ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹೊನ್ನಿಗನಹಳ್ಳಿ ಶ್ರೀಕಂಠು ವಿಶಿಷ್ಟ ಜನ್ಮದಿನಾಚರಣೆ

Srinivasa Murthy VN
Updated On : 25 Nov 2013, 1:09 am

ಕನಕಪುರ: ಸರಳತೆ, ಸೌಜನ್ಯತೆ, ಸಜ್ಜನಿಕೆಗಳಿಗೆ ಹೆಸರಾಗಿರುವ ಸಮಾಜ ಸೇವಕ ಹೊನ್ನಿಗನಹಳ್ಳಿ ಶ್ರೀಕಂಠು ಅವರು ಜನರಿಗೆ ಸೇವೆ ಸಲ್ಲಿಸುವ ಮೂಲಕ ಸಮುದಾಯದ ಋಣವನ್ನು ತೀರಿಸುತ್ತಿದ್ದಾರೆ ಎಂದು ಉದ್ಯಮಿ ಕುರುಬಳ್ಳಿ ಶಂಕರ್‌ಹೇಳಿದ್ದಾರೆ.
 ಅವರು ಕನಕಪರ ತಾಲೂಕು ಕಬ್ಬಾಳಿನ ದೇವಾಲಯದ ಆವರಣದಲ್ಲಿ ಶ್ರೀಕಂಠು ಅಭಿಮಾನಿ ಬಳಗ ಆಯೋಜಿಸಿದ್ದ ಹೆಚ್.ಕೆ.ಶ್ರೀಕಂಠು 54ನೇ ಜನ್ಮದಿನಾಚರಣಾ ಸಮಾರಂಭದ ಅಧ್ಯಕ್ಷತೆ  ವಹಿಸಿ ಮಾತನಾಡುತ್ತಿದ್ದರು. ಭಾರತಾಂಬಾ ಶ್ರೀಕಂಠು ಅಧ್ಯಕ್ಷತೆ ವಹಿಸಿ ಹಲವಾರು ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಸೀರೆ ವಿತರಣೆ: ಕಾರ್ಯಕ್ರಮದ ಅಂಗವಾಗಿ ಸಾತನೂರು ಹೊಬಳಿಯ ಮೂರು ಸಾವಿರ ಮಹಿಳೆಯರಿಗೆ ಸೀರೆಗಳ ವಿತರಣೆ, ಒಂದೂವರೆ ಸಾವಿರ ಪುರುಷರಿಗೆ ಪಂಚೆ, ಷರ್ಟ್ ವಿತರಣೆ, ಸಾವಿರ ಮಂದಿ ಯುವತಿಯರಿಗೆ ಚೂಡೀದಾರ್ ವಿತರಣೆಯನ್ನು ಕು. ಹೆಚ್.ಎಸ್.ಶಮತಾ ಹಾಗೂ ಹೆಚ್.ಎಸ್.ವರುಣ್ ಗೌಡ ನೆರವೇರಿಸಿದರು. ಹೋಬಳಿಯ 15 ಪ್ರೌಢಶಾಲೆ ಹಾಗೂ ಪಪೂ ಕಾಲೇಜಿನ ಒಂದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ರಕ್ತದಾನ: ಶ್ರೀಕಂಠು ಅಭಿಮಾನಿ ಬಳಗದವರು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 150 ಯೂನಿಟ್ ರಕ್ತವನ್ನು ಶೇಖರಿಸಿ ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತನಿಧಿಗೆ ಸಮರ್ಪಿಸಲಾಯಿತು. ಸಾರ್ವಜನಿಕರಿಗಾಗಿ ಉಚಿತ ಆರೋಗ್ಯತಪಾಸಣೆ, ಮಧುಮೇಹ ತಪಾಸಣಾ ಶಿಬಿರಗಳು ನಡೆದು ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು. ಸಾತನೂರಿನ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್, ಹಾಲು, ಹಣ್ಣುಗಳನ್ನು ಗ್ರಾಪಂ ಅಧ್ಯಕ್ಷ ಎಚ್.ಜಿ. ನಾಗರಾಜು ವಿತರಿಸಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಚಿತ್ರನಿರ್ಮಾಪಕ ಅತ್ತಿಹಳ್ಳಿ ಎ.ಟಿ. ಲೋಕೇಶ್ ಮಾತನಾಡಿ, ಶ್ರೀಕಂಠು ಅವರು ದತ್ತಿನಿಧಿ ಮೂಲಕವಾಗಿ ಪ್ರತಿವರ್ಷ ಒಂದು ಕೋಟಿಗೂ ಹೆಚ್ಚಿನ ಸ್ವಂತ ಹಣವನ್ನು ಸಮಾಜ ಸೇವಾ ಕಾರ್ಯಗಳಿಗೆ ನೀಡುತ್ತಿದ್ದಾರೆ. ಕಳೆದ ಎರಡು ವರ್ಷಗಳ ಬರ ಪರಿಸ್ಥಿತಿಯಲ್ಲಿ ಸಾತನೂರು ಹೋಬಳಿಯ 50ಕ್ಕೂ ಹೆಚ್ಚು ಗ್ರಾಮಗಳಿಗೆ ಸ್ವಂತ ಖರ್ಚಿನಲ್ಲಿ ಟ್ಯಾಂಕರ್‌ಗಳ ಮೂಲಕ ನೀರನ್ನು ಒದಗಿಸಿದ ಭಗೀರಥರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿಯೂ ಅಭಿಮಾನಿಗಳು ಉತ್ಸಾಹದಿಂದ ಜನ್ಮದಿನಾಚರಣೆ ಆಚರಿಸುತ್ತಿರುವುದು ಪ್ರಶಂಸಾರ್ಹ ಎಂದು ಹೇಳಿದರು. ಹಾಲು ಒಕ್ಕೂಟದ ನಿರ್ದೇಶಕ ನಟೇಶ್, ಪ್ರಕಾಶ್, ರಮೇಶ್, ಸತೀಶ್, ಪುಟ್ಟಮಾದಯ್ಯ, ಚಂದ್ರು, ಮುತ್ತುರಾಜು, ಶಾಸ್ತ್ರಿ, ಶಿವು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement