ಮಹಿಳೆ ಆತ್ಮಹತ್ಯೆ
ಸೂಲಿಬೆಲೆ: ಹೊಸಕೋಟೆ ತಾ.ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪ್ರತಿಭಾ(29) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.ಪಿಲ್ಲಗುಂಪೆಯಲ್ಲಿ ವಾಸವಾಗಿದ್ದ ಈಕೆ ಇಲ್ಲಿನ ಗಾರ್ಮೆಂಟ್ ಒಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು.ಈಕೆಯ ಇಬ್ಬರ ಮಕ್ಕಳ ಶಾಲೆಗೆ ರಜೆಯಿದ್ದ ಕಾರಣ ಸಂಬಂಧಿಕರ ಮನೆಗೆ ಹೋಗಿದ್ದರೆ, ಗಂಡ ಕಾರ್ಯನಿಮಿತ್ತ ಬುಧವಾರ ರಾತ್ರಿ ಮನೆಗೆ ಬಂದಿರಲಿಲ್ಲ ಎನ್ನಲಾಗಿದೆ. ಈ ವೇಳೆ ಈಕೆ ಮನೆಯಲ್ಲಿ ಪ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈಕೆಗೆ ಆಗಾಗ್ಗೆ ಬರುತ್ತಿದ್ದ ತಲೆ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬದವರು ದೂರು ನೀಡಿದ್ದು ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವಕ ಸಾವು
ಸೂಲಿಬೆಲೆ: ಇಲ್ಲಿಗೆ ಸಮೀಪದ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಈತ ಚಿಕಿತ್ಸೆ ಫಲಕಾಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ನಿವಾಸಿ ಸಂದೀಪ್ ಕುಮಾರ್(18).ಇತ್ತಿಚ್ಚೇಗಷ್ಟೇ ಪಿಯುಸಿ ಪರೀಕ್ಷೆ ಬರೆದಿದ್ದ. ಫಲಿತಾಂಶ ಬರುವವರಿಗೂ ಮನೆಯಲ್ಲಿದ್ದು ಸಮಯ ಹಾಳು ಮಾಡುವದು ಬೇಡ ಎಂದು ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಮೂರು ಸೇರಿ ದಿನವಾಗಿತ್ತು. ಬುಧವಾರ ರಾತ್ರಿ ಕೆಲಸ ಮಾಡುತ್ತಿ ವೇಳೆ ಹಿಂಬದಿ ಚಲನೆಯಿಂದ ಬಂದ ಲಾರಿ ಸಂದೀಪ್‌ಕುಮಾರ್ ಮೇಲೆ ಹರಿದಿದೆ.ತೀವ್ರ ಗಾಯಗೊಂಡ ಈತನನ್ನು ಸ್ಥಳೀಯರು ತಕ್ಷಣ ಆಸ್ಪತ್ರೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.