲಿ 99ನೆಯ ಉಚಿತ ಹೋಮಿಯೋಪತಿ ಶಿಬಿರ ಆಯೋಜಿಸಲಾಗಿತ್ತು.
ಸಮಾರಂಭದ ಉದ್ಘಾಟನೆಯನ್ನು ಸೊಣ್ಣೇನಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಕೆ.ಶಿರಸಪ್ಪ ಹಾಗೂ ಸೋಮಶೇಖರ್ ನೆರವೇರಿಸಿದರು.
 ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸೌರಶಕ್ತಿ ತರಬೇತಿ ಕೇಂದ್ರದ ನಿರ್ದೇಶಕರಾದ ಡಾ.ಎಚ್.ನಾಗನಗೌಡ ನೆರವೇರಿಸಿ ನಮ್ಮ ರಾಜ್ಯದಲ್ಲಿ ಪ್ರತಿ ದಿನವೂ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದು ಮುಂದಿನ ದಿಗಳಲ್ಲಿ ವಿದ್ಯುತ್ ಪೂರೈಕೆಯೇ ಕಷ್ಟವಾಗಬಹುದು. ಅಲ್ಲದೆ ಒಂದು ಯುನಿಟ್ ವಿದ್ಯುತ್ ಉತ್ಪಾದನೆಗಾಗಿ ಒಂದು ಕೆಜಿ ಕಲ್ಲಿದ್ದಲು ಅಥವ 3.3 ಲೀಟರ್ ನೀರು ಬೇಕಾಗುತ್ತದೆ. ಆದ್ದರಿಂದ ಪ್ರಕೃತಿಯಲ್ಲಿ ಲಭ್ಯವಿರುವ ಪರ್ಯಾಯ ಇಂಧನ ಮೂಲಗಳಾದ ಸೌರಶಕ್ತಿ, ಗಾಳಿ, ಬಯೋಗ್ಯಾಸ್ ಹಾಗೂ ಇತರ ಮೂಲಗಳಿಂದ  ವಿದ್ಯುತ್ ಉತ್ಪಾದನೆ ಮಾಡಬೇಕಿದೆ ಎಂದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ದೊರೆಯುವ ಸಬ್ಸಿಡಿ ಹಣದ ಬಗ್ಗೆ ತಿಳಿಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಆರ್.ನಾಗರಾಜಯ್ಯ ವಹಿಸಿ ಪ್ರತಿ ತಿಂಗಳು ನಿರಂತರವಾಗಿ ಉಚಿತ ಹೋಮಿಯೋಪತಿ ಶಿಬಿರದ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು. ಈ ಶಿಬಿರದಲ್ಲಿ ಯಾವುದೇ ರೀತಿಯ ದೀರ್ಘ ಕಾಲದ ಕಾಯಿಲೆಗಳಿರಲಿ  ತಜ್ಞ ವೈದ್ಯರು ತಪಾಸಣೆ ನಡೆಸಿ ಅಗತ್ಯವಾದ ಔಷಧ ನೀಡುತ್ತಾರೆ ಎಂದರು.
ಡಾ.ವಿಶ್ವನಾಥ್, ಡಾ.ಡಿಎ ಅನುರಾಧ ವಿಶ್ವನಾಥ್, ಲಯನೆಸ್ ಸಂಸ್ಥೆಯ ನಿರ್ಮಲಕುಮಾರಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ವೈ.ಸಿ. ಕೃಪಾಕರ್ ವಂದನೆ ಅರ್ಪಿಸಿದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement