ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿನೂತನ ಕಾರ್ಯಕ್ರಮಗಳಿಂದ ಮತದಾನಕ್ಕೆ ಪ್ರೇರಣೆ

Srinivasa Murthy VN
Updated On : 11 Apr 2014, 1:10 am

ಕ.ಪ್ರ.ವಾರ್ತೆ ರಾಮನಗರ ಏ.100
ಪ್ರತಿಯೊಬ್ಬ ಸಾರ್ವಜನಿಕನು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲಿ ಎಂಬ ಉದ್ದೇಶದಿಂದ ಮತದಾನ ಮಾಡುವಂತೆ ಪ್ರಜೆಗಳಿಗೆ ಭಾರತ ಚುನಾವಣಾ ಆಯೋಗವು ಜಾಗೃತಿ ಮೂಡಿಸುತ್ತಿದೆ. ಈ ಸಂಬಂಧ ಜಿಲ್ಲಾ ಸ್ವೀಪ್ ಸಮಿತಿಯು ಹಲವಾರು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾರರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದೆ ಎಂದು ಜಿ.ಪಂ. ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಂ.ವೆಂಕಟೇಶ್ ಹೇಳಿದರು.
ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ತೋಟಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ವಾರ್ತಾ ಇಲಾಖೆ ಆಯೋಜಿಸಿದ್ದ ಪುಷ್ಪ ರಂಗೋಲಿ ಪ್ರದರ್ಶನ ಹಾಗೂ ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.
ಭಾರತವು ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಮತದಾನ ಮಾಡುವ ಹಕ್ಕು ನೀಡಿದೆ. ನಾವು ಇದನ್ನು ಸಮರ್ಪಕ ರೀತಿಯಲ್ಲಿ ಚಲಾವಣೆ ಮಾಡುವ ಮೂಲಕ ಉತ್ತಮ ವ್ಯಕ್ತಿಯನ್ನು ಚುನಾಯಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಪ್ರತಿಯೊಬ್ಬ ದೇಶವಾಸಿಯೂ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ. ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು. ಮತದಾನದ ಬಗ್ಗೆ ನಿರುತ್ಸಾಹ ಹೊಂದಿ ಮತ ಚಲಾವಣೆ ಮಾಡದಿದ್ದಲ್ಲಿ ಪದೇ ಪದೇ ಚುನಾವಣೆಗಳು ಎದುರಾಗಿ ತೆರಿಗೆ ಹಣ ಪೋಲಾಗಲಿದೆ ಎಂದರು.

ರಂಗೋಲಿ ಸ್ಪರ್ಧೆ
ಸುಮಾರು 45ಕ್ಕೂ ಹೆಚ್ಚು ಸ್ಪರ್ಧಿಗಳು ಪುಷ್ಪ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ ಬಹುತೇಕರು ವಿದ್ಯಾರ್ಥಿಗಳಾಗಿದ್ದರು. ಪುಷ್ಪಗಳ ಮೂಲಕ ಬಿಡಿಸಿದ್ದ ವಿಶಿಷ್ಟ ರೀತಿಯ ರಂಗೋಲಿಯಲ್ಲಿ ಘೋಷ ವಾಕ್ಯಗಳು ರಾಷ್ಟ್ರದ ಪ್ರಜಾಪ್ರಭುತ್ವದ ಮಹತ್ವವನ್ನು ಎತ್ತಿ ತೋರಿಸುತ್ತಿದ್ದವು.  ಮತದಾನ ಸುದಿನ ಪ್ರಜಾಪ್ರಭುತ್ವದ ಹಬ್ಬದ ದಿನ. ತಪ್ಪದೇ ಮತದಾನ ಮಾಡಿ, ಕಳಬೇಡ, ಕೊಲಬೇಡ ಈ ಕಾನ್‌ಸೆಪ್ಟ್ ಮರಿಬೇಡ, ಓಟ್ ಮಾಡುವುದಕ್ಕೆ ಹಿಂಜರಿಯಬೇಡ ಇದೇ ನನ್ನ ಬುದ್ಧಿ ನಿಮಗೆ ಗೊತ್ತಾಗಲಿ ಈ ಸುದ್ದಿ. ನೇತ್ರದಾನ ಮಾಡಿ ದೃಷ್ಟಿ ಕೊಡಿ  ರಕ್ತದಾನ ಮಾಡಿ ಜೀವ ಉಳಿಸಿ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಬಲಪಡಿಸಿ ಇತ್ಯಾದಿ ಘೋಷ ವಾಕ್ಯಗಳು ನೋಡುಗರ ಮನಸೆಳೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement