ನಾಳೆ ಕನ್ನಡ ರಾಜ್ಯೋತ್ಸವ, ಸಾಧಕರಿಗೆ ಸನ್ಮಾನ
ಚನ್ನಪಟ್ಟಣ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನ. 27 ರಂದು ಬುಧವಾರ ಸಂಜೆ 4 ಗಂಟೆಗೆ 58ನೇ ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಗಾಂಧೀ ಭವನದ ಆವರಣದಲ್ಲಿ ಏರ್ಪಡಿಸಿರುವುದಾಗಿ ತಾಲೂಕು ಕಸಾಪ ಅಧ್ಯಕ್ಷ ಎಂ. ಶಿವಮಾದು ತಿಳಿಸಿದ್ದಾರೆ. ಶಾಸಕ ಸಿ.ಪಿ.ಯೋಗೇಶ್ವರ್ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಲಿದ್ದು, ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್ ಮುಖ್ಯ ಭಾಷಣಕಾರರಾಗಿ ಮಾತನಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದು, ತಾಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು ಪ್ರಾಸ್ತಾವಿಕ ನುಡಿಯಾಡಲಿದ್ದಾರೆ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಸು.ತ.ರಾಮೇಗೌಡ, ಹಿರಿಯ ಸಾಹಿತಿ ಡಾ.ಅಪ್ಪಗೆರೆ ವೆಂಕಟಯ್ಯ, ಬಿಜೆಪಿ ನಾಯಕ ರವಿಕುಮಾರ್ ಗೌಡ, ಜೆಡಿಎಸ್. ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪ್ರೊ.ಕೆ.ಮಲ್ಲಯ್ಯ, ಮಾಜಿ ಕಾರ್ಯಾಧ್ಯಕ್ಷ ಎಂ.ಎ.ಆನಂದ್, ತಾಲೂಕು ಪ್ರಧಾನ ಕಾರ್ಯದರ್ಶಿ ಟಿ.ಎಸ್. ಚಿಕ್ಕರಾಮಕೃಷ್ಣಪ್ಪ ಹಾಗೂ ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೃಷ್ಣಮೂರ್ತಿ ಉಪಸ್ಥಿತರಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾಲೂಕಿನ ಸಾಧಕರಾದ ಅಬ್ಬೂರು ರಾಜಶೇಖರ (ಪತ್ರಿಕೋದ್ಯಮ), ರೈತ ಪರ ಹೋರಾಟ (ಸಿ.ಪುಟ್ಟಸ್ವಾಮಿ), ಡಾ.ಮಧುಸೂಧನಾಚಾರ್ಯ ಜೋಷಿ (ಶಿಕ್ಷಣ ಕ್ಷೇತ್ರ), ಮತ್ತೀಕೆರೆ ಬಿ.ಚಲುವರಾಜು (ಸಾಹಿತ್ಯ ಕ್ಷೇತ್ರ) ಹಾಗೂ ಸೀಬನಹಳ್ಳಿ ಸ್ವಾಮಿ(ರಂಗಕಲೆ) ಅವರಿಗೆ ಸನ್ಮಾನಿಸಲಾಗುವುದು. ನೃತ್ಯ ಗುರು ಸುಜೇಂದ್ರ ಬಾಬು ಮತ್ತು ತಂಡದವರಿಂದ ನೃತ್ಯ ಕಾರ್ಯಕ್ರಮ ಹಾಗೂ ಹೆಸರಾಂತ ಹಿನ್ನೆಲೆ ಗಾಯಕರಿಂದ ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ .
ಸಮ್ಮೇಳನಕ್ಕೆ ಹೆಸರು ನೋಂದಾಯಿಸಲು ಮನವಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2014 ಜ. 7 ರಿಂದ 9ರವರೆಗೆ ಮೂರು ದಿನಗಳ ಕಾಲ ಮಡಿಕೇರಿಯಲ್ಲಿ ನಡೆಯಲಿರುವುದರಿಂದ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಪ್ರತಿನಿಧಿಗಳು ಪ್ರತಿನಿಧಿ ಶುಲ್ಕ 300 ರು. ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕಾಗಿ ತಾಲೂಕು ಕಸಾಪ ಮನವಿ ಮಾಡಿದೆ. ಮಡಿಕೇರಿ ಅತೀ ಸಣ್ಣ ಜಿಲ್ಲೆಯಾದ್ದರಿಂದ ಪ್ರತಿನಿಧಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕಷ್ಟವಾಗುತ್ತಿರುವುದರಿಂದ ಪ್ರತಿನಿಧಿ ಶುಲ್ಕವನ್ನು ಡಿ.4ರೊಳಗೆ ನೀಡಲು ಕೋರಲಾಗಿದೆ. ಹೆಸರು ನೋಂದಾವಣೆಗೆ ಸಂಪರ್ಕಿಸಲು ಗೌರವ ಕಾರ್ಯದರ್ಶಿಗಳಾದ ರಾಮಕೃಷ್ಣಯ್ಯ ಬ್ರಹ್ಮಣೀಪುರ, ವಿಜಯ್‌ರಾಂಪುರ-9986700032 ಸಂಪರ್ಕಿಸಲು ಕೋರಲಾಗಿದೆ.
ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿನ ಸಮಸ್ಯೆ ಬಗ್ಗೆ ಮಾತುಕತೆ
ಸೂಲಿಬೆಲೆ: ಸಮೀಪದ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದ ಆಟೋ ಲೀವ್ ಕಂಪನಿಯ ಆವರಣದಲ್ಲಿ ಕೈಗಾರಿಕಾ ಪ್ರದೇಶದ ಕಂಪನಿ ಮಾಲೀಕರೊಂದಿಗೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಕೈಗಾರಿಕಾ ಪ್ರದೇಶದ ಸಮಸ್ಯೆ ಹಾಗೂ ಅಪರಾಧ ಪ್ರಕರಣಗಳ ಬಗ್ಗೆ ಚರ್ಚಿಸಿದರು. ಕೈಗಾರಿಕಾ ಪ್ರದೇಶದಲ್ಲಿನ ಮೂಲಭೂತ ಸಮಸ್ಯೆಗಳ ಬಗ್ಗೆ ವಿವರಿಸಿದ ನಾನಾ ಕಂಪನಿಯ ಪ್ರತಿನಿಧಿಗಳು, ಕೈಗಾರಿಕಾ ಪ್ರದೇಶದಲ್ಲಿ ಬಹುತೇಕ ಕಡೆ ಬೀದಿ ದೀಪಗಳ ಸಮಸ್ಯೆ ಕಾಡುತ್ತಿದೆ. ಹತ್ತಾರು ಕಾರ್ಖಾನೆಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ನಿತ್ಯ ನೂರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಕೆಲಸಕ್ಕೆ ಸೇರಲು ಬರುವ ವ್ಯಕ್ತಿಗಳ ಪೂರ್ವಾಪರ ವಿಚಾರಣಿ ಹಾಗೂ ಸಣ್ಣಪುಟ್ಟ ಕಳ್ಳತನ ಇತ್ಯಾದಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಕೈಗಾರಿಕಾ ಪ್ರದೇಶದಲ್ಲಿ ಹೊರ ಪೊಲೀಸ್ ಠಾಣಿ ತೆರೆದರೆ ಸೂಕ್ತ. ಸಂಚಾರ ದಟ್ಟಣಿ ನಿವಾರಣಿಗೆ ರಸ್ತೆ ಉಬ್ಬು, ಸಿಗ್ನಲ್ ಅಳವಡಿಕೆ ಮಾಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಹೆಚ್ಚುವರಿ ಎಸ್ಪಿ ಅಬ್ದುಲ್ ಅಹಮದ್, ಡಿವೈಎಸ್ಪಿ ಬಲರಾಮೇಗೌಡ, ಸಿಪಿಐ ತಿಮ್ಮಯ್ಯ, ಪಿಎಸ್‌ಐ ಸಂದೀಪ್‌ಶೌರಿ ಮಾಲೀಕರ ಸಮಸ್ಯೆ ಮತ್ತು ಮನವಿಗೆ ಸ್ಪಂದಿಸಿ ಆನೇಕ ಸಲಹೆಗಳನ್ನು ನೀಡಿದರು. ವಾಹನಗಳ ಸಂಚಾರ ಗಮನಿಸಲು ಅನುಕೂಲವಾಗುವಂತೆ ಮುಖ್ಯದ್ವಾರದಲ್ಲಿ ಸಿಸಿಟಿವಿಯನ್ನು ಎಲ್ಲ ಕಂಪನಿಯವರು ಸೇರಿ ಅಳವಡಿಸಿಕೊಳ್ಳುವದರಿಂದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಎಂದು ಹೇಳಿದರು.