ಜೆಡಿಎಸ್ ಮುಖಂಡ ಎನ್. ಕುಮಾರ್ ಬಿಜೆಪಿಗೆ ಸೇರ್ಪಡೆ
ಹೊಸಕೋಟೆ: ತಾಲೂಕಿನ ಜೆಡಿಎಸ್ ಮುಖಂಡ ಎನ್.ಕುಮಾರ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕಳೆದ ಎರಡು ವಿಧಾನಸಭಾ ಚುನಾವಣೆ ಗಳಲ್ಲಿ ಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿ ಹೊಸಕೋಟೆಯಿಂದ
ಸ್ಪರ್ಧಿಸಿದ್ದರು. ಸೇರ್ಪಡೆ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತವಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಸದೃಢವಾದ ರಾಷ್ಟ್ರ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ. ರಾಷ್ಟ್ರದೆಲ್ಲೆಡೆ ನರೇಂದ್ರ ಮೋದಿ ಪರವಾಗಿ ಮತದಾರರ ಒಲವು ಹೆಚ್ಚಾಗಿದೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾದ ಕಾರಣ ಬೇಸತ್ತು ಜೆಡಿಎಸ್ ತೊರೆದಿದ್ದು ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡರ ಗೆಲವಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು. ಟಿಎಪಿಸಿಎಎಸ್ ಅಧ್ಯಕ್ಷ ಟಿ.ಸೊಣ್ಣಪ್ಪ, ನಿರ್ದೇಶಕ ಬಚ್ಚೇಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಸಿ.ಮುನಿಯಪ್ಪ, ಮುಖಡರಾದ ಬಿ.ವಿ. ಬೈರೇಗೌಡ, ಎಸ್. ನಾಗರಾಜ್, ಎಚ್.ಎ.ನಟರಾಜ್ ಹಾಜರಿದ್ದರು.