ಮೆಗಾ ಲೋಕ ಅದಾಲತ್ನಲ್ಲಿ 350 ಪ್ರಕರಣ ಇತ್ಯರ್ಥ
ಮಾಗಡಿ: ಮಾಗಡಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ಮೆಘಾ ಲೋಕ ಅದಾಲತ್ ಕಾರ್ಯಕ್ರಮ ನಡೆಯಿತು. ಸೆಪ್ಟೆಂಬರ್ ತಿಂಗಳಿನಿಂದ ಇಲ್ಲಿಯವರೆಗೂ ಒಟ್ಟು 350 ಪ್ರಕರಣಗಳು ಇತ್ಯರ್ಥವಾಗಿರುವುದಾಗಿ ಜೆ.ಎಂ.ಎಫ್.ಸಿ. ಪ್ರಧಾನ ಸಿವಿಲ್ ನಾಯಾಧೀಶೆ ಎಸ್. ಶ್ಯಾಮಲಾ ತಿಳಿಸಿದರು.
ಉಚ್ಚನ್ಯಾಯಾಲಯದ ಆದೇಶದ ಮೇರೆಗೆ ಮೆಗಾ ಲೋಕ ಅದಾವತ್ ಕಾರ್ಯಕ್ರಮ ನಡೆದಿದ್ದು, ಪ್ರಧಾನ ಸಿವಿಲ್ ನ್ಯಾಯಾಲಯದಿಂದ 100 ಪ್ರಕರಣಗಳು ಇತ್ಯಾರ್ಥವಾದರೆ, ಅಪರ ಸಿವಿಲ್ ನ್ಯಾಯಾಲಯದಿಂದ 250 ಪ್ರಕರಣಗಳನ್ನು ಇತ್ಯಾರ್ಥವಾಗಿದೆ ಎಂದರು. ಅಪರ ಸಿವಿಲ್ ನ್ಯಾಯಾಧೀಶೆ ಮಾಲಾ ಎನ್.ಡಿ., ಸಹಾಯಕ ಸರ್ಕಾರಿ ಅಭಿಯೋಜಕಿ ಕೆ.ಎಸ್. ಲತಾ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಪಾಪಣ್ಣ, ಉಪಾಧ್ಯಕ್ಷ ರಂಗಯ್ಯ, ಕಾರ್ಯದರ್ಶಿ ಮುನಿಸ್ವಾಮಿ ನಾಯಕ್, ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಡಿ.ಎಚ್.ಮಲ್ಲಿಕಾರ್ಜುನಯ್ಯ, ವಕೀಲರಾದ ಸಿದ್ದಲಿಂಗಪ್ಪ, ಕೆ.ಎಸ್. ಪ್ರಕಾಶ್, ಸುರೇಶ್, ಚಕ್ರಬಸವಯ್ಯ, ನರಸಿಂಹಸ್ವಾಮಿ, ನಾಗರಾಜು, ಎಂ. ನಾಗೇಶ್, ರಮೇಶ್, ರಾಜು, ನಾರಾಯಣಸ್ವಾಮಿ, ಭೀಮರಾವ್, ಲಕ್ಷ್ಮೀಪ್ರಸಾದ್, ಇತರರು ಇದ್ದರು.