ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಭೂಗಳ್ಳರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ

Srinivasa Murthy VN
Updated On : 26 Nov 2013, 1:20 am

ಕ.ಪ್ರ.ವಾರ್ತೆ, ದೊಡ್ಡಬಳ್ಳಾಪುರ,ನ.25
ಭೂಗಳ್ಳರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ತಾಲೂಕಿನಲ್ಲಿ ದಲಿತರ ಜಮೀನುಗಳನ್ನು ಕಬಳಿಸಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಎಂದು ಆಗ್ರಹಿಸಿ ಕರ್ನಾಟಕ ಪ್ರಜಾ ವಿಮೋಚನಾ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ತಾಲೂಕಿನ ರಘುನಾಥಪುರದಿಂದ ಆರಂಭವಾದ ರ್ಯಾಲಿ ತಾಲೂಕು ಕಚೇರಿಯವರೆಗೆ ನಡೆಯಿತು. ನಂತರ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಸರ್ಕಾರಗಳು ಶೋಷಿತರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದರೂ ಬಡವರನ್ನು ಆ ಯೋಜನೆಗಳು ಮುಟ್ಟುತ್ತಿಲ್ಲ. ಬಂಡವಾಳಶಾಹಿ ಮತ್ತು ಭೂಮಾಲೀಕರಿಗೆ ಮಣೆ ಹಾಕಿ, ಬಡವರ ಸವಲತ್ತುಗಳ ಬಗ್ಗೆ ಅಧಿಕಾರಿಗಳು ಉದಾಸೀತನೆ ತೋರುತ್ತಿದ್ದಾರೆ. ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ವ್ಯಾಪ್ತಿಯಲ್ಲಿ ಹಲವು ಜಮೀನುಗಳು ಒತ್ತುವರಿಯಾಗಿವೆ. ಸರ್ಕಾರಗಳು ಕಾಲಾನುಗುಣಕ್ಕೆ ಜಾರಿಗೆ ತರುತ್ತಿಯುವ ಯೋಜನೆಗಳು ದಲಿತರ ಭೂ ಹಕ್ಕನ್ನು ರಕ್ಷಿಸುವಲ್ಲಿ ವಿಫಲವಾಗುತ್ತಿವೆ ಎಂದು ಆರೋಪಿಸಿದರು.
ಗಂಭೀರ ಯತ್ನ ಮಾಡಲಿ: ಮತ್ತೊಂದೆಡೆ ಭ್ರಷ್ಟಾಚಾರದ ಕಾರಣದಿಂದಾಗಿ ಶೋಷಿತರ ಪರ ದನಿ ಇಲ್ಲದಾಗುತ್ತಿದೆ. ಸರ್ಕಾರಿ ಜಮೀನುಗಳ ಅತಿಕ್ರಮಣ ಬಿಡಿಸುವಲ್ಲಿ ಅಧಿಕಾರಿಗಳು ಗಂಭೀರ ಪ್ರಯತ್ನ ಮಾಡಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರಗಳು ವಿತರಣೆಯಾಗಬೇಕು. ನಿವೇಶನ ರಹಿತ ದಲಿತ ಮತ್ತು ಬಡ ಜನರಿಗೆ ಸರ್ಕಾರ ಭೂಮಿ ನೀಡಬೇಕು. ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಒತ್ತುವರಿಯಾಗಿರುವ ಮತ್ತು ಭೂ ಕಬಳಿಕೆದಾರರ ಸ್ವತ್ತಾಗಿರುವ ಭೂಮಿಯನ್ನು ತೆರವುಗೊಳಿಸಿ ದಲಿತರಿಗೆ ನೀಡಬೇಕು. ಈ  ಬಗ್ಗೆ ಗಂಭೀರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
7 ದಿನಗಳ ಗಡುವು: ತಾಲೂಕಿನಲ್ಲಿ ಅಕ್ರಮ ಒತ್ತುವರಿಯನ್ನು 7 ದಿನಗಳ ಒಳಗೆ ತೆರವುಗೊಳಿಸಬೇಕು. ತಪ್ಪಿದಲ್ಲಿ ಈ ಬಗ್ಗೆ ಸಂಘಟನೆಯ ವತಿಯಿಂದ ವ್ಯಾಪಕ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ನಂತರ ತಹಸೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಖಾಸಿಂ ಸಾಬ್, ಪ್ರಧಾನ ಕಾರ್ಯದರ್ಶಿ ಎಚ್.ಶ್ರೀನಿವಾಸ್, ಮುಖಂಡರಾದ ಸಂತೋಷ್ ಕಾಟಪ್ಪ, ನಾರಾಯಣಸ್ವಾಮಿ, ಸೈಯದ್ ಅಜ್ಮಲ್, ಪಟಾಪಟ್ ಸುರೇಶ್,ಸುಭಾಶ್, ಲಕ್ಷ್ಮೀನರಸಿಂಹ ಸೇರಿದಂತೆ ಅನೇಕರು ಸಂಘಟನೆಯ ವಿವಿಧ ಘಟಕಗಳ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

ದೇವನಹಳ್ಳಿ ಬಳಿ ರೈಲಿಗೆ ಸಿಕ್ಕಿ ಬೈಕ್ ಸವಾರ ಸಾವು
ದೇವನಹಳ್ಳಿ: ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಚಲಿಸುತ್ತಿದ್ದ ರೈಲಿಗೆ ದೇವನಹಳ್ಳಿ ಸಣ್ಣೆ ಅಮಾನಿಕೆರೆ ಗೇಟ್ ಬಳಿ ಸೋಮವಾರ ಸಂಜೆ 4 ಗಂಟೆ ಸಮಯದಲ್ಲಿ ಬೈಕ್ ಸವಾರ ಸಿಕ್ಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸಾವಿಗೀಡಾದ ವ್ಯಕ್ತಿ ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಬಳಿಯ ಕಟ್ಟಿಗೇನಹಳ್ಳಿ ಗ್ರಾಮದ ಮಧುಕುಮಾರ್ (25)ಎಂದು ತಿಳಿದು ಬಂದಿದೆ. ಬೈಕಿನ ಹಿಂಭಾಗದಲ್ಲಿ ಕುಳಿತಿದ್ದ ವಿಜಯಪುರದ ಮುನಿರಾಜು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದು ಕಾಲಿಗೆ ಸ್ವಲ್ಪ ಪೆಟ್ಟಾಗಿದ್ದು ಇಲ್ಲಿನ ಶಿರಡಿ ಸಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement