ರಾಜಿ ಮೂಲಕ ಪ್ರಕರಣ ಇತ್ಯರ್ಥಗೊಳಿಸಿ
ಕ.ಪ್ರ.ವಾರ್ತೆ ಕನಕಪುರ ನ.24
ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಸಮಾಜದ ಎಲ್ಲಾವರ್ಗದ ಜನರೂ ಸಾಮರಸ್ಯದಿಂದ ಬದುಕಲು ಲೋಕಅದಾಲತ್‌ಗಳು ನೆರವಾಗುತ್ತಿವೆ ಎಂದು ನ್ಯಾ. ನಾರಾಯಣ ವಿ.ಹೆಗಡೆ ಹೇಳಿದ್ದಾರೆ.
ಅವರು ಕನಕಪುರದ ನ್ಯಾಯಾಲಯ ಸಮಚ್ಚಯದ ಆವರಣದಲ್ಲಿ ಕಾನೂನು ಸೇವಾ ಪ್ರಾಧಿಕಾರ,ಪೊಲೀಸ್‌ಇಲಾಖೆ, ವಕೀಲರ ಸಂಘ ಆಯೋಜಿಸಿದ್ದ ಬೃಹತ್ ಲೋಕಅದಾಲತ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ನ್ಯಾ.ಲತಾದೇವಿ, ನ್ಯಾ.ಶೀಲಾ, ವಕೀಲರ ಸಂಘದ ಅಧ್ಯಕ್ಷ ಹೆಚ್.ಎಲ್.ಅಶೋಕ್, ಸರ್ಕಾರಿ ಅಭಿಯೋಜಕ ರವೀಂದ್ರಪ್ಪ ಪಾಲ್ಗೊಂಡಿದ್ದರು. ಒಟ್ಟಾರೆ 216 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಗೊಳಿಸಲಾಯಿತು. ನ್ಯಾಯಾಲಯದಲ್ಲಿ ದಾಖಲಾಗುವ ಬಹುತೇಕ ಪ್ರಕರಣಗಳಲ್ಲಿ ಹುರುಳಿರುವುದಿಲ್ಲ. ಸಣ್ಣಪುಟ್ಟ ವ್ಯಾಜ್ಯಗಳಿಗೂ ನ್ಯಾಯಾಲಯದ ಮೆಟ್ಟಿಲೇರಿ ಅಮೂಲ್ಯವಾದ ಸಮಯ, ಹಣವನ್ನು ಸಾರ್ವಜನಿಕರು ವ್ಯರ್ಥಮಾಡಿಕೊಂಡು ಮಾನಸಿಕ ನೆಮ್ಮದಿ ಕೆಡಿಸಿಕೊಳ್ಳುತ್ತಿದ್ದಾರೆ. ರಾಜೀಸಂಧಾನದ ಮೂಲಕ ವ್ಯಾಜ್ಯಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲಾಗುತ್ತಿದ್ದು ಸಾರ್ವಜನಿಕರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕೆಂದು ನ್ಯಾ.ಲತಾದೇವಿ ಕರೆ ನೀಡಿದರು. ಹಿರಿಯ ವಕೀಲರಾದ ರಾಮಚಂದ್ರ ಸ್ವಾಗತಿಸಿದರು. ನ್ಯಾಯವಾದಿ ಎ.ಆರ್. ಖಾನ್ ನಿರೂಪಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಸಿ.ಎಂ.ಜಗದೀಶ್‌ವಂದಿಸಿದರು.