ಚಂದ್ರಶೇಖರಾನಂದಗಿರಿ ಸ್ವಾಮೀಜಿ ವಿಧಿವಶ
ಮಾಗಡಿ: ಆರ್ಯ ವೈಶ್ಯ ಸಮಾಜದ ಕುಲ ಗುರು ವಾಸವಿ ವಿಶ್ವ ಕುಲಪೀಠಾಧಿಪತಿಗಳಾದ ಚಂದ್ರಶೇಖರಾನಂದಗಿರಿ ಸ್ವಾಮೀಜಿ ಬೆಂಗಳೂರಿನಲ್ಲಿ ಸೋಮವಾರ ವಿಧಿವಶರಾದರು. ಸಮಾಜದ ಹಲವು ಅನಿಷ್ಠಗಳ ನಿರ್ಮೂಲನೆಗೆ ಅವರು ಮಾರ್ಗದರ್ಶನ ನೀಡಿದ್ದರು. ಸಾಮರಸ್ಯ ಜೀವನ ಸಾಗಿಸುವ ಪದ್ಧತಿಯನ್ನು ಬೋಧಿಸಿದ್ದರು.
ಸ್ವಾಮೀಜಿ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಆರ್ಯ ವೈಶ್ಯ ಮಂಡಲಿ ಅಧ್ಯಕ್ಷ ಎಸ್.ಎನ್. ನಟರಾಜು ಕಂಬನಿ ಮಿಡಿದಿದ್ದಾರೆ. ಮಂಗಳವಾರ ಅಂಗಡಿಗಳನ್ನು ಮುಚ್ಚಿ, ಕುಲಗುರುಗಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲು ಆರ್ಯ ವೈಶ್ಯ ಮಂಡಳಿ ಸದಸ್ಯರು ನಿರ್ಧರಿಸಿದ್ದಾರೆ.