ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹಂತ ಹಂತವಾಗಿ ಸಮಸ್ಯೆ ನಿವಾರಣೆ

Srinivasa Murthy VN
Updated On : 25 Nov 2013, 1:06 am

ವಿಜಯಪುರ: ಗ್ರಾಮೀಣ ಪ್ರದೇಶಗಳಲ್ಲಿನ ಸಣ್ಣ ಪುಟ್ಟ ಅಂಗಡಿಗಳ ಹಾಗೂ ಮಳಿಗೆಗಳಲ್ಲಿ ಎಗ್ಗಿಲ್ಲದೆ ಯಥೇಚ್ಛವಾಗಿ ಮದ್ಯ ದೊರೆಯುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಯ ಕಾರಳ್ಳಿ ಶ್ರೀನಿವಾಸ್  ಆರೋಪಿಸಿದರು.
 ಅವರು ಜಿಲ್ಲಾ ಪೊಲೀಸ್ ಅಧೀಕ್ಷಕ ರಮೇಶ್ ಭಾನೋಟ್ ಅವರಿಗೆ ಈ ಕುರಿತಂತೆ  ಮನವರಿಕೆ ಮಾಡಿಕೊಟ್ಟರಲ್ಲದೆ.  ಪಟ್ಟಣದ ಪೊಲೀಸ್ ಠಾಣಾ ಅವರಣದಲ್ಲಿ ಜಿಲ್ಲಾ ಪೋಲಿಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು ರಕ್ಷಣಾ ವೇದಿಕೆಯ ಶಿವುಕುಮಾರ್ ಮಾತನಾಡಿ ಪಟ್ಟಣದೆಲ್ಲೆಡೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಎದುರಾಗುತ್ತಿದೆ ಹಾಗೂ ಪಟ್ಟಣದ ಸುತ್ತಮುತ್ತಲ ಬಹಳಷ್ಟು ಕಡೆ ರಸ್ತೆ ಉಬ್ಬುಗಳ ಅವಶ್ಯಕತೆ ಇದೆ ಎಂದರು.
ಪ್ರಸ್ತಾವನೆ: ಪುರಸಭಾ ಸದಸ್ಯ ಬಲಮುರಿ ಶ್ರೀನಿವಾಸ್ ಹಾಗೂ ಕಾಂಗ್ರೆಸ್ ಮುಖಂಡ ಹನೀಫ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕ್ಷೇತ್ರ ಶಾಸಕ ಪಿಳ್ಳಮುನಿಶ್ಯಾಮಪ್ಪ ಮಾತನಾಡಿ 10ರಿಂದ15 ವರ್ಷಗಳ ಹಿಂದೆ ಪಟ್ಟಣದಲ್ಲಿ 25 ರಿಂದ 30 ಸಾವಿರ ಜನಸಂಖ್ಯೆ ಇತ್ತು. ಆದರೆ ಇಂದು 50ಸಾವಿರ ದಾಟಿದೆ ವಾಹನ ದಟ್ಟಣೆ ಹೆಚ್ಚಾಗಿದೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ಅದಕ್ಕೆ ತಕ್ಕಂತೆ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇದರ ಬಗ್ಗೆ ಸರ್ಕಾರದಲ್ಲಿ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟ ತಡೆಯಲು ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಪೋಲಿಸ್ ಅಧೀಕ್ಷಕ ರಮೇಶ್ ಬಾನೋಟ್ ಮಾತನಾಡಿ  ಗೃಹ ರಕ್ಷಕದಳ ಸಿಬ್ಬಂದಿ ನೇಮಿಸಿಕೊಳ್ಳಲು ಅನುಮತಿ ಕೋರಲಾಗಿದೆ. ಟ್ರಾಫಿಕ್ ಸಿಗ್ನಲ್ ಹಾಗೂ ರಸ್ತೆ ಉಬ್ಬುಗಳನ್ನು ಹಾಕಲು ಮನವಿ ಮಾಡಲಾಗುವುದು ಎಂದರು.
ಸತ್ಕಾರ: ಇತ್ತೀಚೆಗೆ ಹೋಲೇರಹಳ್ಳಿ ಗ್ರಾಮದಲ್ಲಿ 100 ಅಡಿ ಆಳದಲ್ಲಿದ್ದ ಶವವನ್ನು ಹೊರತೆಗೆಯಲೂ ಸಹಕರಿಸಿದ 108 ಚಾಲಕ ಮಂಜುನಾಥ್‌ಗೆ ನಗದು ನೀಡಿ ಗೌರವಿಸಲಾಯಿತು.
ಬೆಂ.ಗ್ರಾ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಬಚ್ಚೇಗೌಡ, ಬೆಂ.ಗ್ರಾ.ಜಿಲ್ಲಾ ಅಡಿಷನಲ್ ಎಸ್‌ಪಿ ಅಬ್ದುಲ್ ಅಹದ್,ಪ್ರಧಾನ ಕಾರ್ಯದರ್ಶಿ ನರಸಿಂಹನಾಯಕ್, ಬಿಜೆಪಿ ಮುಖಂಡರಾದ ಕನಕರಾಜು, ರೋಟರಿ ಸಂಘದ ಮಾಜಿ ಅಧ್ಯಕ್ಷ ಸಿ.ಬಸಪ್ಪ, ಪಂಚಾಯಿತಿಗಳ ಮುಖಂಡರು, ಸದಸ್ಯರು, ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ತಿಳಿಸಿದರು.
ತಹಸೀಲ್ದಾರ್ ಡಾ.ಎನ್.ಸಿ.ವೆಂಕಟರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜ್, ಅಬಕಾರಿ ಇಲಾಖೆ ತ್ರೀನೇತ್ರ, ವಿಜಯಪುರ ಪುರಸಭಾ ಮುಖ್ಯಾಧಿಕಾರಿ ಮುನಿಸ್ವಾಮಿ, ಚನ್ನರಾಯಪಟ್ಟಣ ಠಾಣಾ ಎಸ್.ಐ ಮಧುಕರ್, ವಿಶ್ವನಾಥ್ ಪುರ ಪೊಲೀಸ್ ಠಾಣಾ ಎಸ್‌ಐ ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement